Live

ಅನರ್ಹ ಶಾಸಕರ ಅರ್ಜಿ ವಿಚಾರಣೆ ಅಂತ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂ

ನವದೆಹಲಿ, ಅಕ್ಟೋಬರ್ 24: ಕರ್ನಾಟಕದ 17 ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದೆ. ಚುನಾವಣಾ ಆಯೋಗ ಈಗಾಗಲೇ 15 ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ್ದು, ಸುಪ್ರೀಂ ಆದೇಶ ಕುತೂಹಲಕ್ಕೆ ಕಾರಣವಾಗಿದೆ.

ಹಲವು ಮುಂದೂಡಿಕೆಗಳ ಬಳಿಕ ನಿನ್ನೆ ಮತ್ತು ಇಂದು ಅನರ್ಹ ಶಾಸಕರ ಕುರಿತು ವಿಚಾರಣೆ ನಡೆಯುತ್ತಿದೆ. 14 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರು ತಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್ ಆದೇಶವನ್ನು ಸುಪ್ರೀಂನಲ್ಲಿ ಪ್ರಶ್ನೆ ಮಾಡಲಾಗಿದೆ.

ಅನರ್ಹ ಶಾಸಕರು ದೆಹಲಿಯಲ್ಲಿದ್ದು, ವಕೀಲರ ಜೊತೆ ನಿರಂತರ ಮಾತುಕತೆಯನ್ನು ನಡೆಸುತ್ತಿದ್ದಾರೆ. ಸ್ಪೀಕರ್ ಆದೇಶವನ್ನು ನ್ಯಾಯಾಲಯ ಎತ್ತಿ ಹಿಡಿಯಲಿದೆಯೇ?, ವಜಾಗೊಳಿಸಲಿದೆಯೇ? ಎಂಬುದು ಕುತೂಹಲ ಮೂಡಿಸಿದೆ.

Disqualified MLAs Application Hearing in Supreme Court LIVE Updates In Kannada

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ ಅನರ್ಹ ಶಾಸಕರು ಸ್ಪೀಕರ್ ಆದೇಶ ವಜಾಗೊಂಡರೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಲಿದ್ದಾರೆ. ಚುನಾವಣಾ ಆಯೋಗಕ್ಕೆ ನ್ಯಾಯಾಲಯ ಯಾವ ಸೂಚನೆ ನೀಡಲಿದೆ ಎಂದು ಕಾದು ನೋಡಬೇಕು.

ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಬಗ್ಗೆ ಕ್ಷಣ-ಕ್ಷಣದ ಮಾಹಿತಿಯನ್ನು 'ಒನ್ ಇಂಡಿಯಾ ಕನ್ನಡ' ಈ ಪುಟದಲ್ಲಿ ನೀಡಲಿದೆ.

Oct 25, 2019, 3:05 pm IST

ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣವಾಗಿದ್ದು, ಹತ್ತು ದಿನಗಳ ಬಳಿಕ ಅಂದರೆ ನವೆಂಬರ್ 5 ಅಥವಾ ನವೆಂಬರ್ ಮೊದಲ ವಾರದಲ್ಲಿ ಆದೇಶ ಹೊರಬೀಳಲಿದೆ.
Oct 25, 2019, 3:01 pm IST

ಅನರ್ಹ ಶಾಸಕರ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಪೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.
Oct 25, 2019, 2:45 pm IST

ಅನರ್ಹ ಶಾಸಕರ ಪ್ರಕರಣವನ್ನು ಇಡಿಯಾಗಿ ಪರಿಗಣಿಸುವ ಜೊತೆಗೆ ಪ್ರತಿಯೊಬ್ಬ ಶಾಸಕನ ಪ್ರಕರಣವನ್ನು ಪ್ರತ್ಯೇಕವಾಗಿಯೂ ಪರಿಗಣಿಸಬೇಕೆಂದು ಸುಧಾಕರ್ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು.
Oct 25, 2019, 2:40 pm IST

ಸುಧಾಕರ್ ಶಾಸಕಾಂಗ ಸಭೆಗೆ ಗೈರಾಗಿ ವ್ಹಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಿ ಸ್ಪೀಕರ್ ಅವರನ್ನು ಅನರ್ಹ ಮಾಡಿದ್ದರು. ಆದರೆ ಶಾಸಕಾಂಗ ಸಭೆಗೆ ವ್ಹಿಪ್ ಜಾರಿ ಮಾಡಲಾಗಿರಲಿಲ್ಲ ಎಂದು ಸುಧಾಕರ್ ಪರ ವಕೀಲ ಹೇಳಿದರು. ವಾದವನ್ನು ಬೇಗ ಮುಗಿಸುವಂತೆ ನ್ಯಾಯಪೀಠವು ಸೂಚಿಸಿತು.
Oct 25, 2019, 2:37 pm IST

ಅನರ್ಹ ಶಾಸಕರ ಸುಧಾಕರ್ ಪರವಾಗಿ ವಾದ ಮಂಡನೆ ಆರಂಭವಾಗಿದ್ದು, ವಕೀಲ ಆರ್ಯ ಸುಂದರಂ ವಾದ ಆರಂಭಿಸಿದ್ದಾರೆ. 'ಸುಧಾಕರ್ ಗುಂಪಿನಲ್ಲಿ ಬಂದು ರಾಜೀನಾಮೆ ನೀಡಿಲ್ಲ, ಮುಂಬೈಗೂ ಹೋಗಿಲ್ಲ, ಅವರು ಕ್ಷೇತ್ರದಲ್ಲೇ ಇದ್ದೆ, ಹಾಗಿದ್ದರೂ ಅವರನ್ನು ಅನರ್ಹ ಮಾಡಲಾಗಿದೆ' ಎಂದು ಸುಧಾಕರ್ ಪರ ವಕೀಲರು ವಾದ ಮಂಡಿಸಿದರು.
Oct 25, 2019, 2:33 pm IST

ಅನರ್ಹ ಶಾಸಕರು ಮತ್ತೆ ಚುನಾವಣೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗಲು ನಮ್ಮ ಅಭ್ಯಂತರವಿಲ್ಲ ಎಂದು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಹೇಳಿದೆ.
Oct 25, 2019, 2:28 pm IST

ಅನರ್ಹತೆಯು ಶಾಸಕ ಸ್ಥಾನದಿಂದ ಅಮಾನತು ಮಾಡಲು ಸೂಚನೆಯೇ ಹೊರತು, ಚುನಾವಣೆಗೆ ಸ್ಪರ್ಧಿಸಬಾರದು ಎಂಬುದಲ್ಲ ಎಂದು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ತಿಳಿಸಿದೆ.
Oct 25, 2019, 2:27 pm IST

ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸಬಹುದು ಎಂದು ಕೇಂದ್ರ ಚುನಾವಣೆ ಆಯೋಗ ಪರೋಕ್ಷವಾಗಿ ತನ್ನ ಅಭಿಪ್ರಾಯವನ್ನು ಸುಪ್ರೀಂಕೋರ್ಟ್‌ನಲ್ಲಿ ತಿಳಿಸಿದೆ.
Oct 25, 2019, 2:24 pm IST

ಆದರೆ ಕಾಂಗ್ರೆಸ್ ಪರ ವಕೀಲ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಆರ್.ಶಂಕರ್ ಸ್ವತಃ ಪತ್ರ ಬರೆದು ವಿಲೀನಕ್ಕೆ ಕೇಳಿದ್ದರು. ಹಾಗಾಗಿ ಅವರನ್ನು 10ನೇ ಶೆಡ್ಯೂಲ್ ಅನ್ವಯ ಅಮಾನತ್ತು ಮಾಡಲಾಗಿದೆ ಎಂದು ವಾದಿಸಿದರು.
Oct 25, 2019, 2:20 pm IST

ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡಿದ ನಂತರ ತಮ್ಮ ಕೆಪಿಜೆಪಿ ಪಕ್ಷವನ್ನು ವಿಲೀನ ಮಾಡುವಂತೆ ಪತ್ರ ಬರೆದಿದ್ದರು. ಅದಕ್ಕೆ ಅವಶ್ಯ ದಾಖಲೆಗಳನ್ನು ಆಗಿನ ಸ್ಪೀಕರ್ ಕೇಳಿದ್ದರು. ಆದರೆ ಆರ್.ಶಂಕರ್ ಆ ದಾಖಲೆಗಳನ್ನು ಇನ್ನೂ ಕೊಟ್ಟಿರಲಿಲ್ಲ. ಹಾಗಾಗಿ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲವೆಂದು ಆರ್.ಶಂಕರ್ ಪರ ವಕೀಲರು ವಾದಿಸಿದರು.
Oct 25, 2019, 2:18 pm IST

ಅನರ್ಹ ಶಾಸಕ ಆರ್.ಶಂಕರ್ ಪರವಾಗಿ ಸ್ಪೀಕರ್ ಕಚೇರಿ ಸುಪ್ರೀಂನಲ್ಲಿ ಹೇಳಿಕೆ ನೀಡಿದೆ. ಆರ್.ಶಂಕರ್ ಅವರ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡುವ ಕಾರ್ಯ ಪೂರ್ಣವಾಗಿರಲಿಲ್ಲ. ಕೆಪಿಜೆಪಿ ಕಾಂಗ್ರೆಸ್‌ ಜೊತೆ ವಿಲೀನವಾಗಿರುವುದಕ್ಕೆ ದಾಖಲೆಗಳಿಲ್ಲ ಎಂದು ಸ್ಪೀಕರ್ ಕಚೇರಿಯೇ ಸುಪ್ರೀಂ ನಲ್ಲಿ ಹೇಳಿದೆ.
Oct 25, 2019, 2:02 pm IST

ದೇವದತ್ ಕಾಮತ್ ಅವರು ವಾದ ಅಂತ್ಯವಾಗಿದ್ದು, ಭೋಜನ ವಿರಾಮದ ವಿಚಾರಣೆ ಮುಂದುವರೆಯಲಿದೆ.
Oct 25, 2019, 1:58 pm IST

ಶ್ರೀಮಂತ್ ಪಾಟೀಲ್ ಅವರನ್ನೇ ಗುರಿ ಮಾಡಿ ಎದುರು ವಾದ ಸಲ್ಲಿಸಿದ ದೇವದತ್ ಕಾಮತ್ ಅವರು ತಮ್ಮ ವಾದ ಅಂತ್ಯಗೊಳಿಸಿದ್ದಾರೆ.
Oct 25, 2019, 1:57 pm IST

ಶ್ರೀಮಂತ್ ಪಾಟೀಲ್ ಸ್ಪೀಕರ್ ಅವರಿಗೆ ಕಳುಹಿಸಿದ್ದ ಪತ್ರದ ಸೂಕ್ತವಾಗಿರಲಿಲ್ಲ. ಅವರು ಕಳುಹಿಸಿದ್ದ ಆರೋಗ್ಯ ವರದಿಯಲ್ಲಿ ಆಸ್ಪತ್ರೆಯ ಅಧಿಕಾರಿಗಳ ಸಹಿಯೇ ಇರಲಿಲ್ಲ- ದೇವದತ್ ಕಾಮತ್
Oct 25, 2019, 1:56 pm IST

ಶ್ರೀಮಂತ್ ಪಾಟೀಲ್ ಅವರನ್ನು ವ್ಹಿಪ್ ಉಲ್ಲಂಘನೆ ಸಂಬಂಧ ಬಂದ ದೂರಿನ ಅನ್ವಯ ಅನರ್ಹ ಮಾಡಲಾಗಿದೆ- ದೇವದತ್‌ ಕಾಮತ್
Oct 25, 2019, 1:20 pm IST

ಶ್ರೀಮಂತ್ ಪಾಟೀಲ್ ಏಕಾ-ಏಕಿ ಯಾವ ಮಾಹಿತಿ ನೀಡದೆ ಚೆನ್ನೈ ಗೆ ಹೋದರು, ಅಲ್ಲಿಂದ ವಿಮಾನದಲ್ಲಿ ಮುಂಬೈಗೆ ಹೋದರು. ಅವರು ಆರೋಗ್ಯ ಸಮಸ್ಯೆಯಿಂದ ಹಾಗೆ ಮಾಡಿದ್ದಲ್ಲ ಎಂಬುದು ಸ್ಪಷ್ಟ- ದೇವದತ್ ಕಾಮತ್
Oct 25, 2019, 1:07 pm IST

ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಆರೋಪಕ್ಕೆ ಕಾಂಗ್ರೆಸ್ ಪರ ವಾದ ಮಂಡಿಸಿದ ದೇವದತ್ತ ಕಾಮತ್, ಶ್ರೀಮಂತ ಪಾಟೀಲ್ ಅವರು ಇದ್ದಕ್ಕಿದ್ದಂತೆ ಮುಂಬೈ ಗೆ ಹೋಗಿಬಿಟ್ಟರು. ಅವರು ಮುಂಬೈ ನ ಸಂಜೀವಿನಿ ಆಸ್ಪತ್ರೆಗೆ ದಾಖಲಾದರು. ಇದು ಅನುಮಾನ ಮೂಡಿಸಿತು. - ದೇವದತ್ತ ಕಾಮತ್
Oct 25, 2019, 1:04 pm IST

ಸ್ಪೀಕರ್ ಅವರ ನಿರ್ಧಾರ ಸರಿಯಾಗಿದೆ ಎಂದು ವಾದಿಸಿದ ಕಪಿಲ್ ಅವರು ವಾದ ಅಂತ್ಯಗೊಳಿಸಿದ್ದು, ಈಗ ಮತ್ತೊಬ್ಬ ವಕೀಲ ದೇವದತ್ತ ಕಾಮತ್ ವಾದ ಆರಂಭಿಸಿದ್ದಾರೆ.
Oct 25, 2019, 12:55 pm IST

ರಾಜೀನಾಮೆ ಅಂಗೀಕಾರ ಮಾಡಿದರೆ ಅನರ್ಹತೆ ಪ್ರಶ್ನೆ ಬರುತ್ತಿರಲಿಲ್ಲ, ಅವರ ರಾಜೀನಾಮೆ ಪಕ್ಷಾಂತರ ಮಾಡುವ ಯತ್ನ ಎಂದು ಮನಗಂಡು ಅವರ ರಾಜೀನಾಮೆ ಅಂಗೀಕರಿಸದೆ ಅನರ್ಹರನ್ನಾಗಿ ಮಾಡಲಾಗಿದೆ- ಕಪಿಲ್ ಸಿಬಲ್
Oct 25, 2019, 12:54 pm IST

ರಾಜೀನಾಮೆ ನೀಡಲು ಶಾಸಕರೆಲ್ಲರು ಒಟ್ಟಿಗೆ ಗುಂಪಾಗಿ ಬಂದಿದ್ದರು, ಅವರು ರಾಜ್ಯಪಾಲರ ಬಳಿಗೂ ಗುಂಪಾಗಿ ಹೋಗಿದ್ದರು. ಅವರು ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸಿದ್ದರು ಅದೂ ಒಟ್ಟಾಗಿ, ಇದೆಲ್ಲವೂ ಅನುಮಾನ ಸ್ಪೀಕರ್ ಅವರಲ್ಲಿ ಅನುಮಾನ ಹುಟ್ಟಿಸಿತು- ಕಪಿಲ್ ಸಿಬಲ್
Oct 25, 2019, 12:54 pm IST

ರಾಜೀನಾಮೆ ನೀಡಲು ಶಾಸಕರೆಲ್ಲರು ಒಟ್ಟಿಗೆ ಗುಂಪಾಗಿ ಬಂದಿದ್ದರು, ಅವರು ರಾಜ್ಯಪಾಲರ ಬಳಿಗೂ ಗುಂಪಾಗಿ ಹೋಗಿದ್ದರು. ಅವರು ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸಿದ್ದರು ಅದೂ ಒಟ್ಟಾಗಿ, ಇದೆಲ್ಲವೂ ಅನುಮಾನ ಸ್ಪೀಕರ್ ಅವರಲ್ಲಿ ಅನುಮಾನ ಹುಟ್ಟಿಸಿತು- ಕಪಿಲ್ ಸಿಬಲ್
Oct 25, 2019, 12:49 pm IST

ಸ್ಪೀಕರ್ ಸರ್ಕಾರ ಉಳಿಸಿಕೊಳ್ಳುವ ಯತ್ನಕ್ಕೆ ಕೈ ಹಾಕಬಹುದೆ. ಸ್ಪೀಕರ್ ತಟಸ್ಥವಾಗಿದ್ದು ನ್ಯಾಯದ ಪರ ಇರಬೇಕು ತಾನೆ: ನ್ಯಾಯಮೂರ್ತಿ ಪ್ರಶ್ನೆ ಮಾಡಿದರು. ಈ ಬಗ್ಗೆ ವಾದದ ಅಂತಿಮ ಹಂತದಲ್ಲಿ ಮಾತನಾಡುವುದಾಗಿ ಕಪಿಲ್ ಸಿಬಲ್ ಹೇಳಿದರು.
Oct 25, 2019, 12:45 pm IST

ಸ್ಪೀಕರ್ ಸರ್ಕಾರ ಉಳಿಸಿಕೊಳ್ಳುವ ಯತ್ನಕ್ಕೆ ಕೈ ಹಾಕಬಹುದೆ. ಸ್ಪೀಕರ್ ತಟಸ್ಥವಾಗಿದ್ದು ನ್ಯಾಯದ ಪರ ಇರಬೇಕು ತಾನೆ: ನ್ಯಾಯಮೂರ್ತಿ
Oct 25, 2019, 12:42 pm IST

ಸ್ಪೀಕರ್ ಏಳು ದಿನದ ನೊಟೀಸ್ ನೀಡಲಿಲ್ಲವೆಂದು ರಾಜೀನಾಮೆ ಸ್ವೀಕರಿಸುವ ಕಾರ್ಯವಿಧಾನವನ್ನು ಅಸಿಂಧು ಅಥವಾ ಸರಿ ಇಲ್ಲವೆನ್ನುವಂತಿಲ್ಲ-ಕಪಿಲ್ ಸಿಬಲ್
Oct 25, 2019, 12:37 pm IST

ಶಾಸಕರು ರಾಜೀನಾಮೆ ನೀಡಿ ಅವರ ಕ್ಷೇತ್ರಗಳಿಗೆ ಹೋಗಬೇಕಿತ್ತು ಆರೆ ಅದ್ಯಾವುದೂ ಮಾಡದೆ ಮುಂಬೈಗೆ ಹಾರಿದ್ದರು: ಕಪಿಲ್ ಸಿಬಲ್
Oct 25, 2019, 12:33 pm IST

ಕಲಾಪ ನಡೆಯುವ ವೇಳೆ ಬಿಜೆಪಿಯ ಅಶ್ವತ್ಥ ನಾರಾಯಣ ಸೇರಿ ಹಲವರು ಅನರ್ಹ ಶಾಸಕರ ಜೊತೆ ಕಾಣಿಸಿಕೊಂಡಿದ್ದರು. ಬಿಜೆಪಿಗೆ ಸೇರಿದ ಸಂತೋಷ್ ಕೂಡ ಐಷಾರಾಮಿ ಹೋಟೆಲ್‌ನಲ್ಲಿ ಅವರ ಜೊತೆ ಇದ್ದರು, ಇಷ್ಟೆಲ್ಲಾ ನಡೆಯುತ್ತಿರುವಾಗ ಸ್ಪೀಕರ್ ಸುಮ್ಮನಿರಬೇಕಿತ್ತಾ : ಕಪಿಲ್ ಸಿಬಲ್ ಪ್ರಶ್ನೆ
Oct 25, 2019, 12:28 pm IST

ರಾಜೀನಾಮೆ ನೀಡಿದ ತಕ್ಷಣ ಅನರ್ಹ ಶಾಸಕರು ವಿಮಾನದಲ್ಲಿ ಮುಂಬೈಗೆ ಹೋಗಿದ್ದರು, ತಕ್ಷಣವಾಗಿ ಹೋಗುವ ಅವಶ್ಯಕತೆ ಏನಿದ್ದು, ಆ ವಿಮಾನ ಯಾರಿಗೆ ಸೇರಿದ್ದು ಎನ್ನುವುದನ್ನು ಕೂಡ ಗಮನಸಿಬೇಕಿದೆ ಎಂದು ಕಪಿಲ್ ಸಿಬಲ್ ವಾದ ಕೋರ್ಟ್ ಮುಂದಿಟ್ಟರು.
Oct 25, 2019, 12:24 pm IST

ಜುಲೈ 11ರಂದು ಮೂರು ಮಂದಿ ಶಾಸಕರು ರಾಜೀನಾಮೆ ನೀಡಿದ್ದರು. ಎಂಟು ಮಂದಿ ಜುಲೈ ಆರರಂದು ರಾಜೀನಾಮೆ ನೀಡಿದ್ದರು. ಅನರ್ಹ ಶಾಸಕರ ವಿಚಾರಣೆ ನಡೆಯುತ್ತಿದೆ , ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಮುಂದೂಡುವುದು ಸರಿಯಲ್ಲ ಎಂದು ಕಪಿಲ್ ಸಿಬಲ್ ವಾದ ಮಂಡನೆ ಮಾಡಿದ್ದಾರೆ.
Oct 25, 2019, 12:19 pm IST

'ಸಾಂವಿಧಾನಿಕವಾಗಿ ಒಂದು ಪ್ರಕರಣವನ್ನು ಮತ್ತೊಂದು ಪ್ರಕರಣಕ್ಕೆ ಸೇರಿಸಲು ಸಾಧ್ಯವಿಲ್ಲ, ರಾಜೀನಾಮೆ ಮತ್ತು ಅನರ್ಹತೆಯನ್ನು ಒಟ್ಟಿಗೆ ನೋಡುವಂತಿಲ್ಲ': ಕಪಿಲ್ ಸಿಬಲ್
Oct 25, 2019, 12:11 pm IST

ರಾಜೀನಾಮೆ ನೀಡಿ ಬೇರೆ ಪಕ್ಷದಿಂದ ಆಯ್ಕೆಯಾದರೆ ಏನು ಮಾಡಲು ಸಾಧ್ಯ, ಇಲ್ಲದಿದ್ದರೆ ಅನರ್ಹತೆಗೆ ಅರ್ಥವೇ ಬರುವುದಿಲ್ಲ: ಕಪಿಲ್ ಸಿಬಲ್ ವಾದ ಮಂಡನೆ
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+