ಚಾಂದಿನಿ ಚೌಕ್ ನ ಕಪಿಲ್ ಸಿಬಲ್ 'ಮನೆ' ಕಥೆ

ನವದೆಹಲಿ,ಜೂ.25: ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಇಲ್ಲಿನ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಕಳೆದೆರಡು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಚಾಂದಿನಿ ಚೌಕ್ ನಲ್ಲಿ ಜಯಭೇರಿ ಬಾರಿಸಿದ ಡಾ. ಹರ್ಷವರ್ಧನ್ ಹಾಗೂ ಸೋಲುಂಡ ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಚರ್ಚೆಗೆ ಗ್ರಾಸವಾಗಿದ್ದಾರೆ. ಹರ್ಷವರ್ಧನ್ ಅವರ ಕಾಂಡೋಮ್ ಹೇಳಿಕೆ ಹಾಗೂ ಕಪಿಲ್ ಸಿಬಲ್ ಅವರ 'ಮನೆ'ಕಥೆ ಈಗ ಸಾಮಾಜಿಕ ಜಾಲ ತಾಣ ಟ್ವಿಟ್ಟರಿನಲ್ಲಿ ಸದ್ದು ಮಾಡುತ್ತಿದೆ.

ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಅವರು ಸದ್ಯದಲ್ಲೇ ದೆಹಲಿಯ ಲ್ಯುಟೆನ್ಸ್‌ನಲ್ಲಿರುವ ವೈಭವೋಪೇತ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಮನೆಗೆ ಅವರು ಮಾಸಿಕ ಬಾಡಿಗೆ ಬರೋಬ್ಬರಿ 16 ಲಕ್ಷ ಪಾವತಿಸುತ್ತಿದ್ದಾರೆ ಎಂಬುದು ಸುದ್ದಿ.

ಜೋರ್ ಬಾಗ್‌ನಲ್ಲಿ 1,250 ಚದರ ಯಾರ್ಡ್‌ನಲ್ಲಿ ನಿರ್ಮಿಸಲಾಗಿರುವ ಈ ಬಂಗಲೆ ದೆಹಲಿ ಮೂಲದ ಉದ್ಯಮಿ ಸಿದ್ಧಾರ್ಥ್ ಸರೀನ್‌ಗೆ ಸೇರಿದ್ದು. ಇದರ ಬಾಡಿಗೆ ಬಗ್ಗೆ ಸರೀನ್ ಆಗಲೀ, ಸಿಬಲ್ ಆಗಲೀ ಬಾಯಿಬಿಟ್ಟಿಲ್ಲ. ಆದರೆ ಮೂಲಗಳ ಪ್ರಕಾರ, ಸರೀನ್ ಕೇಳಿದ್ದು 18 ಲಕ್ಷ. ಸಿಬಲ್ ನೀಡಲು ಒಪ್ಪಿದ್ದು 16 ಲಕ್ಷ. ಒಟ್ಟಾರೆ ದೆಹಲಿಯಲ್ಲಿನ ದುಬಾರಿ ಬಾಡಿಗೆ ಮನೆಗಳ ಪೈಕಿ ಇದೂ ಒಂದೆನಿಸಿದೆ.

ಈವರೆಗೆ ಸಿಬಲ್ ಅವರು ತೀನ್ ಮೂರ್ತಿ ರಸ್ತೆಯಲ್ಲಿನ ಸರ್ಕಾರಿ ಬಂಗಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಈಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಬಂಗಲೆ ಬಿಟ್ಟುಕೊಡಬೇಕಾಗಿ ಬಂದಿದೆ. ಹೀಗಾಗಿ ಸಿಬಲ್ ದುಬಾರಿ ಮನೆಯತ್ತ ಮುಖಮಾಡಿದ್ದಾರೆ. ಆಗಸ್ಟ್ 1ರೊಳಗೆ ಹಳೇ ಬಂಗಲೆ ಖಾಲಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

ವೈಭವೋಪೇತ ನಿವಾಸದಲ್ಲಿ ವಾಸ್ತವ್ಯ

ವೈಭವೋಪೇತ ನಿವಾಸದಲ್ಲಿ ವಾಸ್ತವ್ಯ

ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ಅವರು ಸದ್ಯದಲ್ಲೇ ದೆಹಲಿಯ ಲ್ಯುಟೆನ್ಸ್‌ನಲ್ಲಿರುವ ವೈಭವೋಪೇತ ನಿವಾಸದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಮನೆಗೆ ಅವರು ಮಾಸಿಕ ಬಾಡಿಗೆ ಬರೋಬ್ಬರಿ 16 ಲಕ್ಷ ಪಾವತಿಸುತ್ತಿದ್ದಾರೆ ಎಂಬುದು ಸುದ್ದಿ.

ಸಿಂಪಲ್ ರಾಜಕಾರಣಿ ಕಪಿಲ್ ಸಿಬಲ್

ಸಿಂಪಲ್ ರಾಜಕಾರಣಿ ಕಪಿಲ್ ಸಿಬಲ್ ಮನೆ ರೆಂಟ್ ಎಷ್ಟು ಗೊತ್ತಾ?

ಭಾರತದ ತಲೆ ಆದಾಯ ಎಷ್ಟಿದೆ ?

ಭಾರತದ ತಲೆ ಆದಾಯ ಎಷ್ಟಿದೆ ? ಕಪಿಲ್ ಸಿಬಲ್ ಮನೆ ಬಾಡಿಗೆ ಎಷ್ಟಿದೆ?

ಚುನಾವಣೆಯಲ್ಲಿ ಖರ್ಚು ವೆಚ್ಚ ಲೆಕ್ಕಾಚಾರ

ಚುನಾವಣೆಯಲ್ಲಿ ಖರ್ಚು ವೆಚ್ಚ ಲೆಕ್ಕಾಚಾರ ಹಾಕಿದರೆ ಆಮ್ ಆದ್ಮಿ ಆಶುತೋಷ್ ಮುಂದಿದ್ದಾರೆ.

ಕೆಲವರು ಇನ್ನೂ ಆಕಾಶ್ ಟ್ಯಾಬ್ಲೆಟ್ ಗಾಗಿ ಕಾದಿದ್ದಾರೆ

ಭಾರತದಲ್ಲಿ ಇನ್ನೂ ಕೆಲವರು ಇನ್ನೂ ಆಕಾಶ್ ಟ್ಯಾಬ್ಲೆಟ್ ಗಾಗಿ ಕಾದಿದ್ದಾರೆ

ಕಪಿಲ್ ಸಿಂಬಲ್ ಆದಾಯ ಎಷ್ಟಿದೆ?

ಕೇಂದ್ರದ ಮಾಜಿ ಸಚಿವ ಕಪಿಲ್ ಸಿಂಬಲ್ ಆದಾಯ ಎಷ್ಟಿದೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+