ಆರ್ಥಿಕ ಸಲಹೆಗಾರನಾಗಿ ಕೃಷ್ಣಮೂರ್ತಿ ಸುಬ್ರಮಣಿಯನ್ ನೇಮಕ

ನವದೆಹಲಿ, ಡಿಸೆಂಬರ್ 7: ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಅವರು ಹುದ್ದೆಯಿಂದ ಹಿಂದಕ್ಕೆ ಸರದಿ ಸುಮಾರು ಆರು ತಿಂಗಳ ಬಳಿಕ ಆ ಸ್ಥಾನಕ್ಕೆ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ನೇಮಿಸಲಾಗಿದೆ.

ಕೃಷ್ಣಮೂರ್ತಿ ಅವರ ಅಧಿಕಾರದ ಅವಧಿ ಮೂರು ವರ್ಷಗಳದ್ದಾಗಿರಲಿದೆ. ಷಿಕಾಗೊ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಜಿನೆಸ್‌ನಿಂದ ಪಿಎಚ್ ಡಿ ಪಡೆದಿರುವ ಕೃಷ್ಭಮೂರ್ತಿ, ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಬೋಧಿಸುತ್ತಿದ್ದಾರೆ.

ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿರುವುದನ್ನು ಸಂಪುಟ ನೇಮಕಾತಿ ಸಮಿತಿಯು (ಎಸಿಸಿ) ಅನುಮೋದಿಸಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

isb professor Krishnamurthy subramanian new chief economic advisor

ಐಐಟಿ-ಐಐಎಂನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಕೃಷ್ಣಮೂರ್ತಿ, ಬ್ಯಾಂಕಿಂಗ್, ಕಾರ್ಪೊರೇಟ್ ಆಡಳಿತ ಮತ್ತು ಆರ್ಥಿಕ ನೀತಿಗಳಲ್ಲಿ ಜಗತ್ತಿನ ಅತ್ಯಂತ ಮುಂಚೂಣಿ ಪರಿಣತರಲ್ಲಿ ಒಬ್ಬರಾಗಿದ್ದಾರೆ.

ಬ್ಯಾಂಕಿಂಗ್, ಕಾನೂನು ಮತ್ತು ಹಣಕಾಸು, ಆವಿಷ್ಕಾರ ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಕಾರ್ಪೊರೇಟ್ ಆಡಳಿತ ಕ್ಷೇತ್ರಗಳಲ್ಲಿ ಅವರು ನಡೆಸಿರುವ ಸಂಶೋಧನಾ ಲೇಖನಗಳು ಜಗತ್ತಿನ ಪ್ರಮುಖ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+