• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸರ್ಜಿಕಲ್ ಸ್ಟ್ರೈಕ್ 2: ಕಂದಹಾರ್ ವಿಮಾನ ಹೈಜಾಕರ್ ಯೂಸಫ್ ಅಜರ್ ಹತ್ಯೆ?

|
   Surgical Strike 2: ಕಂದಹಾರ್ ವಿಮಾನ ಹೈಜಾಕರ್ ಯೂಸಫ್ ಅಜರ್ ಹತ್ಯೆ? | Oneindia Kannada

   ನವದೆಹಲಿ, ಫೆಬ್ರವರಿ 26: ಪಾಕಿಸ್ತಾನದ ಉಗ್ರ ನೆಲೆಯ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಕಂದಹಾರ್ ವಿಮಾನ ಅಪಹರಣದ ತಂಡದಲ್ಲಿದ್ದ ಮೌಲಾನಾ ಯೂಸಫ್ ಅಜರ್ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ.

   ಭಾರತವು ಗಡಿನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಉಗ್ರನೆಲೆ ಮೇಲೆ ದಾಳಿ ನಡೆಸಿತ್ತು. ಈ ಕ್ಯಾಂಪ್ ನಲ್ಲಿ ಮೌಲಾನಾ ಯೂಸಫ್ ಅಜರ್ ಸಹ ಇದ್ದ ಎನ್ನಲಾಗಿದ್ದು, ಕ್ಯಾಂಪ್ ಮೇಲೆ ಸುಮಾರು 1000 ಕೆಜಿಗೂ ಅಧಿಕ ಬಾಂಬ್ ಎಸೆಯಲಾಗಿದ್ದು, ಮುನ್ನೂರಕ್ಕೂ ಹೆಚ್ಚು ಉಗ್ರರು ಹತ್ಯೆಗೊಳಗಾಗಿರಬಹುದು ಎಂದು ಅಂದಾಜಿಸಲಾಗಿದೆ.

   ಉಗ್ರರ ನೆಲೆಗಳನ್ನು ಸೇನೆ ಧ್ವಂಸ ಮಾಡಿದ್ದು ಹೇಗೆ? ರೋಚಕ ಮಾಹಿತಿ

   ಆದ್ದರಿಂದ ಯೂಸಫ್ ಅದೇ ನೆಲೆಯಲ್ಲಿ ಇದ್ದರೆ, ಆತ ಬದುಕುಳಿಯಲು ಸಾಧ್ಯವಿಲ್ಲ. 1999 ರಲ್ಲಿ ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಆಗಮಿಸುತ್ತಿದ್ದ IC-814 ವಿಮಾನವನ್ನು ತಾಲಿಬಾನ್ ಉಗ್ರರು ಹೈಜಾಕ್ ಮಾಡಿ ಅಫಘಾನಿಸ್ತಾನದ ಕಂದಹಾರ್ ಗೆ ತೆಗೆದುಕೊಂಡುಹೋಗಿ ಇಳಿಸಿದ್ದರು. ಈ ವಿಮಾನದಲ್ಲಿದ್ದ 176 ಪ್ರಯಾಣಿಕರನ್ನು ಒತ್ತೆಯಾಳಾಗಿರಿಸಿಕೊಂಡು ಉಗ್ರರು ಕೆಲವು ಭಯೋತ್ಪಾದಕರನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ಭಾರತ ಉಗ್ರರನ್ನು ಬಿಡುಗಡೆ ಮಾಡಿ, ಎಲ್ಲಾ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಕರೆತಂದಿತ್ತು.

   ಬಾಲಕೋಟ್ ಎಲ್ಲಿದೆ? ಲಾಡೆನ್ ಅಡಗುತಾಣದಲ್ಲೇ ಜೆಇಎಂ ಉಗ್ರರು?

   ಹೀಗೆ ವಿಮಾನವನ್ನು ಹೈಜಾಕ್ ಮಾಡಿದ್ದ ತಂಡದಲ್ಲಿದ್ದ ಮೂವರು ಉಗ್ರರಲ್ಲಿ ಅಜರ್ ಸಹ ಒಬ್ಬನಾಗಿದ್ದ. ಆತ ಕರಾಚಿ ಮೂಲದವನಾಗಿದ್ದ, ಉರ್ದು ಮತ್ತು ಹಿಂದಿ ಮಾತನಾಡುತ್ತಿದ್ದ. 2000 ನೇ ಇಸವಿಯಿಂದ ಆತನನ್ನು ಭಾರತ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಹುಡುಕುತ್ತಿತ್ತು.

   English summary
   Kandahar plane hijacker Jaish e Mohmmed terrorist, Maulana Yousuf Azhar was also there in terror camp which was destroyed by Indian air force on Feb 26.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X