• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾಗೆ ಸಡ್ಡೊಡೆಯಲು ಭಾರತದ ಕಾರ್ಯತಂತ್ರ: ಉತ್ಪಾದನೆ ಉತ್ತೇಜಿಸಿ, ಮಾರುಕಟ್ಟೆ ಪಾಲು ಹೆಚ್ಚಿಸಲು ಯೋಜನೆ

|

ನವದೆಹಲಿ, ಆಗಸ್ಟ್‌ 10: ಈಗಾಗಲೇ ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಭಾರತವು ಸ್ವದೇಶಿ ಉತ್ಪಾದನೆಗೆ ಕಂಕಣಬದ್ಧವಾಗಿದ್ದು, ಆಮದು ಕಡಿಮೆ ಮಾಡಿ ರಫ್ತು ಹೆಚ್ಚಿಸಲು ಬೇಕಾಗಿರುವ ಕಾರ್ಯತಂತ್ರವನ್ನು ಹೆಣೆಯುತ್ತಿದೆ. ದೇಸಿ ಉತ್ಪಾದನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದರ ಜೊತೆಗೆ ಎದುರಾಳಿ ಚೀನಾದ ಮಾರುಕಟ್ಟೆ ಪಾಲನ್ನು ಕಸಿದುಕೊಳ್ಳುವ ಪ್ರಯತ್ನದಲ್ಲಿದೆ.

   ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಿಂದ | Oneindia Kannada

   ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಹೆಚ್ಚಿನ ಪಾಲನ್ನು ಹೊಂದಿರುವ ಪ್ರದೇಶಗಳಲ್ಲಿ ಆಯ್ದ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಸರ್ಕಾರ ಯೋಜಿಸುತ್ತಿದೆ ಎಂದು ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.

   18 ವರ್ಷಗಳಲ್ಲಿ ಮೊದಲ ಬಾರಿಗೆ ಆಮದಿಗಿಂತ ರಫ್ತು ಮೌಲ್ಯ ಹೆಚ್ಚಳ

   ಭಾರತದ ಪಾಲನ್ನು ವಿಸ್ತರಿಸುವ ಉದ್ದೇಶ

   ಭಾರತದ ಪಾಲನ್ನು ವಿಸ್ತರಿಸುವ ಉದ್ದೇಶ

   ಭಾರತಕ್ಕೆ ಹೆಚ್ಚು ಆಮದಾಗುವ ವಸ್ತುಗಳನ್ನು ಗುರುತಿಸಿ ದೇಶದಲ್ಲೇ ಉತ್ಪಾದನೆಯನ್ನು ಉತ್ತೇಜಿಸುವುದು ಕೇಂದ್ರ ಸರ್ಕಾರದ ಪ್ರಮುಖ ಕಾರ್ಯತಂತ್ರಗಳಲ್ಲಿ ಒಂದಾಗಿದೆ.

   "ಪೂರ್ವ-ಗುರುತಿಸಲಾದ ಪ್ರದೇಶಗಳಲ್ಲಿ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದು, ಜಂಟಿ ಉದ್ಯಮಗಳನ್ನು ಉತ್ತೇಜಿಸುವುದು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಪಾಲನ್ನು ವಿಸ್ತರಿಸಲು ಸ್ಥಳೀಯ ವ್ಯವಹಾರಗಳಿಗೆ ಬೆಂಬಲ ನೀಡುವುದು ಸರ್ಕಾರದ ಉದ್ದೇಶವಾಗಿದೆ" ಎಂದು ಗಡ್ಕರಿ ಸಮ್ಮೇಳನವೊಂದರಲ್ಲಿ ಹೇಳಿದರು.

   "ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಹೆಚ್ಚಿನ ಪಾಲನ್ನು ಹೊಂದಿರುವ ಕ್ಷೇತ್ರಗಳಲ್ಲಿ ಭಾರತಕ್ಕೆ ಅವಕಾಶವಿದೆ" ಎಂದು ಅವರು ಹೇಳಿದರು.

   ಈಗಾಗಲೇ ಹಲವು ಚೀನಾ ಉತ್ಪನ್ನಗಳ ಮೇಲೆ ನಿಷೇಧ ಹೇರಿದೆ

   ಈಗಾಗಲೇ ಹಲವು ಚೀನಾ ಉತ್ಪನ್ನಗಳ ಮೇಲೆ ನಿಷೇಧ ಹೇರಿದೆ

   ಕಳೆದ ಕೆಲವು ತಿಂಗಳುಗಳಲ್ಲಿ, ಎಲೆಕ್ಟ್ರಾನಿಕ್ಸ್, ವೈದ್ಯಕೀಯ ಸಾಧನಗಳು ಮತ್ತು ಔಷಧೀಯ ಉತ್ಪನ್ನಗಳ ತಯಾರಿಕೆಗೆ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕಗಳನ್ನು ಸರ್ಕಾರ ಘೋಷಿಸಿದ್ದು, ಚೀನಾದ ಉತ್ಪನ್ನಗಳ ಆಮದಿಗೆ ನಿರ್ಬಂಧ ಹೇರಿದೆ.

   ಇತ್ತೀಚೆಗಷ್ಟೇ ರಕ್ಷಣಾ ಸಚಿವಾಲಯವು 101 ವಸ್ತುಗಳ ಪಟ್ಟಿಯನ್ನು ಸಿದ್ದಪಡಿಸಿದ್ದು, ಆಮದು ಪ್ರಮಾಣ ತಗ್ಗಿಸಿ ನಿಷೇಧಿಸುವ ಗುರಿ ಹೊಂದಿದೆ. ಇದರ ಜೊತೆಗೆ ಚೀನಾ ಬಹುಪಾಲು ಮಾರುಕಟ್ಟೆಯ ಮೇಲೂ ಭಾರತ ಕಣ್ಣಿಟ್ಟಿದೆ.

   ಜೂನ್‌ನಲ್ಲಿ ಭಾರತದ ಕಚ್ಚಾ ತೈಲ ಆಮದು ಇಳಿಕೆ: 2015ರ ನಂತರ ಕನಿಷ್ಠ ಮಟ್ಟ

   ಸ್ವದೇಶಿ ಸಶಸ್ತ್ರ ತಯಾರಿಕೆಗೆ ಭಾರತದ ಮನ್ನಣೆ

   ಸ್ವದೇಶಿ ಸಶಸ್ತ್ರ ತಯಾರಿಕೆಗೆ ಭಾರತದ ಮನ್ನಣೆ

   "ಇದು ರಕ್ಷಣೆಯಲ್ಲಿ ಸ್ವಾವಲಂಬನೆಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ಇದು ತಮ್ಮದೇ ಆದ ವಿನ್ಯಾಸ ಮತ್ತು ಅಭಿವೃದ್ಧಿ ಸಾಮರ್ಥ್ಯಗಳನ್ನು ಬಳಸಿಕೊಂಡು ಅಥವಾ ವಿನ್ಯಾಸಗೊಳಿಸಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಭಾರತೀಯ ರಕ್ಷಣಾ ಉದ್ಯಮಕ್ಕೆ ಉತ್ತಮ ಅವಕಾಶವನ್ನು ನೀಡುತ್ತದೆ. ಮತ್ತು ಮುಂಬರುವ ವರ್ಷಗಳಲ್ಲಿ ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ "ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

   ದೇಶಿಯ ರಕ್ಷಣಾ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಲಘು ಯುದ್ದ ಹೆಲಿಕಾಪ್ಟರ್ ಗಳು, ಸಾಗಾಣಿಕಾ ವಿಮಾನಗಳು ಸೇರಿದಂತೆ 101 ಯುದ್ದೋಪಕರಣಗಳ ಆಮದನ್ನು ನಿರ್ಬಂಧಿಸಲಾಗಿದೆ ಎಂದು ರಾಜನಾಥ್ ಸಿಂಗ್ ಭಾನುವಾರವಷ್ಟೇ ಹೇಳಿಕೆ ನೀಡಿದ್ದರು.

   2020 ರಿಂದ 2024ರ ನಡುವೆ ಭಾರತದಲ್ಲೇ ಸಶಸ್ತ್ರ ಉತ್ಪಾದನೆ

   2020 ರಿಂದ 2024ರ ನಡುವೆ ಭಾರತದಲ್ಲೇ ಸಶಸ್ತ್ರ ಉತ್ಪಾದನೆ

   ಫಿರಂಗಿ ಬಂದೂಕುಗಳು, ಆಕ್ರಮಣಕಾರಿ ಬಂದೂಕುಗಳು, ಸಾರಿಗೆ ವಿಮಾನಗಳು, ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ವಸ್ತುಗಳು ಸೇರಿದಂತೆ 101 ವಿವಿಧ ಉಪಕರಣಗಳನ್ನು ದೇಶೀಯ ಮಾರುಕಟ್ಟೆಯಿಂದಲೇ ಖರೀದಿ ಮಾಡುವ ನಿರ್ಧಾರ ಮಾಡಲಾಗಿದೆ. ಇದರಿಂದ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ಸಿಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಮಹತ್ವದ ನಿರ್ಧಾರವನ್ನು ಟ್ವೀಟ್ ಮೂಲಕ ಪ್ರಕಟಿಸಿದ್ದರು.

   ಸೇನೆಯಲ್ಲಿ 2020 ರಿಂದ 2024ರ ಮಧ್ಯೆ ಮಹತ್ವದ ಕಾರ್ಯ ನಡೆಯಲಿದೆ. ಸಂಪೂರ್ಣವಾಗಿ ರಕ್ಷಣಾ ಸಾಮಾಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್​ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

   ದುಬಾರಿ ರಕ್ಷಣಾ ಸಾಮಗ್ರಿಗಳಿಗೆ ಬ್ರೇಕ್

   ದುಬಾರಿ ರಕ್ಷಣಾ ಸಾಮಗ್ರಿಗಳಿಗೆ ಬ್ರೇಕ್

   ದುಬಾರಿ ವಿದೇಶಿ ರಕ್ಷಣಾ ಸಾಮಗ್ರಿಗಳ ಬದಲಾಗಿ ದೇಶೀಯ ರಕ್ಷಣಾ ಸಾಮಗ್ರಿಗಳನ್ನು ಪ್ರಚುರಪಡಿಸಿ ದೇಶದ ಸೇನೆಯ ಮೂರೂ ಪಡೆಗಳ ಶಕ್ತಿ ಬಲವರ್ಧನೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

   English summary
   Indian govt is planning to promote the manufacturing of selected products, especially in areas where China enjoys a big share in the global market.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X