ಕಮಾಂಡರ್ ಅಭಿನಂದನ್ ಮೇಲೆ ಹಿಂಸೆಗೆ ಭಾರತ ತೀವ್ರ ಖಂಡನೆ
ನವದೆಹಲಿ, ಫೆಬ್ರವರಿ 27: ಪಾಕಿಸ್ತಾನದ ವಶದಲ್ಲಿರುವ ಏರ್ ವಿಂಗ್ ಕಮಾಂಡರ್ ಅಭಿನಂದನ್ ಶೀಘ್ರವಾಗಿ, ಸುರಕ್ಷಿತವಾಗಿ ವಾಪಸ್ಸಾಗುತ್ತಾರೆಂದು ನಿರೀಕ್ಷಿಸುತ್ತಿದ್ದೇವೆ ಎಂದು ಭಾರತ ಸರ್ಕಾರ ಹೇಳಿದೆ.
ವಿದೇಶಾಂಗ ಸಚಿವಾಲಯವು ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತೀಯ ವಿಂಗ್ ಕಮಾಂಡರ್ ಅವರಿಗೆ ಹಿಂಸಿಸಿರುವುದನ್ನು ಹಾಗೂ ಹಾಗೂ ಅವರ ಕಣ್ಣು-ಕೈ ಕಟ್ಟಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದನ್ನು ತೀವ್ರವಾಗಿ ಖಂಡಿಸಿದೆ.
ಪಾಕಿಸ್ತಾನದ ಈ ನಡೆಯು ಅಂತರರಾಷ್ಟ್ರೀಯ ಮಾನ ಹಕ್ಕುಗಳ ಉಲ್ಲಂಘನೆ ಹಾಗೂ ಜಿನಿವಾ ಒಪ್ಪಂದದ ಉಲ್ಲಂಘನೆ ಎಂದು ಭಾರತವು ಎಚ್ಚರಿಸಿದೆ.

ಭಾರತೀಯ ವಿಂಗ್ ಕಮಾಂಡರ್‌ಗೆ ಯಾವುದೇ ಹಾನಿ ಮಾಡಬಾರದು ಎಂದು ಪಾಕಿಸ್ತಾನಕ್ಕೆ ಸೂಚಿಸಿರುವುದಾಗಿ ಹೇಳಲಾಗಿದ್ದು ಪಾಕಿಸ್ತಾನದಿಂದ ಅಭಿನಂದನ್ ಅವರ ಶೀಘ್ರ ಮತ್ತು ಸುರಕ್ಷಿತ ವಾಪಸ್ಸಾತಿಯನ್ನು ನಿರೀಕ್ಷಿಸುತ್ತಿರುವುದಾಗಿಯೂ ತಿಳಿಸಲಾಗಿದೆ.
ಭಾರತದ ಪ್ರಭಾರಿ ಪಾಕಿಸ್ತಾನ ರಾಯಭಾರಿಯನ್ನು ಕರೆಸಿಕೊಂಡ ವಿದೇಶಾಂಗ ಸಚಿವಾಲಯ ಪಾಕಿಸ್ತಾನವು ಅಂತರರಾಷ್ಟ್ರೀಯ ಗಡಿ ನಿಯಂತ್ರಣ ನಿಯಮವನ್ನು ಉಲ್ಲಂಘಿಸಿದ್ದು ಸೇರಿದಂತೆ ಭಾರತದ ಮೇಲಿನ ದಾಳಿ ಯತ್ನವನ್ನು ತೀವ್ರವಾಗಿ ಖಂಡಿಸಿದೆ.
ಪಾಕಿಸ್ತಾನವು ಇಂದು ಬೆಳಿಗ್ಗೆ ಭಾರತದ ಮೇಲೆ ದಾಳಿಗೆ ಯತ್ನಿಸಿತ್ತು, ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಭಾರತೀಯ ಮಿಗ್ ವಿಮಾನವು ದಾಳಿಗೆ ತುತ್ತಾಯ್ತು ಅದರಲ್ಲಿದ್ದ ಅಭಿನಂದನ್ ಅವರು ಪಾಕಿಸ್ತಾನ ಸೈನಿಕರಿಗೆ ಸಿಕ್ಕಿಹಾಕಿಕೊಂಡರು.












Click it and Unblock the Notifications