ಹವಾಲ ದಂಧೆ: ದೆಹಲಿ, ಮುಂಬೈನಲ್ಲಿ ಆದಾಯ ತೆರಿಗೆ ದಾಳಿ
ನೋಟುಗಳ ಬದಲಿಗೆ ಚಿನ್ನ ನೀಡುವ ದಂಧೆ ನಡೆಸುತ್ತಿದ್ದ ಹವಾಲ ಮಂದಿ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿದೆ.
ನವದೆಹಲಿ, ನವೆಂಬರ್ 10: ದೊಡ್ಡ ಮೌಲ್ಯದ ಕರೆನ್ಸಿ ನೋಟುಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿರುವುದನ್ನು ಕಾಳದಂಧೆಕೋರರು ಲಾಭವಾಗಿ ಪರಿವರ್ತಿಸಿಕೊಂಡಿದ್ದಾರೆ. ನೋಟುಗಳ ಬದಲಿಗೆ ಚಿನ್ನ ನೀಡುವ ದಂಧೆ ನಡೆಸುತ್ತಿದ್ದ ಹವಾಲ ಮಂದಿ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿದೆ.
ದೊಡ್ಡ ಮೌಲ್ಯದ ಕರೆನ್ಸಿ ನಿಷೇಧದ ಬಳಿಕ 500 ಹಾಗೂ 1000 ರು ಗಳನ್ನು ಬದಲಾಯಿಸಿಕೊಳ್ಳಲು ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಬ್ಯಾಂಕು ಹಾಗೂ ಅಂಚೆ ಕಚೇರಿಗಳಲ್ಲಿ ಸಮರ್ಪಕವಾದ ವ್ಯವಸ್ಥೆ ಇರದ ಕಾರಣ, ತ್ವರಿತವಾಗಿ ಹಣ ಪಡೆಯಲು ಸ್ಥಳೀಯ ಲೇವಾದೇವಿ, ವ್ಯಾಪಾರಿಗಳ ಬಳಿ ಸಾರ್ವಜನಿಕರು ಸಾಗುತ್ತಿದ್ದಾರೆ.

ಹಳೆ ನೋಟಿನ ಬದಲಿಗೆ ಚಿನ್ನ: ಹಳೆ ನೋಟುಗಳ ಬದಲಿಗೆ ಚಿನ್ನ, ವಿದೇಶಿ ಕರೆನ್ಸಿಗಳನ್ನು ನೀಡುವ ಹವಾಲ ಏಜೆನ್ಸಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅಪಾರ ಪ್ರಮಾಣದ ಮೊತ್ತ ಜಪ್ತಿ ಮಾಡಿದ್ದಾರೆ.
ದೆಹಲಿ, ಮುಂಬೈ, ಪಂಜಾಬ್ ನಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. 500 ಹಾಗೂ 1000 ಹಳೆ ನೋಟುಗಳನ್ನು ಪಡೆದು ಅದರ ಬದಲಿಗೆ 10 ಗ್ರಾಂ ಗೆ 50,000 ಮೌಲ್ಯದಂತೆ ಚಿನ್ನವನ್ನು ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು.












Click it and Unblock the Notifications