ಕೊವಿಡ್ ಪರೀಕ್ಷಾ ಕಿಟ್‌ಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ: ಐಸಿಎಂಆರ್
ದೆಹಲಿ, ಏಪ್ರಿಲ್ 27: ಇಡೀ ಜಗತ್ತನ್ನು ಕೊರೊನಾ ವೈರಸ್ ಕಿತ್ತು ತಿನ್ನುತ್ತಿದೆ. ಭಾರತ ದೇಶವೂ ಕೊವಿಡ್ ಎಂಬ ಮಹಾಮಾರಿಗೆ ಸಿಲುಕಿಕೊಂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಈ ರೋಗಕ್ಕೆ ತುತ್ತಾಗಿದ್ದಾರೆ.
ಕೊರೊನಾ ವಿರುದ್ಧ ಇಡೀ ದೇಶ ಹೋರಾಡುತ್ತಿದೆ. ಆದರೆ, ಕೊರೊನಾ ಪರೀಕ್ಷೆ ಕಿಟ್‌ಗಳ ಖರೀದಿಯಲ್ಲಿ ಐಸಿಎಂಆರ್ ಅಕ್ರಮ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. 4500 ರೂಪಾಯಿಗೆ ಬೆಲೆ ನೀಡಿ ಟೆಸ್ಟಿಂಗ್ ಕಿಟ್ ಖರೀದಿ ಮಾಡುತ್ತಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

ಆದರೆ, ಈ ಸುದ್ದಿ ಸುಳ್ಳು ಎಂದು ಐಸಿಎಂಆರ್ ಸ್ಪಷ್ಟನೆ ನೀಡಿದೆ. ''ಐಸಿಎಂಆರ್ ಅನುಮೋದಿಸಿದ ಬೆಲೆ ಶ್ರೇಣಿ RT-PCRಗೆ 740-1150 ಮತ್ತು ತ್ವರಿತ ಪರೀಕ್ಷೆಗೆ 528-795 ರೂ. ಯಾವುದೇ ಪರೀಕ್ಷೆಗೆ 4,500 ರೂ ಸಂಗ್ರಹಿಸುತ್ತಿಲ್ಲ. ಯಾವುದೇ ಭಾರತೀಯ ಕಂಪನಿಯು ಕಡಿಮೆ ದರದಲ್ಲಿ ಸರಬರಾಜು ಮಾಡಲು ಬಯಸಿದರೆ ಕೂಡಲೇ ಐಸಿಎಂಆರ್ ಅಥವಾ ಎಂಎಸ್ ಅನು ನಗರ, ಜೆಎಸ್ ಆರೋಗ್ಯ ಸಂಶೋಧನೆ (011-23736222) ಅವರನ್ನು ಸಂಪರ್ಕಿಸಬಹುದು' ಎಂದು ಐಸಿಎಂಆರ್ ಟ್ವೀಟ್ ಮಾಡಿದೆ.
This is Fake News. Price range approved by ICMR is ₹740-1150 for RT-PCR and ₹528-795 for Rapid Test. No test has been procured at ₹4500. Any Indian company wanting to supply at lower rates is welcome to contact ICMR or Ms Anu Nagar, JS Health Research(011-23736222).
— ICMR (@ICMRDELHI) April 27, 2020
ಸುಮಾರು 17 ಕಂಪನಿಗಳು 500 ರೂಪಾಯಿಗೆ ಟೆಸ್ಟಿಂಗ್ ಕಿಟ್ ನೀಡಲು ತಯಾರಾಗಿದ್ದಾರೆ. ಆದರೆ, ಗುಜರಾತ್ ಮೂಲದ ಕಂಪನಿಯೊಂದಕ್ಕೆ 4500 ಬೆಲೆಯಲ್ಲಿ ಟೆಂಡರ್ ನೀಡಲಾಗಿದೆ ಎಂದು ವದಂತಿ ಹಬ್ಬಿದೆ.
ಇದೇ ಸುದ್ದಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಉದೀತ್ ರಾಜ್ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಆದರೆ, ಈ ಆರೋಪಕ್ಕೆ ಐಸಿಎಂಆರ್ ಉತ್ತರ ನೀಡಿದೆ.












Click it and Unblock the Notifications