Get Updates
Get notified of breaking news, exclusive insights, and must-see stories!

ಕಾನೂನಿಗೆ ತಲೆಬಾಗುತ್ತೇನೆ, ಜೀವಕ್ಕಿಂತಲೂ ಸ್ವಾತಂತ್ರ್ಯವೇ ಮುಖ್ಯ: ಪಿ ಚಿದಂಬರಂ

ನವದೆಹಲಿ, ಆಗಸ್ಟ್ 21: ನಿರೀಕ್ಷಣಾ ಜಾಮೀನು ರದ್ದಾಗುತ್ತಿದ್ದಂತೆ ಬಂಧನ ಭೀತಿ ಎದುರಿಸಿದ್ದ ಮಾಜಿ ಹಣಕಾಸು ಸಚಿವ ಏಕಾ-ಏಕಿ ಸಂಜೆ ವೇಳೆಗೆ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಕಾಣಿಸಿಕೊಂಡು ಸುದ್ದಿಗೋಷ್ಠಿ ನಡೆಸಿದರು.

ನನ್ನ ಮೇಲೆ ಹಾಗೂ ಮಗನ ಮೇಲೆ ಹೊರಿಸಿರುವ ಆರೋಪಗಳು ಸುಳ್ಳು, ಈ ಪ್ರಕರಣದಲ್ಲಿ ನಾವು ಆರೋಪಿಗಳಲ್ಲ ಎಂದು ಹೇಳಿದ ಚಿದಂಬರಂ ಕಾನೂನು ರೀತ್ಯಾ ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ನಾನು ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೇನೆ ಎಂಬ ಆರೋಪ ಕೇಳಿ ಗಾಬರಿಗೊಂಡಿದ್ದೇನೆ. ನಾನು ಕಾನೂನಿನ ರಕ್ಷಣೆಗೆ ಯತ್ನಿಸುತ್ತಿದ್ದೆ. ನಾನು ಬೆಳಿಗ್ಗಿನಿಂದ ನನ್ನ ವಕೀಲರೊಂದಿಗೆ ಕಾನೂನು ರಕ್ಷಣೆಗೆ ಯತ್ನಿಸುತ್ತಿದ್ದೆ. ನನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ತೆಗೆದುಕೊಳ್ಳುವುದಾಗಿ ಸುಪ್ರೀಂಕೋರ್ಟ್ ಹೇಳಿದೆ. ನಾನು ಕಾನೂನಿಗೆ ತಲೆಬಾಗುತ್ತೇನೆ. ಕಾನೂನು ಅನ್ವಯಿಸುವ ಕಾರ್ಯವನ್ನು ದುಷ್ಟರ ಕೈಯಲ್ಲಿರುವ ಸಿಬಿಐ ನಂತಹಾ ಸಂಸ್ಥೆ ಮಾಡುತ್ತಿದ್ದರೂ ಸಹ ಕಾನೂನನ್ನು ಗೌರವಿಸುತ್ತೇನೆ ಎಂದು ಪಿ.ಚಿದಂಬರಂ ಹೇಳಿದರು.

I am not hiding from Law: P Chidambaram

ತಮ್ಮ ಮೇಲೆ ಹೊರಿಸಲಾಗಿದ್ದ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅವರು, ಜೀವನ ಮತ್ತು ಸ್ವಾತಂತ್ರ್ಯ ಎರಡರಲ್ಲಿ ಯಾವುದು ಬೇಕು ಎಂದು ಕೇಳಿದರೆ ನಾನು ಸ್ವಾತಂತ್ರ್ಯವನ್ನು ಆಯ್ದು ಕೊಳ್ಳುತ್ತೇನೆ ಎಂದು ಹೇಳಿದರು.

ಸುದ್ದಿಗೋಷ್ಠಿ ಮುಗಿಸಿ ಪಿ.ಚಿದಂಬರಂ ಅವರು ದೆಹಲಿಯ ಜೋರ್ ಬಾಗ್‌ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದರು. ಅಲ್ಲಿಯೇ ಸಿಬಿಐ ಮತ್ತು ಇಡಿ ಅಧಿಕಾರಿಗಳಾಗಿ ಕಾಯುವುದಾಗಿ ಅವರು ಹೇಳಿದರು.

ಅಂತೆಯೇ ಜೋರ್‌ ಬಾಗ್‌ನಲ್ಲಿನ ನಿವಾಸಕ್ಕೆ ಪಿ.ಚಿದಂಬರಂ ಅವರು ತೆರಳಿದರು. ಅಲ್ಲಿಗೆ ಸಿಬಿಐ ಮತ್ತು ಇಡಿ ಅಧಿಕಾರಿಗಳು ಬಂದರು. ಕೆಲವೇ ಕ್ಷಣಗಳಲ್ಲಿ ಅವರನ್ನು ಬಂಧಿಸುವ ಸಾಧ್ಯತೆ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+