ಕೊರೊನಾ ಹತೋಟಿಗೆ ತರೋದು ಹೇಗೆ: ಆನಂದ್ ಮಹಿಂದ್ರಾ ಟಿಪ್ಸ್ ಇಲ್ಲಿದೆ
ನವದೆಹಲಿ, ಮಾರ್ಚ್ 9: ಕೊರೊನಾ ಮಾರಣಾಂತಿಕ ರೋಗವು 100ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, ಇದರಿಂದ ವಿಶ್ವ ಮಾರುಕಟ್ಟೆಗೆ ಹೊಡೆತ ಬಿದ್ದಿದೆ ಕೊರೊನಾವನ್ನು ಹತೋಟಿಗೆ ತರುವುದು ಹೇಗೆ ಎನ್ನುವ ಬಗ್ಗೆ ಉದ್ಯಮಿ ಆನಂದ್ ಮಹಿಂದ್ರಾ ಟ್ವೀಟ್ ಮಾಡಿದ್ದಾರೆ.
ಕೊರೊನಾ ಎನ್ನುವುದು ಜಾಗತಿಕ ಬಿಕ್ಕಟ್ಟು ನಾವು ಅದನ್ನು ಹೋಗಲಾಡಿಸಲು ಪಣ ತೊಡಬೇಕು , ಸಿಕ್ಕ ಅವಕಾಶಗಳಲ್ಲಿ ಅನ್ವೇಷಣೆ ನಡೆಸಬೇಕು ಎಂದು ಹೇಳಿದ್ದಾರೆ.
ನಾವು ಹತೋಟಿಗೆ ತರಬೇಕಾದ ಅಂಶಗಳಿವು: -ನೈರ್ಮಲ್ಯೀಕರಣ ಮತ್ತು ಸ್ವಚ್ಛ ಭಾರತದಂತಹ ಆಂದೋಲನವನ್ನು ಹೆಚ್ಚಿಸಿ,ಪ್ರವಾಸಕ್ಕಾಗಿ ಚೀನಾವನ್ನು ಹುಡುಕುವ ಪ್ರವಾಸಿಗರಿಗೆ ಭಾರತವನ್ನು ಹುಡುಕುವ ರೀತಿಯಲ್ಲಿ ಆಕರ್ಷಿಸಬೇಕು.-ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ವಸ್ತುಗಳಿಗೆ ಪರ್ಯಾಯ ಮಾರ್ಗಗಳನ್ನು, ಹೂಡಿಕೆದಾರರನ್ನು ಪ್ರೋತ್ಸಾಹಿಸಬೇಕಿದೆ. -ಸರ್ಕಾರವು ಕಡಿಮೆ ಬೆಲೆ ಇರುವ ತೈಲ ಬಳಕೆಗೆ ಪ್ರೋತ್ಸಾಹಿಸಬೇಕು. ಆಗ ಬೇಡಿಕೆಯನ್ನು ಪೂರೈಸಲು ಸಾಧ್ಯ.

ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ಮಧ್ಯೆ ಹೂಡಿಕೆದಾರರು ಕೊರೊನಾ ವೈರಸ್ ಸಾಂಕ್ರಾಮಿಕದ ತೀವ್ರತೆಯ ಬಗ್ಗೆ ಭಯಭೀತರಾಗುತ್ತಿದ್ದಂತೆ, ದೇಶೀಯ ಷೇರು ಮಾರುಕಟ್ಟೆಗಳು ಸೋಮವಾರ ತೀವ್ರ ನಷ್ಟವನ್ನು ಅನುಭವಿಸಿದವು.
ಇದುವರೆಗೆ ಚೀನಾದಲ್ಲಿ ಕೊರೊನಾದಿಂದ 3800ಕ್ಕೂ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ. ರೋಗವನ್ನು ಪತ್ತೆ ಮಾಡಬಲ್ಲ ತಂತ್ರಜ್ಞಾನಗಳು ಎಲ್ಲಾ ಆಸ್ಪತ್ರೆಗಳಲ್ಲಿ ಇದೆಯಾ, ಮೂಲಭೂತ ವ್ಯವಸ್ಥೆ ಇದೆಯೇ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲಾ ಸರ್ಕಾರಗಳನ್ನು ಕೇಳಿದೆ.
ಭಾರತದಲ್ಲಿ ಇದುವರೆಗೆ 43 ಪ್ರಕರಣಗಳು ವರದಿಯಾಗಿವೆ. ಕೊರೊನಾ ವೈರಸ್ ಕಫ, ಶೀತ, ಸೀನುವುದರಿಂದ ಹರಡುತ್ತದೆ. ಏನಾದರೂ ತಿನ್ನುವುದಕ್ಕೂ ಮುನ್ನ ಸಾಬೂನಿನಿಂದ ಕೈತೊಳೆದುಕೊಳ್ಳಬೇಕು.












Click it and Unblock the Notifications