ಬಿಲ್ ಬಾಕಿಯಿದೆ ಎಂದು ರೋಗಿಯನ್ನು 'ಒತ್ತೆ' ಇಟ್ಟುಕೊಳ್ಳಬೇಡಿ: ಕೋರ್ಟ್

ನವದೆಹಲಿ, ಏಪ್ರಿಲ್ 26: ಚಿಕಿತ್ಸೆ ಬಿಲ್ ಬಾಕಿ ಕಟ್ಟಿಲ್ಲ ಎಂದು ರೋಗಿಯನ್ನು "ಒತ್ತೆಯಾಳಾಗಿ" ಇರಿಸಿಕೊಳ್ಳಬಾರದು ಎಂದು ದೆಹಲಿ ಹೈ ಕೋರ್ಟ್ ಬುಧವಾರ ಖಾಸಗಿ ಆಸ್ಪತ್ರೆಯೊಂದಕ್ಕೆ ಹೇಳಿದೆ. ರೋಗಿಗಳನ್ನು ತಮ್ಮ ಸುಪರ್ದಿಯಲ್ಲಿರಿಸಿಕೊಳ್ಳುವುದನ್ನು ಆಸ್ಪತ್ರೆಗಳ 'ಕಾರ್ಯಾಚರಣೆಯ ಮಾದರಿ' ಎಂದು ನ್ಯಾ.ವಿಪಿನ್ ಸಾಂಘ್ವಿ ಹಾಗೂ ದೀಪಾ ಶರ್ಮಾ ಅವರನ್ನು ಒಳಗೊಂಡ ಪೀಠ ಹೇಳಿದೆ.

ಬಿಲ್ ಕಟ್ಟಲಿಲ್ಲ ಅಂದರೂ ರೋಗಿಯನ್ನು ಬಿಡುಗಡೆ ಮಾಡಿ. ಅವರನ್ನು ಒತ್ತೆಯಾಳಿನ ರೀತಿ ಇಟ್ಟುಕೊಳ್ಳುವಂತಿಲ್ಲ. ಅದು ಹಣ ವಸೂಲಿ ಮಾಡುವ ಕಾರ್ಯತಂತ್ರ ಆಗಬಾರದು. ಒಂದು ವೇಳೆ ಬಿಲ್ ಬಾಕಿ ಇದ್ದರೂ ಹಣ ವಸೂಲಿ ಮಾಡಲಿಕ್ಕೆ ರೋಗಿಯನ್ನು ಇರಿಸಿಕೊಳ್ಳಬಾರದು. ಇಂಥ ಅಭ್ಯಾಸವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಸರ್ ಗಂಗಾ ರಾಮ್ ಆಸ್ಪತ್ರೆಗೆ ಕೋರ್ಟ್ ಹೇಳಿದೆ.

Hospitals can't hold patients hostage for unpaid bills: Delhi High Court

ರೋಗಿಯ ಮಗವೊಬ್ಬರು ಹಾಕಿದ್ದ ಹೇಬಿಯಸ್ ಕಾರ್ಪಸ್ ನ ವಿಚಾರಣೆಗೆ ಕೈಗೆತ್ತಿಕೊಂಡ ಕೋರ್ಟ್, ಈ ಆದೇಶ ನೀಡಿದೆ. ಮಧ್ಯಪ್ರದೇಶದ ಮಾಜಿ ಪೊಲೀಸ್ ವೊಬ್ಬರು ಫೆಬ್ರವರಿಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅದರ ವೆಚ್ಚ 13.45 ಲಕ್ಷ ರುಪಾಯಿ ಬಾಕಿಯಿದೆ ಎಂದು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ರೋಗಿಯ ಮಗ ಹೇಳಿದ್ದರು.

ಆಸ್ಪತ್ರೆಯವರು ಸರಿಯಾದ ಚಿಕಿತ್ಸೆ ನೀಡಿಲಿಲ್ಲ. ಅಲ್ಲಿಂದ ಕರೆದೊಯ್ಯಲು ಸಹ ಬಿಡಲಿಲ್ಲ ಎಂದು ರೋಗಿಯ ಮಗ ಹೇಳಿದ್ದು, ಒಟ್ಟಾರೆ 16.75 ಲಕ್ಷ ರುಪಾಯಿ ಬಿಲ್ ಆಗಿದ್ದು, ಅರ್ಜಿದಾರರು 3.3 ಲಕ್ಷ ರುಪಾಯಿ ಮಾತ್ರ ಪಾವತಿಸಿದ್ದಾರೆ ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಬಿಲ್ ಬಾಕಿ ಇಟ್ಟುಕೊಂಡಿದ್ದರೂ ಶಸ್ತ್ರಚಿಕಿತ್ಸೆ ನಡೆಸಿ, ಆ ನಂತರವೇ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಿದ್ದೇವೆ ಎಂದು ಸಹ ಹೇಳಿದ್ದಾರೆ.

ಆಸ್ಪತ್ರೆಯವರ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರವಷ್ಟೇ ಶಸ್ತ್ರಚಿಕಿತ್ಸೆ ನಡೆಸಿದ್ದು ಎಂದು ಅರ್ಜಿದಾರರು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+