ಮುಸ್ಲಿಮರಿಗೆ ಜಾಗವಿಲ್ಲ ಎಂದರೆ ಹಿಂದುತ್ವಕ್ಕೆ ಬೆಲೆ ಇರೋಲ್ಲ: ಭಾಗವತ್

ನವದೆಹಲಿ, ಸೆಪ್ಟೆಂಬರ್ 19: "ಮುಸ್ಲಿಮರಿಗೆ ಇಲ್ಲಿ ಜಾಗವಿಲ್ಲ ಎಂದರೆ ಹಿಂದುತ್ವವೂ ಉಳಿಯುವುದಿಲ್ಲ. ಹಿಂದು ರಾಷ್ಟ್ರ ಎಂದರೆ ಮುಸ್ಲಿಮರಿಗೆ ಇಲ್ಲಿ ಜಾಗವಿಲ್ಲ ಎಂದಲ್ಲ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್(ಮುಖ್ಯಸ್ಥ) ಮೋಹನ್ ಭಾಗವತ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಆರೆಸ್ಸೆಸ್ ಕಾಂಕ್ಲೇವ್ ನ ಎರಡನೇ ದಿನವಾದ ಮಂಗಳವಾರ ಅವರು ಮಾತನಾಡುತ್ತಿದ್ದರು.

'ಎಲ್ಲ ಧರ್ಮಗಳನ್ನೂ ಗೌರವಿಸುವುದು ಹಿಂದು ರಾಷ್ಟ್ರದ ಉದಾತ್ತತೆ. ಸಂಘ ಎಂದಿಗೂ ಸಾರ್ವತ್ರಿಕ ಭ್ರಾತೃತ್ವದ ಬಗ್ಗೆ ಕೆಲಸ ಮಾಡುತ್ತದೆ. ಅದು ನಮ್ಮ ಸಂಸ್ಕೃತಿಯಲ್ಲಿ ಬಂದಿದೆ. ಇದನ್ನೇ ಹಿಂದುತ್ವ ಎಂದು ಕರೆಯುವುದು. ಅದಕ್ಕೆಂದೇ ನಾವಿದ್ನು ಹಿಂದು ರಾಷ್ಟ್ರ ಎಂದು ಕರೆಯುತ್ತೇವೆ' ಎಂದು ಅವರು ಹೇಳಿದರು.

Hindu Rashtra does not mean it has no place for Muslims: Mohan Bhagwat

'ಹಿಂದುತ್ವ ಎಂದಿಗೂ ವಸುಧೈವ ಕುಟುಂಬಕಂ ಎಂಬ ತತ್ತ್ವವನ್ನು ನಂಬುತ್ತದೆ' ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಸೋಮವಾರ ಮಾತನಾಡುತ್ತಿದ್ದ ಮೋಹನ್ ಭಾಗವತ್, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಕಾಂಗ್ರೆಸ್ ಈ ದೇಶಕ್ಕೆ ಮಹಾನ್ ನಾಯಕರನ್ನು ನೀಡಿದೆ ಎಂದು ಕಾಂಗ್ರೆಸ್ ಅನ್ನು ಮನಸಾರೆ ಹೊಗಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+