• search

ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಯ ಗೋಡೆ ಮೇಲೆ ಹೀಗೆ ಬರೆದಿದೆ..

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ನಿತಿನ್ ಗಡ್ಕರಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರ ಕಚೇರಿಯಲ್ಲಿ ಗಮನ ಸೆಳೆಯುವ ಬೋರ್ಡ್

    ನವದೆಹಲಿ, ಜನವರಿ 03: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಹೋದವರಿಗೆಲ್ಲಾ ಅಲ್ಲಿನ ಗೋಡೆಗೆ ಹಾಕಿರುವ ಫಲಕವೊಂದರ ಮೇಲೆ ದೃಷ್ಠಿ ಹರಿದೇ ಹರಿಯುತ್ತದೆ. ಫಲಕದ ಮೇಲೆ ಬರೆದಿರುವುದನ್ನು ಓದಿದ ಮೇಲೆ ಗಡ್ಕರಿ ಅವರ ಕನಸು ಏನು ಎಂಬುದು ಅರ್ಥವಾಗುತ್ತದೆ. ಇಷ್ಟಕ್ಕೂ ಆ ಫಲಕದ ಮೇಲೆ ಬರೆದಿರುವುದು ಏನು?

    ನೋ ಪಾರ್ಕಿಂಗ್ ನಲ್ಲಿರುವ ವಾಹನ ಚಿತ್ರ ನೀಡಿದವರಿಗೆ ಸೂಕ್ತ ಬಹುಮಾನ: ಗಡ್ಕರಿ

    'ಅಮೆರಿಕ ಶ್ರೀಮಂತ ರಾಷ್ಟ್ರ ಎಂಬ ಕಾರಣಕ್ಕೆ ಅದರ ರಸ್ತೆಗಳು ಚೆನ್ನಾಗಿವೆ ಎಂಬುದು ಸುಳ್ಳು, ಅಮೆರಿಕದ ರಸ್ತೆಗಳು ಚೆನ್ನಾಗಿವೆ ಹಾಗಾಗಿ ಅಮೆರಿಕ ಶ್ರೀಮಂತ ರಾಷ್ಟ್ರವಾಗಿದೆ' ಎಂಬ ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್.ಕೆನಡಿ ಅವರ ಪ್ರಖ್ಯಾತ ಮಾತೊಂದನ್ನು ದೊಡ್ಡ ಅಕ್ಷರದಲ್ಲಿ ಬರೆಸಿ ತಮ್ಮ ಕಚೇರಿಯ ಗೋಡೆಯ ಮೇಲೆ ಹಾಕಿಸಿಕೊಂಡಿದ್ದಾರೆ ಸಚಿವ ನಿತಿನ್ ಗಡ್ಕರಿ.

    Highway minister Nitin Gadkari has unique board in his office

    ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ನಿತಿನ್ ಗಡ್ಕರಿ ಅವರು ಮುಖ್ಯ ಕಚೇರಿಯಲ್ಲಿ ಈ ಬೋರ್ಡ್ ಹಾಕಲಾಗಿದೆ. ಜಾನ್ ಎಫ್ ಕೆನಡಿ ಅವರ ಈ ಮೌಲಿಖ ಮಾತನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ಜಾರಿಗೆ ತರಬೇಕೆಂಬ ಉದ್ದೇಶದಿಂದಲೇ ಅದನ್ನು ತಮ್ಮ ಕಚೇರಿಯಲ್ಲಿ ದೊಡ್ಡ ಅಕ್ಷರದಲ್ಲಿ ಅಚ್ಚು ಹಾಕಿಸಿ ಹಾಕಿಸಿಕೊಂಡಿದ್ದಾರೆ.

    ಪರ್ಯಾಯ ಇಂಧನ ತಂತ್ರಜ್ಞಾನ ಅಭಿವೃದ್ಧಿಗೆ ಗಡ್ಕರಿ ಆಗ್ರಹ

    ಇತ್ತೀಚೆಗೆ ತಾನೇ ಬೆಂಗಳೂರು-ಮೈಸೂರು ನಡುವೆ ಆರು ಪಥದ ರಸ್ತೆ ನಿರ್ಮಾಣಕ್ಕೆ ನಿತಿನ್ ಗಡ್ಕರಿ ಹಸಿರು ನಿಶಾನೆ ತೋರಿಸಿದ್ದಾರೆ. ಅಷ್ಟೆ ಅಲ್ಲದೆ ಹೆದ್ದಾರಿ ನಿರ್ವಹಣೆ ವೆಚ್ಚವನ್ನು ಹೆಚ್ಚು ಮಾಡಿದ್ದಾರೆ.

    ಗಡ್ಕರಿ ಅವರ ಕಚೇರಿಯಲ್ಲಿ ಹಾಕಲಾಗಿರುವ ಫಲಕ ಅವರ ಕೆಲಸದಲ್ಲಿಯೂ ಪ್ರತಿಫಲವಾಗಲಿ ಎಂಬುದೇ ಎಲ್ಲರ ಆಶಯ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    The Union road transport and highways minister Nitin Gadkari often quotes former American president John F. Kennedy to make a point about the importance of roads. He has written that lines on his office wall.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more