ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್‌ನಲ್ಲಿ ಎಷ್ಟು ಲಸಿಕೆ ಲಭ್ಯವಾಗಲಿದೆ ಎಂದು ಲೆಕ್ಕ ನೀಡಿದ ಆರೋಗ್ಯ ಸಚಿವಾಲಯ

|
Google Oneindia Kannada News

ನವದೆಹಲಿ, ಮೇ 30: ಸುಮಾರು 12 ಕೋಟಿಯಷ್ಟು ಲಸಿಕೆ ಜೂನ್‌ ತಿಂಗಳಿನಲ್ಲಿ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ. ಮೇ ತಿಂಗಳಿನಲ್ಲಿ ಒಟ್ಟು 7.94 ಕೋಟಿಯಷ್ಟು ಲಸಿಕೆಯನ್ನು ಉತ್ಪಾದನೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಯನ್ನು ವಿತರಣೆಯ ಮಾದರಿ, ಜನಸಂಖ್ಯೆ ಮತ್ತು ವಾಕ್ಸಿನ್ ವೇಸ್ಟೇಜ್ ಪ್ರಮಾಣವನ್ನು ನೋಡಿಕೊಂಡು ಹಂಚಲಾಗುತ್ತದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಜೂನ್ ತಿಂಗಳಿನಲ್ಲಿ ಲಸಿಕೆಯ ಲಭ್ಯತೆಯ ಬಗ್ಗೆ ಮುಂಚಿತವಾಗಿಯೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿಯನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಕೋವಿಡ್-19 ಸಂದರ್ಭದಲ್ಲಿ ಆಮ್ಲಜನಕ ಚಿಕಿತ್ಸಾ ವಿಧಾನಕೋವಿಡ್-19 ಸಂದರ್ಭದಲ್ಲಿ ಆಮ್ಲಜನಕ ಚಿಕಿತ್ಸಾ ವಿಧಾನ

"ಜೂನ್ ತಿಂಗಳಿನಲ್ಲಿ 6,09,60,000 ಡೋಸ್‌ಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಮತ್ತು 45+ ವಯಸ್ಸಿನವರಿಗೆ ಇದರಲ್ಲಿ ಆದ್ಯತೆಯನ್ನು ನೀಡಲಾಗುತ್ತದೆ. ಇದನ್ನು ಕೇಂದ್ರ ಸರ್ಕಾರದ ಉಚಿತ ವಿತರಣೆಯಲ್ಲಿ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Health ministry said approximately 12 crore doses of vaccine to be available in June

ಇದನ್ನು ಹೊರತುಪಡಿಸಿ 5,86,10,000 ಡೋಸ್‌ಗಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ಪಡೆದುಕೊಳ್ಳಲು ಲಭ್ಯವಾಗಲಿದೆ. ಹೀಗಾಗಿ ಜೂನ್ ತಿಂಗಳಿನಲ್ಲಿ ಒಟ್ಟು 12 ಕೋಟಿಯಷ್ಟು ಲಸಿಕೆ ರಾಷ್ಟ್ರೀಯ ಕೊರೊನಾ ಲಸಿಕಾ ಕಾರ್ಯಕ್ರಮಕ್ಕೆ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇನ್ನು ಇದೇ ಸಂದರ್ಭದಲ್ಲಿ ದೊರೆಯುವ ಲಸಿಕೆಗಳನ್ನು ಪರಿಣಾಮಕಾರಿಯಾಗಿ, ಎಚ್ಚರಿಕೆಯಿಂದ ವ್ಯರ್ಥವಾಗದಂತೆ ಬಳಸಿಕೊಳ್ಳಬೇಕೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Recommended Video

ಪಾಕ್ ವಿರುದ್ಧದ ಪಂದ್ಯದಲ್ಲಿ ನಾನು ವಿಲನ್ ಆಗಿದ್ದೆ | Oneindia Kannada

ಇನ್ನು ಇದೇ ಸಂದರ್ಭದಲ್ಲಿ ಜೂನ್ ತಿಂಗಳಿನಲ್ಲಿ 4,03,49,830 ಡೋಸ್ ಲಸಿಕೆಗಳು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿದೆ. ಇಷ್ಟಲ್ಲದೆ 3,90,55,370 ಡೋಸ್ ಲಸಿಕೆಗಳು ರಾಜ್ಯ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ನೇರವಾಗಿ ದೊರೆತಿವೆ. ಈ ಮೂಲಕ ಮೇ ತಿಂಗಳಿನಲ್ಲಿ 7,94,05,200 ಡೋಸ್ ಲಸಿಕೆಗಳು ರಾಷ್ಟ್ರೀಯ ಕೊರೊನಾ ಲಸಿಕಾ ಕಾರ್ಯಕ್ರಮಕ್ಕೆ ಲಭ್ಯವಾಗಿದೆ ಎಂದು ಸಚಿವಾಲಯ ವಿವರಿಸಿದೆ.

English summary
Health ministry said approximately 12 crore doses of vaccine to be available in June. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X