Get Updates
Get notified of breaking news, exclusive insights, and must-see stories!

ಸೈಕಲ್ ಏರಿ ಬಂದು ಅಧಿಕಾರ ಸ್ವೀಕರಿಸಿದ ಆರೋಗ್ಯ ಸಚಿವ

ನವದೆಹಲಿ, ಜೂನ್ 3: ಇಂದು ವಿಶ್ವ ಬೈಸಿಕಲ್ ದಿನ. ಸೈಕಲ್ ಓಡಿಸುವುದು ದೇಹಕ್ಕೂ ಆರೋಗ್ಯಕರ, ಪರಿಸರಕ್ಕೂ ಹಿತ ಎನ್ನುವುದು ಸಾಮಾನ್ಯ ಅಭಿಪ್ರಾಯ. ಕೇಂದ್ರದಲ್ಲಿ ಸತತ ಎರಡನೆಯ ಬಾರಿಗೆ ಆರೋಗ್ಯ ಸಚಿವರಾಗಿ ನೇಮಕವಾಗಿರುವ ಡಾ. ಆರ್. ಹರ್ಷವರ್ಧನ್ ಅಧಿಕಾರ ಸ್ವೀಕರಿಸಲು ಸೋಮವಾರ ಸೈಕಲ್‌ನಲ್ಲಿ ಬಂದು ಗಮನ ಸೆಳೆದರು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಹರ್ಷವರ್ಧನ್ ಅವರು ಫಾರ್ಮಲ್ಸ್ ಉಡುಗೆ ತೊಟ್ಟು ಸೈಕಲ್ ತುಳಿದುಕೊಂಡು ಬರುವ ಚಿತ್ರ ವೈರಲ್ ಆಗಿದೆ.

ವಿಶ್ವ ಬೈಸಿಕಲ್ ದಿನದ ಅಂಗವಾಗಿ ಜಾಗೃತಿ ಮೂಡಿಸುವ ಸಲುವಾಗಿ ಹರ್ಷವರ್ಧನ್ ಅವರು ಈ ನಡೆ ಅನುಸರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೈಕ್ಲಿಂಗ್ ತಮ್ಮ ಅಚ್ಚುಮೆಚ್ಚಿನ ಕ್ರೀಡೆ ಎಂದು ಅವರು ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೆಯ ಅವಧಿಗೆ ಚುನಾಯಿತರಾದ ಬಳಿಕ ಹರ್ಷವರ್ಧನ್ ಎರಡನೆಯ ಅವಧಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ನೇಮಕವಾಗಿದ್ದಾರೆ. ಸೋಮವಾರ ಅವರು ಅಧಿಕಾರ ಸ್ವೀಕರಿಸಿದರು. ಕಳೆದ ಸಾಲಿನಲ್ಲಿ ಕೂಡ ಆರೋಗ್ಯ ಸಚಿವರಾಗಿದ್ದ ಅವರು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಯನ್ನು ಕೂಡ ಹೆಚ್ಚುವರಿಯಾಗಿ ನಿಭಾಯಿಸಿದ್ದರು.

ಮೋದಿ ಅವರಿಗೆ ಕೃತಜ್ಞ

'ಇಂದು ನಾನು ಆರೋಗ್ಯ ಮತ್ತು ಕುಟುಂಬ ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದೇನೆ. ನನ್ನ ಮೇಲೆ ನಂಬಿಕೆ ಇರಿಸಿರುವುದಕ್ಕೆ ಪ್ರಧಾನಿ ಮೋದಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಮೋದಿ ಸರ್ಕಾರದ ಮೊದಲ ಆದ್ಯತೆ ದೇಶದ ಜನರ ಆರೋಗ್ಯ. ಸಚಿವನಾಗಿ ನನ್ನ ಮೇಲಿರುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.

Array

ಸೈಕ್ಲಿಂಗ್ ನೆಚ್ಚಿನ ಕ್ರೀಡೆ

ಸೈಕ್ಲಿಂಗ್ ಒಂದು ಸರಳ, ಕಡಿಮೆ ವೆಚ್ಚದ, ನಂಬಿಕಸ್ಥ, ಶುದ್ಧ ಹಾಗೂ ಸಾರಿಗೆಯಲ್ಲಿ ಪರಿಸರೀಯವಾಗಿ ಸುಸ್ಥಿರ. ಜೂನ್ 3ಅನ್ನು ವಿಶ್ವ ಬೈಸಿಕಲ್ ದಿನ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಸುಸ್ಥಿರ ಅಭಿವೃದ್ಧಿ ಗುರಿಗಾಗಿ ಸೈಕ್ಲಿಂಗ್‌ನ ಮಹತ್ವವನ್ನು ಒತ್ತಿ ಹೇಳಲು ಈ ದಿನವನ್ನು ಆಚರಿಸಲಾಗುತ್ತಿದೆ. ಇದು ನನ್ನ ನೆಚ್ಚಿನ ಕ್ರೀಡೆ ಕೂಡ ಎಂದು ಅವರು ಹೇಳಿದ್ದಾರೆ.

ಎರಡೆರಡು ಹೊಣೆಗಾರಿಕೆ

ಎರಡೆರಡು ಹೊಣೆಗಾರಿಕೆ

ಮೋದಿ ಅವರ ಎರಡನೆಯ ಅವಧಿಯ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಸಚಿವರಾಗಿರುವ ಜತೆಗೆ ಕಳೆದ ಸಾಲಿನಲ್ಲಿ ನಿಭಾಯಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ಸಚಿವ ಸ್ಥಾನದಲ್ಲಿ ಕೂಡ ಹರ್ಷವರ್ಧನ್ ಮುಂದುವರಿಯಲಿದ್ದಾರೆ. 2017ರಲ್ಲಿ ಅನಿಲ್ ಮಾಧವ್ ದುಬೆ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು.

ಇಎನ್‌ಟಿ ತಜ್ಞ ಹರ್ಷವರ್ಧನ್

ಇಎನ್‌ಟಿ ತಜ್ಞ ಹರ್ಷವರ್ಧನ್

64 ವರ್ಷದ ಹರ್ಷವರ್ಧನ್, ದೆಹಲಿಯ ಚಾಂದಿನಿ ಚೌಕ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಾನ್ಪುರ ಜಿಎಸ್‌ವಿಎಂ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಹಾಗೂ ಎಂಎಸ್ ಪದವಿ ಪಡೆದಿರುವ ಅವರು ಇಎನ್‌ಟಿ ತಜ್ಞರೂ ಹೌದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+