ಕರ್ನಾಟಕದಲ್ಲಿ 8 ಹಾಟ್‌ಸ್ಪಾಟ್ ಗುರುತಿಸಿದ ಕೇಂದ್ರ ಸರ್ಕಾರ
ದೆಹಲಿ, ಏಪ್ರಿಲ್ 15: ಕೊರೊನಾ ವೈರಸ್‌ಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ದೇಶಾದ್ಯಂತ 12 ಸಾವಿರಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡಿದ್ದು, 390ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಮೊದಲ ಹಂತವಾಗಿ 21 ದಿನಗಳ ಲಾಕ್‌ಡೌನ್ ಮುಗಿಸಿದ ಭಾರತಕ್ಕೆ, ಪ್ರಧಾನಿ ಮೋದಿ ಎರಡನೇ ಹಂತದ ಲಾಕ್‌ಡೌನ್ ಘೋಷಿಸಿದ್ದಾರೆ. ಈ ನಡುವೆ ದೇಶದಲ್ಲಿ ಹಾಟ್‌ಸ್ಪಾಟ್ ಜಿಲ್ಲೆಗಳನ್ನು ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸಿದ್ದು, ಈ ಜಿಲ್ಲೆಯಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಲಾಗಿದೆ.
ದೇಶಾದ್ಯಂತ 170 ಜಿಲ್ಲೆಗಳನ್ನು ಹಾಟ್‌ಸ್ಪಾಟ್ ಎಂದು ಗುರುತಿಸಿರುವ ಕೇಂದ್ರ ಸರ್ಕಾರ, ಕರ್ನಾಟಕದಲ್ಲಿ 8 ಜಿಲ್ಲೆಗಳನ್ನು ಹಾಟ್‌ಸ್ಪಾಟ್ ಎಂದು ಘೋಷಿಸಿದೆ. ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳನ್ನು ಹಾಟ್‌ಸ್ಪಾಟ್ ಎಂದು ಸರ್ಕಾರ ಪಟ್ಟಿ ಬಿಡುಗಡೆ ಮಾಡಿದೆ. ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಹಾಟ್‌ಸ್ಪಾಟ್ ಬಿಟ್ಟು ನಾನ್ ಹಾಟ್‌ಸ್ಪಾಟ್ ಮತ್ತು ಗ್ರೀನ್ ಝೋನ್ ಎಂದು ಜಿಲ್ಲೆಗಳನ್ನು ವಿಭಾಗಿಸಲಾಗಿದೆ. 207 ಜಿಲ್ಲೆಗಳನ್ನು ನಾನ್ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿವೆ. ಆದರೆ, ಅದು ನಿಯಂತ್ರಣದಲ್ಲಿದೆ.
ಕರ್ನಾಟಕದ ಎಂಟು ಜಿಲ್ಲೆಗಳನ್ನು #Covid19 ಹಾಟ್ ಸ್ಪಾಟ್ ಎಂದು ಕೇಂದ್ರ ಆರೋಗ್ಯ ಇಲಾಖೆಯು ಗುರುತಿಸಿದೆ. ಅವುಗಳು:
— B Sriramulu (@sriramulubjp) April 15, 2020
ಬೆಂಗಳೂರು ನಗರ
ಮೈಸೂರು
ಬೆಳಗಾವಿ
ದಕ್ಷಿಣ ಕನ್ನಡ
ಬೀದರ್
ಕಲಬುರಗಿ
ಬಾಗಲಕೋಟೆ
ಧಾರವಾಡ#IndiaFightsCorona
ಇದುವರೆಗೂ ಯಾವ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿಲ್ಲವೋ? ಅವುಗಳನ್ನು ಹಸಿರು ಝೋನ್ ಎಂದು ಗುರುತಿಸಲಾಗಿದೆ. ಆದರೆ, ಈ ಜಿಲ್ಲೆಗಳಿಗೆ ಲಾಕ್ ಡೌನ್‌ನಿಂದ ವಿನಾಯಿತಿ ಇರುವುದಿಲ್ಲ. ಮೇ 3ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿರುವ ಕಾರಣ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗಸೂಚಿ ನೀಡಿದೆ. ಅಗತ್ಯ ವಸ್ತುಗಳು ಮತ್ತು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ವಿನಾಯಿತಿ ಘೋಷಿಸಿದೆ.












Click it and Unblock the Notifications