ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ.ಎ.ಪಿ.ಎಫ್ ಕ್ಯಾಂಟೀನ್ ನಲ್ಲಿ 'ಸ್ವದೇಶಿ' ಮಂತ್ರ: ಆದೇಶಕ್ಕೆ ತಡೆ

|
Google Oneindia Kannada News

ನವದೆಹಲಿ, ಮೇ 21: ಸ್ವಾವಲಂಬಿ ಭಾರತ ನಿರ್ಮಾಣಕ್ಕಾಗಿ ಸ್ವದೇಶಿ ಮಾರುಕಟ್ಟೆಯನ್ನು ಬಲಪಡಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಮೇಲೆ ಕೇಂದ್ರ ಗೃಹ ಸಚಿವಾಲಯ ಒಂದು ಮಹತ್ವದ ನಿರ್ಣಯವನ್ನು ಪ್ರಕಟಿಸಿತ್ತು.

Recommended Video

ಒಂದು ಲಕ್ಷ ಕೊಟ್ರೆ ಎಣಿಸೋಕೆ ನಂಗೆ ಒಂದು ದಿನ ಬೇಕು ಅಂದ್ರು ರಮೇಶ್ ಕುಮಾರ್ | Ramesh Kumar

ಜೂನ್ 1 ರಿಂದ ಆರಂಭಗೊಳ್ಳುವಂತೆ ಸಶಸ್ತ್ರ ಪೊಲೀಸ್ ಪಡೆ (ಸಿ.ಎ.ಪಿ.ಎಫ್) ಕ್ಯಾಂಟೀನ್ ಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲು ಗೃಹ ಸಚಿವಾಲಯ ತೀರ್ಮಾನಿಸಿತ್ತು.

ಸ್ವಾವಲಂಬಿ ಭಾರತಕ್ಕಾಗಿ ದೇಶಿಯವಾಗಲು ಹೊರಟ ಪೊಲೀಸ್ ಪಡೆ.!ಸ್ವಾವಲಂಬಿ ಭಾರತಕ್ಕಾಗಿ ದೇಶಿಯವಾಗಲು ಹೊರಟ ಪೊಲೀಸ್ ಪಡೆ.!

ಆದ್ರೀಗ ಗೃಹ ಸಚಿವಾಲಯದ ಮಹತ್ವದ ನಿರ್ಧಾರಕ್ಕೆ ತಡೆಬಿದ್ದಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಕ್ಯಾಂಟೀನ್ ಗಳಲ್ಲಿ ಕೇವಲ ಸ್ವದೇಶಿ ಉತ್ಪನ್ನಗಳನ್ನು ಮಾರಾಟ ಮಾಡುವ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ.

 Government Withdraws Order On Sale Of Only Swadeshi Products Through CAPF Canteens

ಗೃಹ ಸಚಿವಾಲಯದಿಂದ 'ಸ್ವದೇಶಿ' ಕುರಿತು ಸ್ಪಷ್ಟ ಸೂಚನೆಗಳು ಬರುವವರೆಗೂ ಸಿ.ಎ.ಪಿ.ಎಫ್ ಕ್ಯಾಂಟೀನ್ ಗಳಲ್ಲಿನ ಎಲ್ಲಾ ಖರೀದಿಗಳನ್ನು ತಡೆಹಿಡಿಯಲಾಗಿದೆ ಎಂದು ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಕ್ಯಾಂಟೀನ್ ನಲ್ಲಿ ಉದ್ದೇಶಿಸಿರುವ ಸ್ವದೇಶಿ ವಸ್ತುಗಳ ಪೂರೈಕೆ ಮತ್ತು ಬೇಡಿಕೆ ವಿಚಾರದಲ್ಲಿ ಸ್ಪಷ್ಟವಾದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಇನ್ನೂ ನೀಡದ ಹಿನ್ನಲೆಯಲ್ಲಿ ಈ ಹಿಂದಿನ ಆದೇಶಕ್ಕೆ ತಡೆ ಬಿದ್ದಿದೆ.

English summary
Government Withdraws Order on Sale of only Swadeshi products through CAPF Canteens. Procurements at CAPF canteens were put on hold till clear instructions were received from Home Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X