ದೆಹಲಿ: DTU ವಿದ್ಯಾರ್ಥಿಗೆ Google ಬಂಪರ್ ಪ್ಯಾಕೇಜ್

ಹಿಮಾಂಷು ಜಿಂದಾಲ್ ಈ ಅದೃಷ್ಟವಂತ ವಿದ್ಯಾರ್ಥಿ. ಈತ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿ. ಈತನಿಗೆ ವಾರ್ಷಿಕ 1,15,000 ಅಮೆರಿಕ ಡಾಲರ್ (93 ಲಕ್ಷ ರೂ) ಪಗಾರ ನೀಡುವುದಾಗಿ Google ಒಪ್ಪಂದ ಮಾಡಿಕೊಂಡಿದೆ. ಅಷ್ಟೇ ಅಲ್ಲ. 125 ಗೂಗಲ್ ಷೇರುಗಳನ್ನೂ ನೀಡುವುದಾಗಿ ತಿಳಿಸಿದೆ. ಇನ್ನು ಆ ವಿದ್ಯಾರ್ಥಿಯ ಬುದ್ಧಿಮತ್ತೆ ಎಷ್ಟಿರಬಹುದು!
ಇದೇ ಕಾಲೇಜಿನ ಮತ್ತೊಬ್ಬ ಸಾಫ್ಟ್ ವೇರ್ ಇಂಜಿನಿಯರಿಂಗ್ ವಿದ್ಯಾರ್ಥಿ ನಿಲೇಶ್ ಅಗರವಾಲ್ ಗೆ ವಾರ್ಷಿಕ 70 ಲಕ್ಷ ರೂ ಪ್ಯಾಕೇಜ್ ನೀಡಲು ಅಮೆರಿಕದ ಮತ್ತೊಂದು ಟೆಕ್ ಕಂಪನಿ EPIC ಮುಂದಾಗಿದೆ.
Delhi Technological Universityಯ ಅಂತಿಮ ವರ್ಷದ ಕಾಲಾವಧಿ ಆಗಸ್ಟ್ 1ರಂದು ಪ್ರಾರಂಭವಾಗಿದೆ. ನಾನಾ ಕಂಪನಿಗಳು ಇದುವರೆಗೂ ಒಟ್ಟು 265 ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಿವೆ. Goldman Sachs ಕಂಪನಿಯು ವಿದ್ಯಾರ್ಥಿಯೊಬ್ಬನಿಗೆ 28 ಲಕ್ಷ ರೂ ಮತ್ತು Amazon ಕಂಪನಿಯು ಮತ್ತೊಬ್ಬ ವಿದ್ಯಾರ್ಥಿಯೊಬ್ಬನಿಗೆ 19 ಲಕ್ಷ ರೂ ವಾರ್ಷಿಕ ಪಗಾರ ನೀಡಲು ಮುಂದಾಗಿದೆ.
ಕಠಿಣ ಪರಿಶ್ರಮ, ಅಪ್ಪ-ಅಮ್ಮನ ಆಶೀರ್ವಾದ ಮತ್ತು ಗೆಳೆಯರು ಸಾಥ್ ನೀಡಿದ್ದರಿಂದ ವಿಶ್ವ ಮಾನ್ಯ ಕಂಪನಿಯಲ್ಲಿ ತಮಗೆ ಉದ್ಯೋಗಾವಕಾಶ ಒದಗಲು ಸಾಧ್ಯವಾಯಿತು ಎಂದು ಹಿಮಾಂಷು ಹರ್ಷ ವ್ಯಕ್ತಪಡಿಸಿದ್ದಾನೆ.












Click it and Unblock the Notifications