ಡಾಕ್ಟರ್, ನರ್ಸ್, ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ಧನ್ಯವಾದ
ನವ ದೆಹಲಿ, ಏಪ್ರಿಲ್ 13: ವೈದ್ಯರು, ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ಸಂಸ್ಥೆ ಧನ್ಯವಾದ ತಿಳಿಸಿದೆ. ಗೂಗಲ್ ಡೂಡಲ್ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಧನ್ಯವಾದ ತಿಳಿಸಿದ್ದಾರೆ.
ವಿಶ್ವದ ತುಂಬ ಕೊರೊನಾ ವೈರಸ್ ಹರಡಿದೆ. ವೈರಸ್ ವಿರುದ್ಧ ವೈದ್ಯಕೀಯ ಬಹಳ ಹೋರಾಟ ನಡೆಸುತ್ತಿದೆ. ತಮ್ಮ ಜೀವವನ್ನು ಒತ್ತೆ ಇಟ್ಟು ಕೆಲಸದಲ್ಲಿ ತೊಡಗಿದ್ದಾರೆ. ಹೀಗಾಗಿ ವೈದ್ಯರ ತ್ಯಾಗಕ್ಕೆ ಗೂಗಲ್ ಧನ್ಯವಾದ ತಿಳಿಸಿದೆ. ವಿಶೇಷ ಗೂಗಲ್ ಡೂಡಲ್ ಇಂದು ಗೂಗಲ್ ಸಿದ್ಧಪಡಿಸಿದೆ.
''ಕೋವಿಡ್ -19 ಪ್ರಪಂಚದಾದ್ಯಂತದ ಸಮುದಾಯಗಳ ಮೇಲೆ ಪ್ರಭಾವ ಬೀರುತ್ತಿರುವುದರಿಂದ, ಜನರು ಹಿಂದಿಗಿಂತಲೂ ಈಗ ಪರಸ್ಪರ ಸಹಾಯ ಮಾಡಲು ಒಗ್ಗೂಡುತ್ತಿದ್ದಾರೆ. ಮುಂದಿನ ಸಾಲಿನಲ್ಲಿರುವ ಅನೇಕರನ್ನು ಗುರುತಿಸಲು ಮತ್ತು ಗೌರವಿಸಲು ನಾವು ಡೂಡಲ್ ಸರಣಿಯನ್ನು ಪ್ರಾರಂಭಿಸುತ್ತಿದ್ದೇವೆ.'' ಎಂದು ಗೂಗಲ್ ತಿಳಿಸಿದೆ.

ತಮ್ಮ ಕುಟುಂಬದಿಂದ ದೂರ ಇದ್ದು, ಊಟ ನಿದ್ದೆ ಬಗ್ಗೆ ಯೋಚನೆ ಮಾಡಿದೆ, ಜನರ ಆರೋಗ್ಯಕ್ಕಾಗಿ ಮಹಾ ತ್ಯಾಗ ಮಾಡಿರುವ ವೈದ್ಯ ಬಳಗದ ಕೆಲಸವನ್ನು ಗೂಗಲ್ ಮೆಚ್ಚಿಕೊಂಡಿದೆ.
ಸದ್ಯ ವಿಶ್ವದಲ್ಲಿ 18 ಲಕ್ಷದ 50 ಸಾವಿರ ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ. 1 ಲಕ್ಷದ 14 ಸಾವಿರ ಜನರು ಇದರಿಂದ ಮರಣ ಹೊಂದಿದ್ದಾರೆ.












Click it and Unblock the Notifications