ಬೊಕ್ಕೆ ಬೇಡ, ಮೋದಿಯವರಿಗೆ ಪುಸ್ತಕ ನೀಡಿ: ಗೃಹ ಸಚಿವಾಲಯ

Posted By:
Subscribe to Oneindia Kannada

ನವದೆಹಲಿ, ಜುಲೈ 17: ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿಯವರು ದೇಶದಾದ್ಯಂತ ಭಾಗವಹಿಸುವ ಯಾವುದೇ ಕಾರ್ಯಕ್ರಮದಲ್ಲಿ ಅವರಿಗೆ ಹೂಗುಚ್ಚ ನೀಡುವಂತಿಲ್ಲ, ಬದಲಾಗಿ ಖಾದಿಯಿಂದ ಮಾಡಿದ ಕರ್ಚಿಫ್ ಮೇಲೊಂದು ಹೂವಿಟ್ಟು ಅಥವಾ ಯಾವುದಾದರೊಂದು ಉತ್ತಮ ಪುಸ್ತಕ ನೀಡಿ ಎಂದು ಭಾರತೀಯ ಗೃಹ ಸಚಿವಾಲಯ, ಎಲ್ಲ ರಾಜ್ಯಗಳಿಗೂ ನಿರ್ದೇಶಿಸಿದೆ.

ಇದೊಂದು ಅಧಿಕೃತ ಪ್ರಕಟಣೆಯಾಗಿದ್ದು, ಎಲ್ಲ ರಾಜ್ಯಗಳೂ ಈ ನಿಯಮವನ್ನು ಗಂಭೀರವಾಗಿ ಪಾಲಿಸಬೇಕು ಎಂದು ಗೃಹ ಸಚಿವಾಲಯ ಹೇಳಿದೆ.

ಮೋದಿ ಸರ್ಕಾರದ ಮೇಲೆ ಶೇ 73 ಭಾರತೀಯರಿಗಿದೆ ನಂಬಿಕೆ!

Give Books to Narendra Modi instead of Bouquet: Home Ministry of India
Narendra Modi Government is trusted by 73% of Indians | Oneindia Kannada

ಪುಸ್ತಕ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ಇದರಿಂದ ಮನಶ್ಶಾಂತಿ ಪಡೆಯುವುದಕ್ಕೆ ಸಾಧ್ಯ. ಆದ್ದರಿಂದಲೇ ನನಗೆ ಹೂಗುಚ್ಚ ನೀಡುವ ಬದಲು ಒಂದು ಉತ್ತಮ ಪುಸ್ತಕವನ್ನೇ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ತಿಂಗಳಷ್ಟೇ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
No bouquet should be presented to Prime Minister Narendra Modi during his tours within the nation, the Ministry of Home Affairs on JUly 17th issued notice to states.
Please Wait while comments are loading...