ಚುನಾವಣಾ ಅಂಗಳಕ್ಕೆ ಗೌತಮ್ ಗಂಭೀರ್, ಪೂರ್ವ ದೆಹಲಿಯಿಂದ ಸ್ಪರ್ಧೆ
Recommended Video
ನವದೆಹಲಿ, ಏಪ್ರಿಲ್ 22: ಕ್ರಿಕೆಟ್ ಅಂಗಳದಲ್ಲಿ ಹೆಸರು ಮಾಡಿದ್ದ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಚುನಾವಣಾ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದು, ಪೂರ್ವ ದೆಹಲಿ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಲು ಸನ್ನದ್ಧರಾಗಿದ್ದಾರೆ.
ಒಂದು ತಿಂಗಳ ಹಿಂದಷ್ಟೆ (ಮಾರ್ಚ್ 22) ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದ ಕ್ರಿಕೆಟ್ ಗೌತಮ್ ಗಂಭೀರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಪೂರ್ವ ದೆಹಲಿ ಕ್ಷೇತ್ರದಿಂದ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಅಪ್ಪಟ ರಾಷ್ಟ್ರೀಯವಾದಿಯೆಂದು ಹೆಸರುಗಳಿಸಿರುವ, ಕುಟುಕು ಟ್ವೀಟ್‌ಗಳಿಂದ ಖ್ಯಾತರಾಗಿರುವ ಗೌತಮ್ ಗಂಭೀರ್ ಅವರು ದೆಹಲಿಯವರೇ ಆಗಿದ್ದು, ಅಲ್ಲಿಂದಲೇ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಿರುವ ಬಿಜೆಪಿ ಸ್ಟಾರ್ ಅಭ್ಯರ್ಥಿ ಮೂಲಕ ಗೆಲುವಿನ ರುಚಿ ನೋಡುವ ತವಕದಲ್ಲಿದೆ.

ಕಳೆದ ಕೆಲ ವರ್ಷದಿಂದ ಕ್ರಿಕೆಟ್‌ನಲ್ಲಿ ಮಂಕಾಗಿದ್ದ ಗೌತಮ್ ಗಂಭೀರ್ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ, ಕೊನೆಗೆ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು, ಐಪಿಎಲ್‌ಗೂ ಸಹ ನಿವೃತ್ತಿ ಘೋಷಿಸಿ ಸಕ್ರಿಯ ರಾಜಕಾರಣಕ್ಕೆ ತೊಡಗಿದ್ದರು.
ಗೌತಮ್ ಗಂಭೀರ್ ಅವರು ಪೂರ್ವ ದೆಹಲಿಯಲ್ಲಿ ಕಾಂಗ್ರೆಸ್‌ನ ಅರವಿಂದ ಸಿಂಗ್ ಲೌವ್ಲಿ ಮತ್ತು ಆಮ್‌ಆದ್ಮಿ ಪಕ್ಷದ ಆತಿಶಿ ಅವರನ್ನು ಎದುರಿಸಲಿದ್ದಾರೆ.
ಗಂಭೀರ್‌ಗೆ ಟಿಕೆಟ್ ನೀಡಿರುವ ಪೂರ್ವ ದೆಹಲಿ ಕ್ಷೇತ್ರದ ಪ್ರಸ್ತುತ ಸಂಸದೆ ಬಿಜೆಪಿಯ ಮೀನಾಕ್ಷಿ ಲೇಖಿ ಅವರಿಗೆ ನವದೆಹಲಿ ಕ್ಷೇತ್ರದಿಂದ ಚುನಾವಣೆ ಎದುರಿಸಲಿದ್ದಾರೆ. ಅವರು ಕಾಂಗ್ರೆಸ್‌ನ ಅಜೆಯ್ ಮಾಕೆನ್ ಮತ್ತು ಎಎಪಿಯ ಬ್ರಜೇಶ್ ಗೊಯ್ಲಾ ಅವರನ್ನು ಎದುರಿಸಲಿದ್ದಾರೆ.












Click it and Unblock the Notifications