• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಫೇಲ್: ರಿಲಯನ್ಸ್ ಜತೆ ಒಪ್ಪಂದ ಮಾಡಿಕೊಳ್ಳದೆ ಬೇರೆ ಆಯ್ಕೆಯೇ ಇರಲಿಲ್ಲ!

|

ನವದೆಹಲಿ, ಅಕ್ಟೋಬರ್ 11: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಫ್ರಾನ್ಸ್‌ನ ಮಾಧ್ಯಮ ಬೆಂಬಲ ದೊರೆತಿದೆ.

59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ವಿಮಾನಗಳ ತಯಾರಿಕೆಗೆ ಅನಿಲ್ ಅಂಬಾನಿ ಅವರ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಅನ್ನು ಭಾರತದ ಪಾಲುದಾರ ಕಂಪೆನಿಯನ್ನಾಗಿ ಆಯ್ದುಕೊಳ್ಳುವುದು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆಗೆ ಅನಿವಾರ್ಯವಾಗಿತ್ತು ಎಂದು ಫ್ರಾನ್ಸ್‌ನ ಮಾಧ್ಯಮ ವೆಬ್‌ಸೈಟ್‌ ಒಂದು ವರದಿ ಮಾಡಿದೆ.

ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ

ಡಸಾಲ್ಟ್ ಏವಿಯೇಷನ್‌ನ ಆಂತರಿಕ ದಾಖಲೆಯೊಂದರ ಪ್ರಕಾರ, ಸಂಸ್ಥೆಗೆ ರಿಲಯನ್ಸ್ ಹೊರತುಪಡಿಸಿ ಬೇರೆ ಆಯ್ಕೆಯನ್ನೇ ನೀಡಿರಲಿಲ್ಲ ಎನ್ನಲಾಗಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೂರು ದಿನಗಳ ಫ್ರಾನ್ಸ್‌ ಭೇಟಿಗಾಗಿ ಬುಧವಾರ ರಾತ್ರಿ ತೆರಳಿದ ಬೆನ್ನಲ್ಲೇ ಈ ವರದಿ ಪ್ರಕಟವಾಗಿದೆ.

ದಾಖಲೆ ಇದೆ ಎಂದ ವೆಬ್‌ಸೈಟ್

'ಮಿಡಿಯಾಪಾರ್ಟ್' ಎಂಬ ಫ್ರಾನ್ಸ್‌ನ ತನಿಖಾ ವೆಬ್‌ಸೈಟ್ ಕಳೆದ ತಿಂಗಳು ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಒಲಾಂಡ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅದು ವರದಿ ಮಾಡಿದೆ.

ರಿಲಯನ್ಸ್ ಡಿಫೆನ್ಸ್ ಅನ್ನೇ ಭಾರತದ ಪಾಲುದಾರನನ್ನಾಗಿ ಆಯ್ಕೆ ಮಾಡುವಂತೆ ಭಾರತ ಸರ್ಕಾರ ಒತ್ತಡ ಹೇರಿತ್ತು ಎಂಬ ಒಲಾಂಡ್ ಅವರ ಆರೋಪ ಸತ್ಯವಾಗಿದೆ. ಇದನ್ನು ಸಾಬೀತುಪಡಿಸಿರುವ ದಾಖಲೆ ತನ್ನ ಬಳಿ ಇದೆ ಎಂದು ಅದು ತಿಳಿಸಿದೆ.

ಒಪ್ಪಂದ ಕಡ್ಡಾಯವಾಗಿತ್ತು

ರಿಲಯನ್ಸ್ ಡಿಫೆನ್ಸ್ ಜತೆ ಒಪ್ಪಂದ ಮಾಡಿಕೊಳ್ಳಲೇಬೇಕು ಎಂಬಂತೆ ಒತ್ತಾಯ ಇರುವ ಅಂಶವನ್ನು ಈ ದಾಖಲೆ ತೋರಿಸುತ್ತದೆ ಎಂದು ಮಿಡಿಯಾಪಾರ್ಟ್ ಹೇಳಿದೆ. ಡಸಾಲ್ಟ್‌ ಕಂಪೆನಿಯ ಉಪ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲೋಯಿಕ್ ಸೆಗಲೆನ್ ನಾಗಪುರದಲ್ಲಿ ಸಿಬ್ಬಂದಿ ಪ್ರತಿನಿಧಿಗಳ ಮುಂದೆ ಮಂಡಿಸಿದ್ದ ಒಪ್ಪಂದದ ವಿವರವನ್ನು ಅದು ಉಲ್ಲೇಖಿಸಿದೆ.

ರಿಲಯನ್ಸ್ ಡಿಫೆನ್ಸ್ ಜತೆ ಮಾಡಿಕೊಂಡ ಒಪ್ಪಂದವು ಅನಿವಾರ್ಯ ಮತ್ತು ಕಡ್ಡಾಯವಾಗಿತ್ತು. ಆಯ್ಕೆಯ ಅವಕಾಶವೇ ಇರಲಿಲ್ಲ ಎಂದು ವರದಿ ಹೇಳಿದೆ.

ರಫೇಲ್ ಖರೀದಿ ಬಗ್ಗೆ ಮೋದಿಗೆ 6 ಪ್ರಶ್ನೆ ಮುಂದಿಟ್ಟ ಯಶವಂತ್ ಸಿನ್ಹಾ

ಒಲಾಂಡ್ ಹೇಳಿದ್ದೇನು?

ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್‌ಅನ್ನು ನಾಮನಿರ್ದೇಶನ ಮಾಡುವಂತೆ ಭಾರತ ಸರ್ಕಾರವೇ ಫ್ರೆಂಚ್ ಸರ್ಕಾರವನ್ನು ಕೋರಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಒಲಾಂಡ್ ಹೇಳಿದ್ದರು.

ಭಾರತ ಸರ್ಕಾರವೇ ರಿಲಯನ್ಸ್ ಸಂಸ್ಥೆ ಹೆಸರು ಸೂಚಿಸಿತ್ತು. ಡಸಾಲ್ಟ್‌ಗೆ ಬೇರೆ ಯಾವುದೇ ಆಯ್ಕೆ ಇಲ್ಲದ ಕಾರಣ ತನಗೆ ನೀಡಿದ ಕಂಪೆನಿಯನ್ನು ಒಪ್ಪಿಕೊಳ್ಳಬೇಕಾಯಿತು ಎಂದು ಮೀಡಿಯಾಪಾರ್ಟ್‌ನಲ್ಲಿ ಅವರು ಹೇಳಿದ್ದರು.

ಅಧಿಕಾರಿಯ ಆಕ್ಷೇಪದ ನಡುವೆಯೇ 36 ರಫೇಲ್ ಖರೀದಿ ಒಪ್ಪಂದಕ್ಕೆ ಸಹಿ

ಮೋದಿ ಸಮರ್ಥಿಸಿಕೊಂಡಿದ್ದ ಅಧ್ಯಕ್ಷ

ರಫೇಲ್ ಡೀಲ್ ಭಾರತ ಮತ್ತು ಫ್ರೆಂಚ್ ಸರ್ಕಾರಗಳ ವ್ಯವಹಾರವಷ್ಟೇ. ಇದರಲ್ಲಿ ಯಾರ ವೈಯಕ್ತಿಕ ಹಿತಾಸಕ್ತಿಯೂ ಇಲ್ಲ' ಎಂದು ಫ್ರಾನ್ಸ್‌ನ ಹಾಲಿ ಅಧ್ಯಕ್ಷ ಇಮ್ಯಾನ್ಯುಲ್ ಮ್ಯಾಕ್ರೋನ್ ಹೇಳಿದ್ದರು.

"ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದು ಸತ್ಯ. ರಫೇಲ್ ಡೀಲ್ ಸರ್ಕಾರ ಮತ್ತು ಸರ್ಕಾರದ ನಡುವೆ ನಡೆದ ಚರ್ಚೆ. ರಕ್ಷಣೆಯ ವಿಷಯದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಅತ್ಯುತ್ತಮವಾದ ಸಂಬಂಧವಿದೆ. ಇದರಲ್ಲಿ ಯಾರ ಹಿತಾಸಕ್ತಿಯೂ ಇಲ್ಲ. ಇದಕ್ಕೆ ಹೊರತಾಗಿ ಈ ವಿಷಯದ ಬಗ್ಗೆ ನಾನು ಏನನ್ನೂ ಮಾತನಾಡಲು ಇಷ್ಟಪಡುವುದಿಲ್ಲ" ಎಂದು ಮ್ಯಾಕ್ರೋನ್ ತಿಳಿಸಿದ್ದರು.

ರಫೇಲ್ ಡೀಲ್: ಮೋದಿ ಬೆಂಬಲಕ್ಕೆ ನಿಂತ ಫ್ರೆಂಚ್ ಅಧ್ಯಕ್ಷ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
French website Mediapart on Wednesday reported that Dassault had no option but to tie up with Anil Ambani's Reliance Defence as the main offsets partner.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more