ದೆಹಲಿಯಲ್ಲಿ ಅಪಘಾತ, ನಾಲ್ವರು ವೇಟ್‌ ಲಿಫ್ಟರ್ಸ್ ಸಾವು

Posted By:
Subscribe to Oneindia Kannada

ಚಂಡೀಗಢ, ಜನವರಿ 07: ದೆಹಲಿ ಹರಿಯಾಣ ಗಡಿಭಾಗದಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ವೇಟ್‌ ಲಿಫ್ಟರ್‌ಗಳು ದುರಂತ ಸಾವು ಕಂಡಿದ್ದಾರೆ.

ಮೃತರದಲ್ಲಿ ಓರ್ವ ವಿಶ್ವ ಚಾಂಪಿಯನ್‌ ಮಿಕ್ಕವರು ರಾಷ್ಟ್ರಮಟ್ಟದ ವೇಟ್‌ ಲಿಫ್ಟರ್‌ಗಳು ಎಂದು ತಿಳಿದು ಬಂದಿದೆ.

Four weight-lifters killed in accident near Delhi-Haryana border

ದೆಹಲಿಯ ಅಲಿಪುರ್ ಗ್ರಾಮದ ಬಳಿ ಮುಂಜಾನೆ 4 ಗಂಟೆ ಸುಮಾರಿಗೆ ನಾಲ್ವರಿದ್ದ ಸ್ವಿಫ್ಟ್ ಡಿಸೈರ್ ಕಾರು ರಾಷ್ಟ್ರೀಯ ಹೆದ್ದಾರಿ 01ರ ದೆಹಲಿ ಪಾಣಿಪಟ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಮೊದಲಿಗೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಎಲೆಕ್ಟ್ರಿಕ್ ಕಂಬಕ್ಕೆ ಗುದ್ದಿದೆ.ದೆಹಲಿಯ ಮಂಜು ಮುಸುಕಿದ ವಾತಾವರಣದಲ್ಲೂ ಚಾಲಕ ಅತಿವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

2017ರಲ್ಲಿ ರಷ್ಯಾದ ಮಾಸ್ಕೋದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಚಿನ್ನದ ಪದಕ ಗೆದ್ದಿದ್ದ ವೇಟ್‌ ಲಿಫ್ಟರ್‌ ಸಕ್ಷಮ್‌ ಯಾದವ್‌ ಹಾಗೂ ಮತ್ತೊಬ್ಬ ವೈಟ್ ಲಿಫ್ಟರ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರನ್ನು ದೆಹಲಿಯ ಶಾಲಿಮಾರ್ ಬಾಗ್ ನಲ್ಲಿರುವ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four national-level weight-lifters were killed and two others, including a world champion, were seriously injured when the car that they were travelling met with an accident near the Delhi-Haryana border on Sunday, police said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ