ದೆಹಲಿಯಲ್ಲಿ4 ಲಕ್ಷ ವಾಹನಗಗಳಿಗೆ ಜಪ್ತಿಯಾಗುವ ಭೀತಿ!
ನವದೆಹಲಿ, ನವೆಂಬರ್ 10: ಮಾಲಿನ್ಯ ನಿಯಂತ್ರಣದ ಕುರಿತು ಗಂಭೀರವಾಗಿ ಚಿಂತಿಸುತ್ತಿರುವ ರಾಜಧಾನಿ ದೆಹಲಿಯ ಸಾರಿಗೆ ಇಲಾಖೆ, ರಾಷ್ಟ್ರ ರಾಜಧಾನಿ ಪ್ರದೇಶ(NCR)ದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ವಾಹನಗಳನ್ನು(ಚತುಷ್ಚಕ್ರ ವಾಹನ) ವಶಕ್ಕೆ ಪಡೆಯುವುದಾಗಿ ಹೇಳಿದೆ.
ದೆಹಲಿಯಲ್ಲಿ ಕಳೆದ ಒಂದು ವಾರದಿಂದ ಧೂಳು ತುಂಬಿದ ಗಾಢ ಮಂಜಿನಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಈ ಮಲೀನ ಮಂಜು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಾಲಿನ್ಯ ನಿಯಂತ್ರಣದ ಕುರಿತು ಗಂಭೀರವಾಗಿ ಚಿಂತಿಸದ ದೆಹಲಿ ಸರ್ಕಾರವನ್ನು ರಾಷ್ಟ್ರೀಯ ಹಸಿರು ಪ್ರಾಧಿಕಾರ ತರಾಟೆಗೆ ತೆಗೆದುಕೊಂಡ ನಂತರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

10 ವರ್ಷಕ್ಕೂ ಹಳೆಯ ಡಿಸೇಲ್ ವಾಹನ ಮತ್ತು 15 ವರ್ಷಗಳಷ್ಟು ಹಳೆಯ ಪೆಟ್ರೋಲ್ ವಾಹನಗಳನ್ನು ವಶಕ್ಕೆ ಪಡೆಯುವುದಾಗಿ ಸಾರಿಗೆ ಇಲಾಖೆ ಹೇಳಿದೆ.
ದೀಪಾವಳಿಯ ಸಮಯದಲ್ಲಿ ಸುಪ್ರೀಂ ಕೋರ್ಟ್ ಪಟಾಕಿಗಳ ಮೇಲೆ ನಿಷೇಧ ಹೇರಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications