ದೆಹಲಿ ಐಐಟಿ ಕ್ಯಾಂಪಸಲ್ಲಿ ಮಾಜಿ ವಿದ್ಯಾರ್ಥಿನಿ ಆತ್ಮಹತ್ಯೆ

ನವದೆಹಲಿ, ಜೂನ್ 08: ದೆಹಲಿ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಹಳೆ ವಿದ್ಯಾರ್ಥಿನಿಯೊಬ್ಬರು, ಕಾಲೇಜ್ ಕ್ಯಾಂಪಸ್ಸಿನಲ್ಲಿ ಶುಕ್ರವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು 31 ವರ್ಷ ವಯಸ್ಸಿನ ಅನ್ಷುಂ ಗುಪ್ತ ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ಐಐಟಿ ಕ್ಯಾಂಪಸಿನ ಕಟ್ಟಡದ ಏಳನೆ ಮಹಡಿಯಿಂದ ಕೆಳಗೆ ಧುಮುಕಿದ್ದಾರೆ. ಹತ್ತಿರದಲ್ಲಿ ಯಾವುದೇ ಆತ್ಮಹತ್ಯಾ ಪತ್ರ ಕಂಡು ಬಂದಿಲ್ಲ. ಸಾವಿಗೆ ಕಾರಣ ಕೂಡಾ ನಿಖರವಾಗಿ ತಿಳಿದಿಲ್ಲ ಎಂದು ಡೆಪ್ಯುಟಿ ಕಮಿಷನರ್ (ನೈಋತ್ಯ) ಮಿಲಿಂದ್ ಮಹದೇವ್ ದುಂಬೆರೆ ಹೇಳಿದ್ದಾರೆ. 2007-10ರಲ್ಲಿ ಬ್ಯಾಚುಲರ್ಸ್ ಇನ್ ಟೆಕ್ನಾಲಜಿ ವ್ಯಾಸಂಗ ಮಾಡಿದ್ದ ಅನ್ಷುಂ ಗುಪ್ತಾ ಅವರು ಇಂದು ಕಾಲೇಜಿಗೆ ಬಂದಿದ್ದೇಕೆ ಎಂಬುದು ಕೂಡಾ ತಿಳಿದು ಬಂದಿಲ್ಲ.

ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ದೂರವಾಣಿ ಕೇಂದ್ರದಿಂದ ಈ ಘಟನೆ ಬಗ್ಗೆ ಕರೆ ಬಂದಿತು. ಗುಪ್ತಾ ಅವರು ಐಆರ್ ಡಿ ಕಟ್ಟಡದಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಂದಿತು.

Former IIT Delhi student commits suicide on campus

ಘಟನೆ ಬಗ್ಗೆ ಆಕೆಯ ಗೆಳತಿಯರು, ಅಧ್ಯಾಪಕರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಮೃತ ದೇಹವನ್ನು ಏಮ್ಸ್ ಆಸ್ಪತ್ರೆಗೆ ಕಳಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+