ದೆಹಲಿಯ ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ: ನರೇಂದ್ರ ಮೋದಿ
ನವದೆಹಲಿ, ಫೆಬ್ರವರಿ 03: ದೆಹಲಿಯಲ್ಲಿ ಸುರಕ್ಷತೆಗಾಗಿ, ಸುಗಮವಾದ ಜೀವನಕ್ಕೆ ಬಿಜೆಪಿ ಗೆ ಮತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದರು.
ದೆಹಲಿ ವಿಧಾನಸಭೆ ಚುನಾವಣೆಯ ತಮ್ಮ ಮೊದಲ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕೇಂದ್ರ ಸರ್ಕಾರದ ಸಾಧನೆಗಳ ಜೊತೆಗೆ, ಹಲವು ಭರವಸೆಗಳನ್ನು ನೀಡಿದರು. ಜೊತೆಗೆ ಎಎಪಿ ವಿರುದ್ಧ ವಾಗ್ದಾಳಿಯನ್ನೂ ಮಾಡಿದರು.
'ಈ ಚುನಾವಣೆಯು ದೆಹಲಿ ಜನರ ಭವಿಷ್ಯ ನಿರ್ಧರಿಸುತ್ತದೆ. ಸುರಕ್ಷತೆಯಿಂದ ಬದುಕಬೇಕು ಎಂದುಕೊಂಡಿದ್ದರೆ ಬಿಜೆಪಿಗೆ ಮತ ನೀಡಿ' ಎಂದು ಮೋದಿ ಹೇಳಿದರು.

'ಲೋಕಸಭೆ ಚುನಾವಣೆ ವೇಳೆ ದೆಹಲಿ ಜನ ಅಭಿವೃದ್ಧಿಗೆ ಪೂರಕವಾಗಿ ಮತ ನೀಡಿದ್ದರು. ಈಗ ದೆಹಲಿಯ ಜನ ತಮ್ಮ ವೈಯಕ್ತಿಕ ಅಭಿವೃದ್ಧಿಗೆ, ಸುರಕ್ಷತೆ ನೆಲಸಲು ಮತ ನೀಡಬೇಕಿದೆ ಎಂದು ಅವರು ಹೇಳಿದರು.
ಎಎಪಿ ಮೇಲೂ ವಾಗ್ದಾಳಿ ನಡೆಸಿದ ಮೋದಿ, ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆಗಳನ್ನು ವಿತರಿಸಲು ದೆಹಲಿ ಸರ್ಕಾರ ಬಿಡುತ್ತಿಲ್ಲ ಎಂದರು. 'ಬಿಜೆಪಿ ಧನಾತ್ಮಕ ರಾಜಕೀಯದಲ್ಲಿ ನಂಬಿಕೆ ಇಟ್ಟಿದೆ, ಬಿಜೆಪಿಗೆ ದೇಶದ ಅಭಿವೃದ್ಧಿ ಒಂದೇ ಮೂಲ ಮಂತ್ರ' ಎಂದು ಹೇಳಿದರು.
2022 ರ ವೇಳೆಗೆ ಕೇಂದ್ರ ಸರ್ಕಾರವು ಬಡವರಿಗೆ 'ಪಕ್ಕಾ ಹೌಸ್' ಮನೆ ಹಂಚುವ ಕಾರ್ಯ ಮುಗಿಸಲಿದೆ ಎಂಬ ಭರವಸೆಯನ್ನೂ ಮೋದಿ ಅವರು ನೀಡಿದರು. ಸರ್ಕಾರದ ಸಾಧನೆಗಳ ಬಗ್ಗೆಯೂ ಮೋದಿ ಅವರು ಭಾಷಣದಲ್ಲಿ ಮಾತನಾಡಿದರು.












Click it and Unblock the Notifications