ದೆಹಲಿಯ ಜವಳಿ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ: 1 ಸಾವು

Written By:
Subscribe to Oneindia Kannada

ಕರೋಲ್ ಬಾಘ್, ಫೆಬ್ರವರಿ 10:ದೆಹಲಿಯ ಕರೋಲ್ ಬಾಘ್ ನಲ್ಲಿ ಕಟ್ಟಡವೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ವ್ಯಕ್ತಿ ಮೃತರಾದ ಘಟನೆ ಇಂದು(ಫೆ.10)ನಡೆದಿದೆ.

ಕರೋಲ್ ಬಾಘ್ ಪ್ರದೇಶದಲ್ಲಿದ್ದ ಜವಳಿ ಉತ್ಪಾದನಾ ಘಟಕವೊಂದಕ್ಕೆ ಬೆಂಕಿ ತಗುಲಿದ್ದು, ಅಗ್ನಿಶಾಮಕ ದಳದ ಐವರು ಸಿಬ್ಬಂದಿಗಳು ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತನಾಗಿದ್ದು, ಕಟ್ಟಡದೊಳಗೆ ಕೆಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Fire broke out at a garment manufacturing unit in Delhi

ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಬೆಮಕಿ ಆಕಸ್ಮಿಕದ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿದ್ದು, ವರ್ಷಾರಂಭಕ್ಕೂ ಮುನ್ನ ಮುಂಬೈನ ಕಮಲ್ ಮಿಲ್ಸ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಲ್ಲಿ 14 ಜನ ಮೃತರಾಗಿದ್ದರು. ಬೆಂಗಳೂರಿನ ಕೈಲಾಶ್ ಬಾರ್ ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಐವರು ಹತರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Fire broke out at a garment manufacturing unit in Delhi's Karol bagh, this morning. 5 fire tenders deployed at the spot. 1 dead.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ