2ಜಿ ತೀರ್ಪು ಕಾಂಗ್ರೆಸ್‌ಗೆ ಕೊಟ್ಟ 'ಪ್ರಾಮಾಣಿಕತೆ ಪತ್ರ' ಅಲ್ಲ: ಅರುಣ್ ಜೇಟ್ಲಿ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 21: 2ಜಿ ಹಗರಣದ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಹಣಕಾಸು ಸಚಿವ 'ನ್ಯಾಯಾಲಯದ ತೀರ್ಪನ್ನು ತನ್ನ ಒಳ್ಳೆತನಕ್ಕೆ ಸಿಕ್ಕ ಬಹುಮಾನ ಎಂಬಂತೆ ಕಾಂಗ್ರೆಸ್ ವರ್ತಿಸುತ್ತಿದೆ' ಎಂದು ವ್ಯಂಗ್ಯ ಮಾಡಿದರು.

ಇದು ನ್ಯಾಯಯುತ ತೀರ್ಪಲ್ಲ: ಸುಬ್ರಮಣಿಯನ್ ಸ್ವಾಮಿ

ಕಾಂಗ್ರೆಸ್ ನ ಯುಪಿಎ ಸರ್ಕಾರದ ಹಂಚಿಕೆ ನೀತಿಗಳು ಭ್ರಷ್ಟಾಚಾರವನ್ನು ಉತ್ತೇಜಿಸಲೆಂದೇ ವಿನ್ಯಾಸ ಮಾಡಲಾಗಿದೆ ಎಂದು ಟೀಕಿಸಿದ ಅರುಣ್ ಜೇಟ್ಲಿ 2007-08ರಲ್ಲಿ ಹರಾಜಿನಲ್ಲಿ 2ಜಿ ಸ್ಪೆಕ್ಟ್ರಮ್ ಅನ್ನು 2001ರ ಬೆಲೆಗೆ ಹಂಚಲಾಗಿತ್ತು, ಹಾಗಾಗಿ ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಾಂತರ ನಷ್ಟವಾಗಿತ್ತು ಎಂದು ಹೇಳಿದರು.

ಎ. ರಾಜಾಗೆ ಸಿಕ್ಕಿದ್ದು 3 ಸಾವಿರ ಕೋಟಿ ರು ಅಷ್ಟೇನಾ?

Finance minister Arun Jaitley statement on 2g verdict

ಕಾಂಗ್ರೆಸ್ ಹೇಳುತ್ತಿರುವ 'ಝೀರೊ ಲಾಸ್' ಹೇಳಿಕೆಯನ್ನು ತಿರಸ್ಕರಿಸಿದ ಅರುಣ್ ಜೇಟ್ಲಿ 2012ರಲ್ಲಿ ಸುಪ್ರಿಂ ಕೋರ್ಟ್ 2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆಯ ಒಪ್ಪಂದವನ್ನು ಸುಪ್ರಿಂ ಕೋರ್ಟ್ ರದ್ದುಗೊಳಿಸಿದ್ದನ್ನು ಕಾಂಗ್ರೆಸ್ ಮರೆಯಬಾರದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Finance Minister Arun Jaitley said the Congress should not treat the 2G verdict as a "badge of honour".

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ