Fact Check; ಮುಸ್ಲಿಂ ಗೌಳಿಗರಿಗೆ ಹಾಲು ಮಾರಾಟಕ್ಕೆ ಬಿಡದ ಜನ
ನವದೆಹಲಿ, ಏಪ್ರಿಲ್ 21: ಕೊರೊನಾ ಹಾವಳಿಯಿಂದ ದೇಶಾದ್ಯಂತ ಸುಳ್ಳು ಸುದ್ದಿಗಳು ಸಾಕಷ್ಟು ಅವಾಂತರ ಸೃಷ್ಟಿಸುತ್ತಿವೆ. ಅದರಲ್ಲೂ ತಬ್ಲಿಘಿ ಜಮಾತ್ ನಿಂದ ಬಹಳಷ್ಟು ಜನ ಕೊರೊನಾ ಸೋಂಕಿಗೆ ತುತ್ತಾದ ನಂತರ ಕೋಮು ಭಾವನೆ ಕೆರಳಿಸುವಂತ ಘಟನೆಗಳು ನಡೆಯುತ್ತಿವೆ.
ಇದೇ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದದ ಹೊಸೈರಪುರ್ ಜಿಲ್ಲೆಯ ಮುಸ್ಲಿಂ ಗೌಳಿಗರಿಂದ ಉನಾ ಜಿಲ್ಲೆಯ ಕೆಲವು ಗ್ರಾಮಗಳು ಮುಸ್ಲಿಂರಿಂದ ಹಾಲು ಸ್ವೀಕರಿಸಲು ಹಿಂದೇಟು ಹಾಕಿದ್ದಲ್ಲದೇ ತಮ್ಮ ಗ್ರಾಮಗಳಿಗೆ ಮುಸ್ಲಿಂರು ಬರಬಾರದು ಎಂದು ದೊಣ್ಣೆ ಬಡಿಗೆ ಹಿಡಿದು ಗ್ರಾಮಗಳಲ್ಲಿ ಕಾವಲು ಕಾಯುತ್ತಿದ್ದಾರೆ. ಈ ವೇಳೆ ಹಾಲು ಮಾರಲು ಹೋದ ಮುಸ್ಲಿಂ ವ್ಯಕ್ತಿಗಳನ್ನು ಥಳಿಸಿರುವ ಘಟನೆ ನಡೆದಿತ್ತು.
ಇದಕ್ಕೆ ಕಾರಣ ಪರಿಶೀಲಿಸಿದಾಗ ಗ್ರಾಮಗಳ ಜನರು, ಈ ಮುಸ್ಲಿಂ ವ್ಯಕ್ತಿಗಳಿಂದ ಕೊರೊನಾ ವೈರಸ್ ಹರಡುತ್ತೆ ಎಂದು ವದಂತಿಗಗಳನ್ನು ನಂಬಿ ಮುಸ್ಲಿಂ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು. ಇದರಿಂದ ಸಾವಿರಾರು ಲೀಟರ್ ಹಾಲನ್ನು ಗೌಳಿಗರು ನಾಶ ಮಾಡಿದ್ದಾರೆ. ಅಲ್ಲದೆ ಗ್ರಾಮಗಳಲ್ಲಿ ಹಾಲು ಮಾರಾಟ ಮಾಡುವುದಕ್ಕೆ ನಿರ್ಬಂಧ ವಿಧಿಸಿರುವುದರಿಂದ ಗೌಳಿಗರು ಬದುಕು ನಡೆಸುವುದು ಕಷ್ಟವಾಗಿದೆ.

ಈ ಕುರಿತು ಗ್ರಾಮಗಳಿಗೆ ಭೇಟಿ ನೀಡಿರುವ ಊನಾ ಜಿಲ್ಲಾ ಅಧಿಕಾರಿಗಳು ಮುಸ್ಲಿಂ ವ್ಯಕ್ತಿಗಳಿಂದ ಕೊರೊನಾ ಹರಡುತ್ತೆ ಎಂಬುದು ವದಂತಿ. ಇದನ್ನು ನಂಬಬಾರದು. ಲಾಕ್‌ಡೌನ್ ಸಮಯದಲ್ಲಿ ಹಾಲು ಮಾರಾಟ ಅಗತ್ಯ ಸೇವೆ ಎಂದು ಪರಿಗಣಿಸಲಾಗಿದೆ. ಹಲ್ಲೆ, ಗಲಬೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications