• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Fact Check: ಪಾಕ್‌ನಲ್ಲಿ ಕೊರೊನಾ ರೋಗಿಯನ್ನು ಗುಂಡಿಟ್ಟು ಕೊಂದರಾ?

|

ನವದೆಹಲಿ, ಏಪ್ರಿಲ್ 28: ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಸಕತ್ ವೈರಲ್ ಆಗಿದೆ. ಅದು ಕೋವಿಡ್ 19 ನಿಂದ ಚೇತರಿಸಿಕೊಂಡ ಬಂದ ವ್ಯಕ್ತಿ ಸಂಭ್ರಮಾಚರಣೆ ಮಾಡಲು ಹೋಗಿ, ಗುಂಡು ಬಡಿದು ಮೃತಪಟ್ಟಿರುವುದು ಎಂಬುದು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಸಾಮಾಜಿಕ ಜಾಲತಾಣಗಳಲ್ಲಿ, 'ಇದು ಪಾಕಿಸ್ತಾನದಲ್ಲಿ ನಡೆದ ಘಟನೆ. ನೋಡಿ ಪಾಕಿಸ್ತಾನದಲ್ಲಿ ಯಾವ ರೀತಿ ಜನ ಇದ್ದಾರೆ' ಎಂದು ಕುಹಕವಾಡಿದ್ದರು.

ಈ ಬಗ್ಗೆ ಒನ್ ಇಂಡಿಯಾ ಪ್ಯಾಕ್ಟ್ ಚೆಕ್ ವಿಭಾಗ ವಿಡಿಯೋವನ್ನು ಪರಿಶೀಲಿಸಿದಾಗ, ಇದು ಪಾಕಿಸ್ತಾನದಲ್ಲಿ ನಡೆದದ್ದಲ್ಲ ಎಂಬುದು ಬಹಿರಂಗವಾಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತಮ್ಮ ಗಾಳಿಯಲ್ಲಿ ಗುಂಡು ಹಾರಿಸುತ್ತಾ, ಸಂಭ್ರಮಾಚರಣೆ ಮಾಡುತ್ತಿರುತ್ತಾನೆ. ಅಲ್ಲಿಗೆ ಕಾರ್‌ನಲ್ಲಿ ಬಂದ ವ್ತಕ್ತಿಯನ್ನು ಸ್ವಾಗತಿಸಲು ಮತ್ತಷ್ಟು ಗುಂಡುಗಳನ್ನು ಗಾಳಿಯಲ್ಲಿ ಹಾರಿಸುತ್ತಾನೆ. ಹಾರಿಸುತ್ತಾ ಹಾರಿಸುತ್ತಾ ಕಾರ್‌ನಿಂದ ಇಳಿದ ವ್ಯಕ್ತಿಗೆ ಆಕಸ್ಮಿಕವಾಗಿ ಗುಂಡು ಹಾರಿಸುತ್ತಾನೆ.

ಈ ಘಟನೆ ಜೋರ್ಡಾನ್‌ನಲ್ಲಿ ನಡೆದಿದ್ದು ಎನ್ನಲಾಗಿದೆ. ಗುಂಡು ತಗುಲಿ ಮೃತಪಟ್ಟ ವ್ಯಕ್ತಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದಕ್ಕೆ ಆತನ ಬೆಂಬಲಿಗರು ಸಂಭ್ರಮಾಚರಣೆ ಮಾಡುವ ವೇಳೆ ಈ ಘಟನೆ ನಡೆದಿತ್ತು. ಮೃತಪಟ್ಟ ವ್ಯಕ್ತಿ ಜೈಲಿನಲ್ಲಿ ಕೊರೊನಾ ಹರಡುತ್ತದೆ ಎಂಬ ಕಾರಣಕ್ಕೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ.

English summary
Fact Check: Man Being Accidentally Shot Video Was Not From Pakistan. This video from Jordan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X