ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಕು ದೃಢಪಟ್ಟ 6-12 ತಿಂಗಳ ಬಳಿಕ ಮತ್ತೆ ಕಾಣಿಸಿಕೊಳ್ಳಲಿದೆ ಕೋವಿಡ್‌ - ತಜ್ಞರ ಎಚ್ಚರಿಕೆ

|
Google Oneindia Kannada News

ನವದೆಹಲಿ, ಮೇ 20: ಕೊರೊನಾ ಸೋಂಕು ಬಂದು ಚೇತರಿಸಿಕೊಂಡ ಮೂರು ತಿಂಗಳ ನಂತರ ಯಾವುದೇ ಸಂದರ್ಭದಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎನ್.ಕೆ. ಅರೋರಾ, ಕೊರೊನಾ ಕೆಲವೊಮ್ಮೆ ಹೊಸ ಹೊಸದಾದ ರೋಗಲಕ್ಷಣಗಳನ್ನು ಹೊಂದಿರುತ್ತದೆ. ನಾವು ಕೊರೊನಾ ಸೋಂಕು ಎಷ್ಟು ದೀರ್ಘ ಕಾಲದವರೆಗೆ ವ್ಯಕ್ತಿಯ ದೇಹದಲ್ಲಿ ಇರುತ್ತದೆ ಎಂಬ ಬಗ್ಗೆ ಸಂಶೋದನೆ ನಡೆಸಿದಾಗ, ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ನಂತರ ಆರು ತಿಂಗಳಿನಿಂದ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಳ್ಳುವುದು ನಮಗೆ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

 ಸಿದ್ದರಾಮಯ್ಯನವರ ಹಿಂದಿನ ತಂತ್ರಗಾರಿಕೆಯನ್ನು ಅವರಿಗೇ ತಿರುಗಿಸಿಬಿಟ್ಟ ಬಿಎಸ್ವೈ ಸಿದ್ದರಾಮಯ್ಯನವರ ಹಿಂದಿನ ತಂತ್ರಗಾರಿಕೆಯನ್ನು ಅವರಿಗೇ ತಿರುಗಿಸಿಬಿಟ್ಟ ಬಿಎಸ್ವೈ

ಇನ್ನು ಭಾರತ ಮತ್ತು ಇತರ ದೇಶಗಳಲ್ಲಿ ಮರು ಸೋಂಕುಗಳು ವಿರಳವಾಗಿದೆ. ಆದರೆ ಕೊರೊನಾದಿಂದ ಚೇತರಿಸಿಕೊಂಡ ಮೂರು ತಿಂಗಳ ನಂತರ ಯಾವುದೇ ಸಮಯದಲ್ಲಿ ಸೋಂಕು ಮತ್ತೆ ಕಾಣಿಸಿಕೊಳ್ಳುವ ಸಂಭವವಿದೆ. ಈ ನಿಟ್ಟಿನಲ್ಲಿ ಲಸಿಕೆ ಉಪಯೋಗಕಾರಿ. ಲಸಿಕೆ ದೀರ್ಘಕಾಲದ ಸೋಂಕಿನಿಂದ ರಕ್ಷಿಸುತ್ತದೆ ಎಂದು ಹೇಳಿದ್ದಾರೆ.

Experts warn about long time COVID which shows symtoms after 6-12 months of the recovery

ಲಭ್ಯವಿರುವ ಮಾಹಿತಿ ಹಾಗೂ ಸಂಶೋಧನೆಯ ಪ್ರಕಾರ ಈ ದೀರ್ಘಕಾಲದ ಕೊರೊನಾ ಸೋಂಕು ಉಸಿರಾಟದ ತೊಂದರೆ, ಆಯಾಸ ಮೊದಲಾದ ಲಕ್ಷಣವನ್ನು ಒಳಗೊಂಡಿರುತ್ತದೆ. ಇನ್ನು ಕೆಲವರು ಒಮ್ಮೆ ಕೊರೊನಾ ಕಾಣಿಸಿಕೊಂಡ ಬಳಿಕ ಹಲವಾರು ವಾರಗಳು ಅಥವಾ ತಿಂಗಳುಗಳವರೆಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವುದಿಲ್ಲ. ಆದ್ದರಿಂದ ಇಷ್ಟೇ ದಿನ ಅಥವಾ ವಾರದಲ್ಲಿ ಕೊರೊನಾದಿಂದ ಗುಣಮುಖರಾಗಲು ಸಾಧ್ಯ ಎಂದು ಹೇಳಲಾಗದು ಎಂದು ಕೂಡಾ ಸ್ಪಷ್ಟಪಡಿಸಿದ್ದಾರೆ.

ಬಿ .1.617 ಅಧಿಕ ಸಾಂಕ್ರಾಮಿಕ

ಬಿ .1.617 ಎಂಬ ಕೊರೊನಾ ತಳಿಯು ಅಧಿಕ ಸಾಂಕ್ರಾಮಿಕ ಎಂದು ದೆಹಲಿಯ ಮಣಿಪಾಲ್ ಆಸ್ಪತ್ರೆಯ ಎಚ್‌ಒಡಿ ಸುಶಾಂತ್ ಚಂಬ್ರಾ ತಿಳಿಸಿದ್ದಾರೆ. ಚೇತರಿಕೆಯ ನಂತರವೂ ಕೆಲವರಲ್ಲಿ ಕೆಲವೊಂದು ಶ್ವಾಸಕೋಶದ ತೊಂದರೆ ಕಾಣಿಸಿಕೊಂಡಿದೆ. ಈ ಬಿ .1.617 ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳಲು ನಾಲ್ಕೈದು ತಿಂಗಳುಗಳು ಬೇಕಾಗುತ್ತದೆ ಎಂದು ಅಭಿಪ್ರಾಯಿಸಿದ್ದಾರೆ.

"ಕಳೆದ ಕೆಲವು ದಿನಗಳಲ್ಲಿ ಹಲವು ಪ್ರಕರಣಗಳನ್ನು ನಾವು ಗಮನಿಸಿದ್ದೇವೆ. ಈ ರೋಗಿಗಳು ಕೊರೊನಾದಂತಹ ರೋಗಲಕ್ಷಣಗಳನ್ನು ಹೊಂದಿದ್ದು ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬರುತ್ತಿದೆ. ಆದರೂ ನಾವು ಅವರನ್ನು ಕೊರೊನಾ ಚಿಕಿತ್ಸೆಗೆ ಒಳಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

Recommended Video

ಗಾಳಿಯಲ್ಲಿ ಸೀನಿದ್ರು , ಕೆಮ್ಮಿದ್ರು ಕೊರೊನ ಹರಡುತ್ತದೆ!! | Oneindia Kannada

English summary
Experts warn about long time COVID which shows symtoms after 6-12 months of the recovery.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X