ಇಡಿ ಮುಂದಿನ ಬೇಟೆ ಮನೀಶ್ ಸಿಸೋಡಿಯಾ: ಕೇಜ್ರಿವಾಲ್
ನವದೆಹಲಿ, ಜೂ. 2: "ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಚಿವ ಸತ್ಯೇಂದ್ರ ಜೈನ್ ಬಂಧಿಸಿದ ನಂತರ ಜಾರಿ ನಿರ್ದೇಶನಾಲಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ನಕಲಿ ಪ್ರಕರಣದಲ್ಲಿ ಬಂಧಿಸಲಾಗುವುದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
"ಸತ್ಯೇಂದ್ರ ಜೈನ್ ನಂತರ ಜಾರಿ ನಿರ್ದೇಶನಾಲಯ ಮನೀಶ್ ಸಿಸೋಡಿಯಾರನ್ನು ನಕಲಿ ಪ್ರಕರಣದಲ್ಲಿ ಬಂಧಿಸಲು ಬಯಸಿವೆ. ಮನೀಶ್ ಸಿಸೋಡಿಯಾ ಭಾರತದಲ್ಲಿ ಶಿಕ್ಷಣ ಕ್ರಾಂತಿಯ ಸಂಸ್ಥಾಪಕರಾಗಿದ್ದಾರೆ. ಕೇಂದ್ರ ಸರ್ಕಾರವು ಮನೀಶ್ ಸಿಸೋಡಿಯಾ ವಿರುದ್ಧ ನಕಲಿ ಪ್ರಕರಣ ದಾಖಲಿಸಲು ಕೇಂದ್ರದ ಸಂಸ್ಥೆಗೆ ಸೂಚಿಸಿದೆ. ಸಿಸೋಡಿಯಾರನ್ನು ಬಂಧಿಸಲು ಕೇಂದ್ರ ಸರಕಾರ ಬಯಸಿದೆ ಎಂದು ಮೂಲಗಳು ಖಚಿತಪಡಿಸಿವೆ. ನಾನು 18 ಲಕ್ಷ ವಿದ್ಯಾರ್ಥಿಗಳಿಗೆ ಕೇಳಲು ಬಯಸುತ್ತೇನೆ. ನಾನು ಮಕ್ಕಳ ಪೋಷಕರನ್ನು ಕೇಳಲು ಬಯಸುತ್ತೇನೆ. ಬಿಜೆಪಿ ನಿಮ್ಮ ಮನೀಶ್ ಸಿಸೋಡಿಯಾರನ್ನು ಭ್ರಷ್ಟರು ಎಂದು ಕರೆಯುತ್ತಿದ್ದಾರೆ. ನೀವು ಏನು ಯೋಚಿಸುತ್ತೀರಿ?" ಎಂದು ಕೇಜ್ರಿವಾಲ್ ಕೇಳಿದರು.

ಎಲ್ಲರನ್ನು ಕಂಬಿ ಹಿಂದೆ ಹಾಕಿ ಎಂದ ಕೇಜ್ರಿವಾಲ್
"ನಾನು ಎಲ್ಲ ಆಮ್ ಆದ್ಮಿ ನಾಯಕರನ್ನು ನಾಯಕರನ್ನು ಬಂಧಿಸುವಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸುತ್ತೇನೆ. ಎಎಪಿಯ ಎಲ್ಲಾ ಸಚಿವರು ಮತ್ತು ಶಾಸಕರನ್ನು ಕಂಬಿ ಹಿಂದೆ ಹಾಕುವಂತೆ ಮತ್ತು ಎಲ್ಲಾ ಕೇಂದ್ರೀಯ ಸಂಸ್ಥೆಗಳಿಗೆ ಒಂದೇ ಬಾರಿಗೆ ಎಲ್ಲಾ ತನಿಖೆಗಳನ್ನು ಮಾಡುವಂತೆ ನಾನು ಪ್ರಧಾನಿ ಮೋದಿಗೆ ವಿನಂತಿಸುತ್ತೇನೆ. ನಿಮಗೆ ಬೇಕಾದಷ್ಟು ದಾಳಿಗಳನ್ನು ಮಾಡಿ, ನೀವು ಒಮ್ಮೆಗೆ ಒಬ್ಬ ಸಚಿವರನ್ನು ಬಂಧಿಸಿ, ಇದು ಸಾರ್ವಜನಿಕ ಕೆಲಸಗಳಿಗೆ ಅಡ್ಡಿಪಡಿಸುತ್ತದೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಪಂಜಾಬ್ ಚುನಾವಣೆಗೆ ಸೇಡು
"ಮುಂಬರುವ ಹಿಮಾಚಲ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಈ ದಾಳಿಗಳು ನಡೆಯುತ್ತಿವೆ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಇದು ಪಂಜಾಬ್ ಚುನಾವಣೆಗೆ ಸೇಡು ಎಂದು ಹೇಳುತ್ತಾರೆ. ಕಾರಣ ಏನೇ ಇರಲಿ, ನಾವು ಬಂಧನಕ್ಕೆ ಹೆದರುವುದಿಲ್ಲ" ಎಂದು ಕೇಜ್ರಿವಾಲ್ ಹೇಳಿದರು.
ಐದು ವರ್ಷಗಳ ಹಿಂದೆ ಎಎಪಿ ನಾಯಕರ ಮೇಲೆ ಹಲವಾರು ದಾಳಿಗಳನ್ನು ನಡೆಸಲಾಯಿತು. ಆದರೆ ಇದುವರೆಗೂ ಏನೂ ಪತ್ತೆಯಾಗಿಲ್ಲ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಸಚಿವರ ಕುಟುಂಬಕ್ಕೆ ಸಂಬಂಧಿಸಿದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿತ್ತು.

ರಾಜಕೀಯ ಕಾರಣಗಳಿಂದ ಪ್ರೇರಣೆ
ಮೇ 31 ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, "ಸಚಿವ ಸತ್ಯೇಂದ್ರ ಜೈನ್ ಸರಕಾರ ಮತ್ತು ಆಮ್ ಆದ್ಮಿ ಪಕ್ಷದಲ್ಲಿ ತುಂಬಾ ನಿಷ್ಠೆ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಜೈನ್ ವಿರುದ್ಧದ ಪ್ರಕರಣವನ್ನು ನಾನು ಅಧ್ಯಯನ ಮಾಡಿದ್ದೇನೆ. ಇದು ಸಂಪೂರ್ಣವಾಗಿ ಸುಳ್ಳು ಮತ್ತು ರಾಜಕೀಯ ಕಾರಣಗಳಿಂದ ಪ್ರೇರೇಪಿಸಲ್ಪಟ್ಟಿದೆ ಮತ್ತು ಉದ್ದೇಶಪೂರ್ವಕವಾಗಿ ಅವರ ಮೇಲೆ ಈ ಪ್ರಕರಣ ದಾಖಲಿಸಲಾಗಿದೆ" ಎಂದು ಹೇಳಿದ್ದರು.

ಜೈನ್ ಆರೋಪ ಮುಕ್ತವಾಗಿ ಹೊರಬರುತ್ತಾರೆ
ತಮ್ಮ ಸರ್ಕಾರದ ರಸ್ತೆ ಅಭಿವೃದ್ಧಿ ಕಾರ್ಯಕ್ರಮದ ಪರಿಶೀಲನೆಯ ಸಂದರ್ಭದಲ್ಲಿ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, "ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಜೈನ್ ಆರೋಪ ಮುಕ್ತವಾಗಿ ಹೊರಬರುತ್ತಾರೆ. ಈ ಸುಳ್ಳು ಆರೋಪವು ಹಾಗೂ ಪ್ರಕರಣವೂ ಉಳಿಯುವುದಿಲ್ಲ" ಎಂದು ಹೇಳಿದ್ದರು.
ದೆಹಲಿಯ ಕೇಜ್ರಿವಾಲ್ ಸರ್ಕಾರದಲ್ಲಿ ಆರೋಗ್ಯ, ಗೃಹ ಮತ್ತು ಅಧಿಕಾರ ಸೇರಿದಂತೆ ವಿವಿಧ ಖಾತೆಗಳನ್ನು ಹೊಂದಿರುವ ಜೈನ್‌ರನ್ನು ಸೋಮವಾರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜೈನ್ ಅವರನ್ನು ತೆಗೆದುಹಾಕುವ ಬೇಡಿಕೆಯ ಬಗ್ಗೆ ಕೇಳಿದಾಗ, "ಆರೋಪದಲ್ಲಿ ಶೇಕಡಾ ಒಂದಾದರೂ ಸತ್ಯ ಅಂಶವಿದ್ದರೆ ಕ್ರಮ ತೆಗೆದುಕೊಳ್ಳುತ್ತಿದ್ದೆ" ಎಂದು ತಿಳಿಸಿದ್ದರು.












Click it and Unblock the Notifications