ಕಾರ್ತಿ ಚಿದಂಬರಂಗೆ ಮತ್ತೆ ಇಡಿ ಶಾಕ್, ಆಪ್ತರ ನಿವಾಸದ ಮೇಲೂ ದಾಳಿ

Posted By:
Subscribe to Oneindia Kannada

ನವದೆಹಲಿ, ಜನವರಿ 13: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಬೆಳಿಗ್ಗೆ ಶಾಕ್ ನೀಡಿದೆ.

ಕಾರ್ತಿ ಚಿದಂಬರಂ ಅವರ ಚೆನ್ನೈ ಹಾಗೂ ದೆಹಲಿ ನಿವಾಸ ಮೇಲೆ ದಾಳಿ ನಡೆಸಿರುವ ಇಡಿ ತಂಡ ಕಾರ್ತಿ ಅವರ ಆಪ್ತರ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಕಾರ್ತಿ ಅವರಿಗೆ ಸೇರಿದ ಕಚೇರಿಗಳ ಮೇಲೂ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಏರ್ಸೆಲ್ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಈ ಹಿಂದೆಯೂ ಸಿಬಿಐ ಮತ್ತು ಇಡಿ ಏರ್ಸೆಲ್ ಮ್ಯಾಕ್ಸಿಸ್ ಹಗರಣದ ಕುರಿತು ಕಾರ್ತಿ ಅವರನ್ನು ಸತತ ವಿಚಾರಣೆಗೆ ಒಳಪಡಿಸಿತ್ತು.

ED raid on Karthi Chidambaram's house in Chennai and Delhi

ಏರ್ಸೆಲ್ ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಲಾಯವು (ಇಡಿ) ಈ ಹಿಂದೆ ಕಾರ್ತಿ ಅವರಿಗೆ ಸೇರಿದ ಬ್ಯಾಂಕ್ ಖಾತೆ ಮತ್ತು ಎಪ್‌ಡಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
ED raid on Ex Finance minister Chidambaram's son Karthi Chidambaram. Karthi accused in Aircel Maxis case. ED investing the case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ