ಅಜಂ ಖಾನ್ ಹಾಗೂ ಮೇನಕಾ ಗಾಂಧಿಗೆ ಚುನಾವಣೆ ಪ್ರಚಾರಕ್ಕೆ ನಿಷೇಧ

ನವದೆಹಲಿ, ಏಪ್ರಿಲ್ 16: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ಸಮಾಜವಾದಿ ಪಕ್ಷದ ಅಜಂ ಖಾನ್ ಹಾಗೂ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರಿಗೆ ಚುನಾವಣಾ ಪ್ರಚಾರದಿಂದ ಸೋಮವಾರ ಚುನಾವಣಾ ಆಯೋಗ ನಿಷೇಧ ಹೇರಿದೆ. ಇಂಥದ್ದೇ ಆರೋಪದ ಮೇಲೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮಾಯಾವತಿ ವಿರುದ್ಧ ಕೂಡ ನಿಷೇಧ ಹೇರಲಾಗಿತ್ತು.

ಅಜಂ ಖಾನ್ ಗೆ ಮೂರು ದಿನಗಳ ನಿಷೇಧ ಹೇರಿದ್ದರೆ, ಮೇನಕಾ ಗಾಂಧಿಗೆ ಎರಡು ದಿನಗಳ ಅವಧಿಗೆ ಈ ನಿಷೇಧ ಇದೆ. ಮಂಗಳವಾರ ಬೆಳಗ್ಗೆ ಹತ್ತು ಗಂಟೆಯಿಂದ ಇದು ಚಾಲ್ತಿಗೆ ಬರಲಿದೆ. ನಟಿ ಜಯಪ್ರದಾ ಬಗ್ಗೆ ಸೊಂಟದ ಕೆಳಗಿನ ಮಾತನಾಡಿದ ಅಜಂ ಖಾನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಮ್ ಪುರ ಕ್ಷೇತ್ರದಲ್ಲಿ ಜಯಪ್ರದಾ ವಿರುದ್ಧ ಅಜಂ ಖಾನ್ ಸ್ಪರ್ಧಿಸುತ್ತಿದ್ದಾರೆ.

ನಾನು ಆಕೆಯನ್ನು (ಜಯಪ್ರದಾ) ರಾಮ್ ಪುರಕ್ಕೆ ಕರೆತಂದೆ. ಯಾರೂ ಆಕೆಯ ಮೈ ಮುಟ್ಟಕ್ಕೆ ನಾನು ಬಿಡಲಿಲ್ಲ, ಅದಕ್ಕೆ ನೀವು ಸಾಕ್ಷಿ ಇದ್ದೀರಿ. ಆಕೆಯ ನಿಜವಾದ ಮುಖ ತಿಳಿಯುವುದಕ್ಕೆ ಹದಿನೇಳು ವರ್ಷ ಬೇಕಾಯಿತು. ಆಕೆ ಖಾಕಿ ಒಳಚಡ್ಡಿ (ಬಿಜೆಪಿ ಸೇರಿದ್ದಕ್ಕೆ ಈ ರೀತಿಯ ಟೀಕೆ) ಧರಿಸುವುದು ಹದಿನೇಳು ದಿನದ ಹಿಂದಷ್ಟೇ ಗೊತ್ತಾಯಿತು ಎಂದು ಅಜಂ ಖಾನ್ ಹೇಳಿಕೆ ನೀಡಿದ್ದರು.

Azam Khan

ಇನ್ನು ಮೇನಕಾ ಗಾಂಧಿ, ನನಗೆ ಮುಸ್ಲಿಮರು ಮತ ನೀಡದಿದ್ದರೆ ನನ್ನ ಹೃದಯ ಕಲ್ಲಾಗುತ್ತಾದೆ. ಅವರು ಕೆಲಸ ಮಾಡಿಕೊಡುವಂತೆ ನನ್ನಲ್ಲಿಗೆ ಬಂದಾಗ ಇರಲಿ ಎನ್ನಿಸುತ್ತದೆ. ಇದು ಕೊಟ್ಟು ತೆಗೆದುಕೊಳ್ಳುವುದಲ್ಲವಾ? ನಾವೆಲ್ಲರೂ ಮಹಾತ್ಮ ಗಾಂಧಿ ಮಕ್ಕಳಲ್ಲ, ಹೌದಲ್ಲವಾ? ಎಂದು ಹೇಳಿದ್ದರು. ಆ ವಿಡಿಯೋ ಕ್ಲಿಪ್ ವೈರಲ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+