ಅಪನಗದೀಕರಣದ ಆಘಾತಕ್ಕೆ ಮೊದಲ ವಾರ್ಷಿಕೋತ್ಸವ: ಗೆಲುವೋ, ಸೋಲೋ?!

Posted By:
Subscribe to Oneindia Kannada
   ಅಪನಗದೀಕರಣಕ್ಕೆ ಮೊದಲ ವಾರ್ಷಿಕೋತ್ಸವ | ಟ್ವಿಟ್ಟಿಗರು ಏನಂತಾರೆ? | Oneindia Kannada

   ನವದೆಹಲಿ, ನವೆಂಬರ್ 07: ಹುಟ್ಟಿದ ದಿನ, ಮದುವೆ ವಾರ್ಷಿಕೋತ್ಸವ, ಪುಣ್ಯತಿಥಿಗಳು ನೆನಪಿರುತ್ತೋ ಬಿಡುತ್ತೋ, ಆದರೆ "ನವೆಂಬರ್ 08" ರ ದಿನ ಮಾತ್ರ ಹಲವರಿಗೆ ಇಂದೂ ನಿದ್ದೆ ಕೆಡಿಸುವ ಮಟ್ಟಿಗೆ ನೆನಪಿನಲ್ಲಿದೆ. ಮೈಕ್ ಮುಂದೆ ಪ್ರಧಾನಿ ನರೇಂದ್ರ ಮೋದಿ ಬಂದು ನಿಂತರೆ ಸಾಕು, 'ಅಯ್ಯೋ ದೇವರೆ ಇನ್ನೇನು ಕಾದಿದೆಯೋ' ಎಂದು ನೆನೆಪಿಗೆ ಬಂದ ದೇವರನ್ನೆಲ್ಲ ಸ್ತುತಿಸುವ ಮಟ್ಟಿಗೆ ಭಾರತೀಯರ ಮನಸ್ಸಿನಲ್ಲಿನ್ನೂ ಅಪನಗದಿಕರಣದ ಆಘಾತ ಅಚ್ಚೊತ್ತಿದೆ.

   ಜಿಎಸ್ ಟಿ ಅಂದರೆ ಗ್ರೇಟ್ ಸೆಲ್ಫಿಷ್ ಟ್ಯಾಕ್ಸ್ : ಮಮತಾ ಬ್ಯಾನರ್ಜಿ

   ನವೆಂಬರ್ 8 ರಂದು ಅಪನಗದೀಕರಣ ತನ್ನ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹೊತ್ತಲ್ಲಿ, ಅದರ ಸಾಧಕ-ಬಾಧಕಗಳ ಚರ್ಚೆ ಸಂದರ್ಭೋಚಿತ. ವಿಪಕ್ಷಗಳೆಲ್ಲ ನವೆಂಬರ್ 8 ನ್ನು 'ಕರಾಳ ದಿನ'ವೆಂದು ಆಚರಿಸಲು ಹೊರಟಿದ್ದರೆ, ಭಾರತೀಯ ಅರ್ಥ ವ್ಯವಸ್ಥೆಯ ಮೇಲೆ ಅಪನಗದೀಕರಣದಿಂದಾದ ಧನಾತ್ಮಕ ಪರಿಣಾಮ, ಫಲಗಳ ಬಗ್ಗೆ ಕೇಂದ್ರ ಸರ್ಕಾರ ಮಾತನಾಡುತ್ತಿದೆ.

   ಅಪನಗದೀಕರಣ ವರ್ಷಕ್ಕೆ ಬಂತು, ಚಿನ್ನಾಭರಣ ವ್ಯಾಪಾರಿಗಳು ಏನಂತಾರೆ?

   ಈ ಕುರಿತು ಪ್ರಭಾವಶಾಲಿ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ನಲ್ಲೂ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. #DeMoDisaster ಮತ್ತು #DemoWins ಎಂಬ ಎರಡು ಹ್ಯಾಶ್ ಟ್ಯಾಗ್ ಗಳಲ್ಲಿ ಅಪನಗದೀಕರಣದ ವಿರೋಧಿಗಳು ಮತ್ತು ಬೆಂಬಲಿಗರು ಆರೋಗ್ಯಕರ ಚರ್ಚೆ, ಕಾಲೆಳೆತ, ಜಗಳ, ಕೆಸರೆರಚಾಟ ಆರಂಭಿಸಿದ್ದಾರೆ.

   ಆರ್ಥಿಕ ಭಯೋತ್ಪಾದನೆ ಇದು!

   9/11 ರಂದು ಹಲವರು ತಮ್ಮ ಪ್ರಾಣ ಕಳೆದುಕೊಂಡರು, ಅದಕ್ಕೆ ಕಾರಣವಾಗಿದ್ದು ಭಯೋತ್ಪಾದನೆ. 11/8 ರಿಂದಾಗಿ ಸಾವಿರಾರು ಜನ ತಮ್ಮ ಬದುಕನ್ನು ಕಳೆದುಕೊಂಡರು, ಅದಕ್ಕೆ ಕಾರಣವಾಗಿದ್ದು, ಆರ್ಥಿಕ ಭಯೋತ್ಪಾದನೆ ಎಂದು ಸರ್ಕ್ಯಾಸಮ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ಅಪನಗದಿಕರಣ ಗೆದ್ದಿದೆ!

   ಕಪ್ಪುಹಣವನ್ನು ನಾಶಗೊಳಿಸುವ ಮೂಲಕ ಭಯೋತ್ಪಾದನೆ ಮತ್ತು ನಕ್ಸಲ್ ವಾದವನ್ನು ಹತ್ತಿಕ್ಕುವ ಪರಿಣಾಮಕಾರಿ ಪ್ರಯತ್ನವೇ ಅಪನಗದೀಕರಣ. ಅಪನಗದೀಕರಣ ನಿಜಕ್ಕೂ ಭಯೋತ್ಪಾದಕರ ಮೇಲೆ, ಜಿಹಾದಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

   ಮೂರ್ಖರನ್ನಾಗಿ ಮಾಡಬೇಡಿ!

   ಮೋದಿಯವರೆ, ನೀವು ಎಲ್ಲಾ ಸಮಯದಲ್ಲೂ, ಎಲ್ಲರನ್ನೂ ಮೂರ್ಖರನ್ನಾಗಿ ಮಾಡುವುದಕ್ಕೆ ಸಾಧ್ಯವಿಲ್ಲ, ಎಂದು ಅಪಗದೀಕರಣದ ಪರಿಣಾಮಗಳನ್ನು ಅಂಕಅಂಶಗಳ ಜೊತೆ ನೀಡಿ ಟ್ವೀಟ್ ಮಾಡಿದ್ದಾರೆ ಜೆನ್ಸನ್ ಜಾರ್ಜ್.

   ಕಪ್ಪು ಹಣವೆಲ್ಲ ಬಿಜೆಪಿಯವರ ಬಳಿಯೇ ಇದೆ!

   ಪನಾಮಾ, ಪ್ಯಾರಡೈಸ್, ರಾಣೆ, ರಾಯ್, ಯಡಿಯೂರಪ್ಪ... ಎಲ್ಲಾ ಕಪ್ಪುಹಣವೂ ಬಿಜೆಪಿ ಬಳಿಯೇ ಇದೆ. ಮೋದಿ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು ಎಂದು ಆದೀಶ ಟಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಮನೋಜ್ ತಿವಾರಿ

   ಅಪನಗದೀಕರಣದಿಂದ ಸಾಕಷ್ಟು ಉಪಯೋಗವಾಗಿದೆ. ಇದು ನವಭಾರತ ನಿರ್ಮಾಣದ ಮೊದಲ ಹೆಜ್ಜೆ ಎಂದು, ಅಪನಗದೀಕರಣದ ಉಪಯೋಗಗಳ ಪಟ್ಟಿ ತಯಾರಿಸಿ ಟ್ವೀಟ್ ಮಾಡಿದ್ದಾರೆ, ಬಿಜೆಪಿ ನಾಯಕ ಮನೋಜ್ ತಿವಾರಿ.

   ಇದು ಒಂದು ದುರಂತವೇ ಹೌದು!

   ಅಪನಗದೀಕರಣ ಎಂಬುದು ನಿಸ್ಸಂದೇಹವಾಗಿ ಒಂದು ದುರಂತವೇ ಸರಿ. ಬಡವರು ಎಷ್ಟೆಲ್ಲ ಬಳಲಿದರು. 150 ಕ್ಕೂ ಹೆಚ್ಚು ಜನ ಈ ಆರ್ಥಿಕ ದುರಂತಕ್ಕೆ ಬಲಿಯಾದರು. ಇವರ ಸಾವಿಗೆ ಯಾರು ಹೊಣೆ ಎಂದು ಫೈರೋಜ್ ಖಾನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

   ಅಂಕಿ ಅಂಶಗಳು ಸುಳ್ಳು ಹೇಳುತ್ತವೆಯೇ?

   ಮೋದಿಯವರು ಎಲ್ಲ್ ಸಮಯದಲ್ಲೂ, ಜನರನ್ನು ಮೂರ್ಖರನ್ನಾಗಿ ಮಾಡಬಹುದು ಎಂದುಕೊಂದಿದ್ದಾರೇನೋ! ಆದರೆ ಅಂಕಅಂಶಗಳು ಸುಳ್ಳು ಹೇಳುತ್ತವೆಯಾ? ಜಿಡಿಪಿ ರೇಟ್ ಈಗ 5.7ಕ್ಕೆ ಇಳಿದಿದೆ ಎಂದು ಕೀರ್ತಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಸೋಲು ಯಾರದು..?!

   #DeMoDisaster ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗುವಂತೆ ಕಾಂಗ್ರೆಸ್ ಮಾಡುತ್ತಿದೆ. ಆದರೆ ಉತ್ತರ ಪ್ರದೇಶದ ಸೋಲು, ಉತ್ತರಅಖಂಡದ ಸೋಲು, ಹಲವು ಸ್ಥಳೀಯ ಚುನಾವಣೆಗಳ ಸೋಲು, ಕಾಂಗ್ರೆಸ್ ನ ಹಲವು ನಾಯಕರು ಹಗರಣಗಳಲ್ಲಿ ಸಿಲುಕಿರುವುದು ಏನನ್ನು ತೋರಿಸುತ್ತದೆ ಎಂದು ರಿಶಿ ಬ್ಯಾಗ್ರಿ ಟ್ವೀಟ್ ಮಾಡಿದ್ದಾರೆ.

   ದೀಪಕ್

   ಅಪನಗದೀಕರಣದ ಯಶಸ್ಸನ್ನು ಅಳೆಯುವುದು ಸುಲಭ. ಹಿಂದಕ್ಕೆ ಪಡೆದ ನೋಟುಗಳ ಮೌಲ್ಯ ಮತ್ತು ಹೊಸ ನೋಟುಗಳ ಮುದ್ರಕ್ಕೆ ಖರ್ಚು ಮಾಡಿದ ಹಣಗಳ ನಡುವಿನವ್ಯತ್ಯಾಸ ನೋಡಿ. ಇದಕ್ಕಿಂತ ಸಾಕ್ಷಿ ಬೇಕೆ? ಎಂದು ದೀಪಕ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಯಾವುದನ್ನು ಮರೆಯುವುದಕ್ಕೆ ಸಾಧ್ಯ?!

   ಹೀಗೆ ಬ್ಯಾಂಕುಗಳ ಮುಂದೆ ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿರುತ್ತಿದ್ದ ದಿನಗಳನ್ನು ಯಾರು ತಾನೆ ಮರೆಯುವುದಕ್ಕೆ ಸಾಧ್ಯ ಎಂದು ಬ್ಯಾಂಕುಗಳ ಮುಂದೆ ಸಾಲು ಸಾಲಾಗಿ ನಿಂತ ಜನರ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ ಜೊಶ್ಯಿ ಗ್ಸೆವಿಯರ್.

   ಅರ್ಥವ್ಯವಸ್ಥೆಯ ಶುದ್ಧೀಕರಣ

   ಅಪನಗದೀಕರಣ ಎಂಬುದು ಭ್ರಷ್ಟಾಚಾರ ಮತ್ತು ಕಪ್ಪುಹಣಕ್ಕೆ ಬಿದ್ದ ಬಹುದೊಡ್ಡ ಹೊಡೆತ. ಇದರಿಂದಾಗಿ ಭಾರತದ ಅರ್ಥವ್ಯವಸ್ಥೆ ಶುದ್ಧೀಕರಣಗೊಂಡಿದೆ ಎಂದು ಮುಖ್ತರ್ ಅಬ್ಬಾಸ್ ನಖ್ವಿ ಟ್ವೀಟ್ ಮಾಡಿದ್ದಾರೆ.

   ಅರವತ್ತು ಅವರ್ಷವಾದರೂ ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ!

   ಅರವತ್ತು ವರ್ಷ ಆಅಡಳಿತ ನಡೆಸಿದರೂ ಕಾಂಗ್ರೆಸ್ ಗೆ ಸಾಧ್ಯವಾಗದ ಕೆಲಸವನ್ನು ಮೋದಿ ಮಾಡಿದ್ದಾರೆ. ಭಾರತೀಯ ಅರ್ಥವ್ಯವಸ್ಥೆಗೆ ಆಗಾಗ ಕಾಂಗ್ರೆಸ್ ಶಸ್ತ್ರಚಿಕಿತ್ಸೆ ಮಾಡಿದ್ದರೂ ಯಾವ ಉಪಯೋಗವೂ ಆಗಿರಲಿಲ್ಲ. ಆದರೆ ಮೋದಿಯವರ ಒಂದೇ ಒಂದು ಧೈರ್ಯದ ನಡಿಗೆಯಿಂದ ಸಾಕಷ್ಟು ಬದಲಾವಣೆಯಾಗಿದೆಎಂದು ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Does demonetisation affect indian economy? Question is very relevent during the first anniversary of Demonetisation(Nov 8th). Twitterians have already started debate on demonetisation. #DeMoDisaster and #DemoWins hashtags are trending now.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ