ಜಿಡಿಪಿ ಕುಸಿತವು ಹಿಂದಿನ ಸರಕಾರಗಳ ಪಾಪದ ಫಲ: ಜೇಟ್ಲಿ
ನವದೆಹಲಿ, ಜೂನ್ 1: ಹಿಂದಿನ ಸರಕಾರಗಳ ಭ್ರಷ್ಟಾಚಾರ, ಆರ್ಥಿಕ ಯಡವಟ್ಟು ಹಾಗೂ ಪಾಪದ ಫಲ ಈಗಿನ ಸರಕಾರದ ಮೇಲೆ ಬಿದ್ದಿದೆ. ಅದರಿಂದಲೇ ಜಿಡಿಪಿ ಕುಸಿತವಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದ್ದಾರೆ.
ಸಣ್ಣ ಬಿಡುವೊಂದರ ನಂತರ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಪನಗದೀಕರಣದ ಬಗ್ಗೆ ಮಾತನಾಡಿದ್ದಾರೆ. ಅದರ ಸಕಾರಾತ್ಮಕ ಪರಿಣಾಮಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅಪನಗದೀಕರಣದಿಂದ ಮೂರು ಅನುಕೂಲಗಳಾಗಿವೆ ಎಂದು ಹೇಳಿದ್ದಾರೆ ಜೇಟ್ಲಿ.
ಒಂದು, ಡಿಜಿಟಲ್ ವ್ಯವಹಾರಗಳು ಹೆಚ್ಚಾಗಿವೆ. ತೆರಿಗೆ ಪಾವತೊಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇನ್ನು ನಗದು ವ್ಯವಹಾರ ಮಾಡುವುದು ಅಷ್ಟು ಸುಲಭವಲ್ಲ ಎಂಬ ಸಂದೇಶವೊಂದು ದೊಡ್ಡ ಧ್ವನಿಯಲ್ಲಿ ತಲುಪಿದೆ. ಬಿಜೆಪಿಯು ಕೇಂದ್ರದಲ್ಲಿ ಮೂರು ವರ್ಷ ಪೂರೈಸಿದ ಸಂಭ್ರಮವನ್ನು ಮಾಧ್ಯಮದ ಜತೆಗೆ ಹಂಚಿಕೊಂಡಿದ್ದಾರೆ ಅರುಣ್ ಜೇಟ್ಲಿ.
ಈ ಎಲ್ಲ ಕ್ರಮಗಳನ್ನೂ ಆಪರೇಷನ್ ಕ್ಲೀನ್ ಮನಿಗಾಗಿ ತೆಗೆದುಕೊಂಡಿದ್ದು ಎಂಬುದನ್ನು ಸೇರಿಸಲು ಅವರು ಮರೆಯಲಿಲ್ಲ. ಅವರ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು ಇಲ್ಲಿವೆ.[ಚಿತ್ರದುರ್ಗದ ಚಳ್ಳಕೆರೆಯ 'ಡಿಆರ್‌ಡಿಒ ಎಟಿಆರ್'ಗೆ ಜೇಟ್ಲಿ ಚಾಲನೆ]

* ಆರ್ಥಿಕತೆ ಮೇಲೆ ಜನರ ನಂಬಿಕೆಯನ್ನು ವಾಪಸ್ ಪಡೆಯಲು ಸಾಧ್ಯವಾಗಿದ್ದು ಅಪನಗದೀಕರಣದಿಂದ.
* ಬ್ಯಾಂಕ್ ಗಳ ಎನ್ ಪಿಎ (ನಾನ್ ಪರ್ಫಾಮಿಂಗ್ ಅಸೆಟ್) ಸಮಸ್ಯೆ ಬಗೆಹರಿಸುವುದು, ಖಾಸಗಿ ವಲಯದಲ್ಲಿ ಬಂಡವಾಳ ಹೂಡಿಕೆ ತುಂಬ ದೊಡ್ಡ ಸವಾಲಾಗಿತ್ತು.
* ಅರ್ಹರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಸಾಧ್ಯವಾಗಿದೆ.
* ತೆರಿಗೆ ಆಡಳಿತ ವ್ಯವಸ್ಥೆಯಲ್ಲಿ ಜಿಎಸ್ ಟಿ ಕ್ರಾಂತಿಕಾರಿ ಬದಲಾವಣೆ ತರಲಿದೆ.
* ಅಪನಗದೀಕರಣದ ನಂತರ ಎಲ್ಲ ಸಹಜ ಸ್ಥಿತಿಗೆ ಮರಳಿದೆ.
* ಈ ಹಿಂದೆ ಆಡಳಿತ ನಡೆಸಿದ್ದವರ ಭ್ರಷ್ಟಾಚಾರ ಮತ್ತಿತರ ಕಾರಣಗಳಿಗಾಗಿ ವ್ಯವಸ್ಥೆ ದುರ್ಬಲವಾಗಿತ್ತು. ಜನ ವಿಶ್ವಾಸ ಕಳೆದುಕೊಂಡಿದ್ದರು.
* ಕಠಿಣ ನಿರ್ಧಾರ ತೆಗೆದುಕೊಳ್ಳುವುದಕ್ಕೂ ನಾವು ಸಿದ್ಧ ಎಂದು ತೋರಿಸಿಕೊಳ್ಳುವ ಮೂಲಕ ಜನರಲ್ಲಿ ವಿಶ್ವಾಸ ಮೂಡಿಸಿದ್ದೇವೆ.
* ಅಪನಗದೀಕರಣದ ಮುಂಚೆಯೇ ಸ್ವಲ್ಪ ಮಟ್ಟಿಗಿನ ಆರ್ಥಿಕ ಹಿಂಜರಿತ ಕಾಣಿಸಿಕೊಂಡಿತ್ತು.
* ಜಿಎಸ್ ಟಿ ಜಾರಿಗೆ ಸರಕಾರ ಎಲ್ಲ ರೀತಿ ಸನ್ನದ್ಧವಾಗಿದೆ.
* ಜಾಗತಿಕ ಮಟ್ಟಕ್ಕೆ ಹೋಲಿಸಿದರೂ ಏಳರಿಂದ ಎಂಟು ಪ್ರತಿಶತ ಜಿಡಿಪಿ ಅಭಿವೃದ್ಧಿ ಒಳ್ಳೆ ಬೆಳವಣಿಗೆ.
* ಈ ಹಿಂದಿನ ಹಲವು ಕಾರಣಗಳಿಂದ 2016-17ರ 4ನೇ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತವಾಗಿದೆ.
(ಮಾಹಿತಿ ಐಎ ಎನ್ ಎಸ್)












Click it and Unblock the Notifications