ಕೊವಿಡ್ 19: ದೆಹಲಿಯಲ್ಲಿ ಒಂದೇ ದಿನ 20 ಸಾವಿರ ಮಂದಿಯ ತಪಾಸಣೆ
ನವದೆಹಲಿ, ಜೂನ್ 19: ಮಹಾರಾಷ್ಟ್ರ, ಗುಜರಾತ್‌ನಂತೆ ದೆಹಲಿಯಲ್ಲಿ ಕೂಡ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ.
Recommended Video
ಜೂನ್ 18ರಂದು 20 ಸಾವಿರ ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ದೆಹಲಿ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೆಹಲಿಯಲ್ಲಿ ಕೊವಿಡ್-19 ನಿಂದ 1969 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 49, 979 ಆಗಿದೆ.
ರಾಷ್ಟ್ರದಾದ್ಯಂತ ಕಳೆದ 24 ಗಂಟೆಗಳಲ್ಲಿ 336 ಮಂದಿ ಮೃತಪಟ್ಟಿದ್ದು, ಹೊಸದಾಗಿ 13, 586 ಪ್ರಕರಣಗಳು ಕಂಡುಬಂದಿವೆ. ಇದರೊಂದಿಗೆ ದೇಶದಲ್ಲಿ ಒಟ್ಟು, ಮೃತರ ಸಂಖ್ಯೆ 12, 573ಕ್ಕೆ ಏರಿಕೆ ಆಗಿದ್ದು, ಸೋಂಕಿತರ ಸಂಖ್ಯೆ 3 ಲಕ್ಷದ 80 ಸಾವಿರದ 532 ಆಗಿದೆ.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟರ್ ನಲ್ಲಿ ತಿಳಿಸಿದ್ದಾರೆ. ಪ್ರಸ್ತುತ ದೆಹಲಿ ಜನತೆ ಕೊವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವುದರಲ್ಲಿ ಯಾವುದೇ ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಟೆಸ್ಟಿಂಗ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ಸೋಂಕು ವಿಪರೀತಿಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ ಕಡಿಮೆಯಾಗಿದೆ.ಇದೀಗ 10 ಕ್ಕಿಂತ ಹೆಚ್ಚು ಹಾಸಿಗೆಗಳಿರುವ ಕ್ಲಿನಿಕ್‌ನ್ನು ಕೂಡ ಕೊರೊನಾ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗುತ್ತಿದೆ.












Click it and Unblock the Notifications