ದೆಹಲಿ: ನಡುರಸ್ತೆಯ ಕ್ಷುಲ್ಲಕ ಜಗಳ ಹತ್ಯೆಯಲ್ಲಿ ಅಂತ್ಯ!

ನವದೆಹಲಿ, ಫೆಬ್ರವರಿ 06: ನಡುರಸ್ತೆಯ ಕ್ಷುಲ್ಲಕ ಜಗಳವೊಂದು ಹತ್ಯೆಯಲ್ಲಿ ಅಂತ್ಯವಾದ ದಾರುಣ ಘಟನೆ ರಾಜಧಾನಿ ದೆಹಲಿಯ ಜಿ ಟಿ ಕರ್ನಲ್ ರಸ್ತೆಯ ಭಲ್ಸವಾ ಫ್ಲೈ ಓವರ್ ನಲ್ಲಿ ನಡೆದಿದೆ.

ಗೀತಾ ಕಾಲೊನಿಯಲ್ಲಿ ವಾಸಿಸುತ್ತಿದ್ದ ಉದ್ಯಮಿ ವಿನೋದ್ ಮೆಹ್ರಾ(43) ಎಂಬ ವ್ಯಕ್ತಿ ಮದುವೆಯ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತಮ್ಮ ಮನೆಗೆ ವಾಪಸಾಗುತ್ತಿದ್ದರು. ಈ ಸಮಯದಲ್ಲಿ ರಸ್ತೆಯಲ್ಲಿ ಅವರನ್ನು ಓವರ್ ಟೇಕ್ ಮಾಡಿದ ವ್ಯಕ್ತಿಯೊಬ್ಬರು ಅತೀ ವೇಗದಲ್ಲಿ ವ್ಯಾನ್ ವೊಂದನ್ನು ಓಡಿಸುತ್ತಿರುವುದನ್ನು ವಿರೋಧಿಸಿ ಮೆಹ್ರಾ ಜಗಳ ತೆಗೆದಿದ್ದರು.

ಇಬ್ಬರ ನಡುವೆ ಮಾತಿನ ಚಕಮಕಿ ಉಲ್ಬಣಕ್ಕೆ ತಿರುಗಿದ ನಂತರ ವ್ಯಾನ್ ನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಬಳಿಯಿದ್ದ ಪಿಸ್ತೂಲ್ ನಿಂದ ಮೆಹ್ರಾ ಅವರಿಗೆ ಗುರಿಯಾಗಿಸಿ ಗುಂಡು ಹಾರಿಸಿದ್ದಾನೆ. ಅನಿರೀಕ್ಷಿತ ಆಘಾತದಿಂದ ಹೌಹಾರದ ಮೆಹ್ರಾ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಕ್ಕೂ ಮೊದಲೇ ಅವರು ಮೃತರಾಗಿದ್ದರು.

Delhi shocker: Man shot dead in road rage incident

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನುಖೆ ನಡೆಸುತ್ತಿದ್ದಾರೆ. ವಿನೋದ್ ಮೆಹ್ರಾ ದೆಹಲಿಯ ಪ್ರಮುಖ ಉದ್ಯಮಿ ಎಂಬುದು ನಂತರ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+