ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಂಚ ಸುಧಾರಣೆ ಕಂಡರೂ ದೆಹಲಿ ವಾಯುಮಾಲಿನ್ಯ ಅತ್ಯಂತ ಕಳಪೆ ವರ್ಗಕ್ಕೆ

|
Google Oneindia Kannada News

ನವದೆಹಲಿ ನವೆಂಬರ್ 8: ದೆಹಲಿಯ ಗಾಳಿಯ ಗುಣಮಟ್ಟವು ಕೆಲವು ಪ್ರದೇಶಗಳಲ್ಲಿ 'ತೀವ್ರ' ಮಾಲಿನ್ಯವಾಗಿದ್ದರೂ ದೀಪಾವಳಿಯ ನಂತರ ಮೊದಲ ಬಾರಿಗೆ 'ಅತ್ಯಂತ ಕಳಪೆ' ವರ್ಗಕ್ಕೆ ಕುಸಿದಿದೆ. ನವೆಂಬರ್ 4 ರಂದು ದೀಪಾವಳಿಯಿಂದಾಗಿ ದಟ್ಟವಾದ ಹೊಗೆಯಿಂದ ಆವೃತವಾಗಿದ್ದ ನಗರವು ಸೋಮವಾರ ಮಬ್ಬು ಮತ್ತು ಮಂಜಿನಿಂದ ಕೂಡಿತ್ತು. ನಗರದ PM2.5 ಮಾಲಿನ್ಯದಲ್ಲಿ ಕೃಷಿ ಬೆಂಕಿಯ ಕೊಡುಗೆಯು ಋತುವಿನ ಗರಿಷ್ಠವಾದ 48 ಪ್ರತಿಶತವನ್ನು ತಲುಪಿದೆ. ಆದರೂ ಸಹ ವೇಗವಾಗಿ ಬೀಸುವ ಗಾಳಿಯಿಂದಾಗಿ ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆಯಾಗಿದೆ.

"ದೆಹಲಿಯ ಗಾಳಿಯ ಗುಣಮಟ್ಟವು 'ತೀವ್ರ'ದಿಂದ ಸುಧಾರಿಸಿದೆ. ಇಂದು ಬೆಳಿಗ್ಗೆ 'ಅತ್ಯಂತ ಕಳಪೆ' ವರ್ಗದ ಶ್ರೇಣಿಯಲ್ಲಿದೆ. AQI ಕಳೆದ ರಾತ್ರಿಯವರೆಗೆ 'ತೀವ್ರ' ವಿಭಾಗದಲ್ಲಿತ್ತು. ನವೆಂಬರ್ 6 ಮಧ್ಯಾಹ್ನದ ನಂತರ, ಮೇಲ್ಮೈ ಮಾರುತಗಳು ಮಧ್ಯಮವಾಗಿ ಚಲಿಸಲು ಪ್ರಾರಂಭಿಸಿದವು. ಇದು ಪಟಾಕಿಗಳಿಂದ ಹೊಗೆಯನ್ನು ಕಡಿಮೆ ಮಾಡಿತು" ಎಂದು ವಾಯು ಗುಣಮಟ್ಟದ ಮುನ್ಸೂಚನೆ ಏಜೆನ್ಸಿ SAFAR ನ ಡಾ ಗುಫ್ರಾನ್ ಬೇಗ್ ಹೇಳಿದರು.ಮುಂಬರುವ ದಿನಗಳಲ್ಲಿ ಗಾಳಿಯ ವೇಗದಲ್ಲಿ ಹೆಚ್ಚಳವು ಮಾಲಿನ್ಯಕಾರಕಗಳನ್ನು ಹೊರಹಾಕುತ್ತದೆ ಮತ್ತು ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ಡಾ.ಗುಫ್ರಾನ್ ಬೇಗ್ ಹೇಳಿದರು. "ಪಂಜಾಬ್ ಮತ್ತು ಹರಿಯಾಣದಲ್ಲಿ ಕಳೆ ಸುಡುವಿಕೆ ಹೆಚ್ಚಳವಾಗಿದೆ. ಈಗ ಸುಮಾರು 5,000 ಕಡೆ ಕಳೆ ಸುಡಲಾಗುತ್ತಿದೆ. ವಾಯು ಮಾಲಿನ್ಯದಲ್ಲಿ ಇದರ ಪಾಲು ಶೇಕಡಾ 48 ರಷ್ಟಿದೆ. ಗಾಳಿಯ ವೇಗವನ್ನು ನಿರೀಕ್ಷಿಸಿರುವುದರಿಂದ ನಾವು ಗಾಳಿಯ ಗುಣಮಟ್ಟದಲ್ಲಿ ಮತ್ತಷ್ಟು ಸುಧಾರಣೆಯನ್ನು ಊಹಿಸುತ್ತಿದ್ದೇವೆ" ಅವರು ಹೇಳಿದರು.

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ- ಸೊನ್ನೆ ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ, 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

Delhis air quality improved to very poor category

ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಪಟಾಕಿ ಸಿಡಿಸುವಿಕೆ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆ ಸುಡುವಿಕೆಯಿಂದ ಹೆಚ್ಚಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ ಸುಧಾರಿಸುವ ಸಾಧ್ಯತೆ ಬಹುತೇಕ ಕಡಿಮೆ ಎನ್ನಲಾಗುತ್ತಿದೆ. ವಾಯುವ್ಯ ಮಾರುತಗಳು ಪಂಜಾಬ್ ಮತ್ತು ಹರಿಯಾಣದಲ್ಲಿ ಕೃಷಿ ಬೆಂಕಿಯಿಂದ ಹೊಗೆಯನ್ನು ರಾಷ್ಟ್ರ ರಾಜಧಾನಿಯ ಕಡೆಗೆ ಸಾಗಿಸುತ್ತವೆ. ಕಳೆದ ವರ್ಷ, ನವೆಂಬರ್ 5 ರಂದು ದೆಹಲಿಯ ಮಾಲಿನ್ಯದಲ್ಲಿ ಕಳೆ ಸುಡುವಿಕೆಯ ಪಾಲು 42 ಪ್ರತಿಶತದಷ್ಟಿತ್ತು. 2019 ರಲ್ಲಿ, ನವೆಂಬರ್ 1 ರಂದು ದೆಹಲಿಯ PM2.5 ಮಾಲಿನ್ಯದ 44 ಪ್ರತಿಶತದಷ್ಟು ಬೆಳೆ ಅವಶೇಷಗಳನ್ನು ಸುಡುವುದಾಗಿತ್ತು. ದೆಹಲಿಯ PM2.5 ಸಾಂದ್ರತೆಯಲ್ಲಿನ ಕಳೆ ಸುಡುವಿಕೆಯ ಕೊಡುಗೆಯು 2019 ರಲ್ಲಿ 19 ಪ್ರತಿಶತಕ್ಕೆ ಹೋಲಿಸಿದರೆ ಕಳೆದ ವರ್ಷ ದೀಪಾವಳಿ ದಿನದಂದು 32 ಪ್ರತಿಶತದಷ್ಟಿತ್ತು. ಅಕ್ಟೋಬರ್‌ನಲ್ಲಿ ದಾಖಲೆಯ ಮಳೆ ಮತ್ತು ಕಳೆ ಸುಡುವಿಕೆ, ಗಾಳಿಯ ದಿಕ್ಕಿನಿಂದಾಗಿ ದೆಹಲಿಯ ವಾಯುಮಾಲಿನ್ಯದಲ್ಲಿ ಕೃಷಿ ಬೆಂಕಿಯಿಂದಾಗುವ ಹೊಗೆಯ ಕೊಡುಗೆ ಕಡಿಮೆಯಾಗಿದೆ.

ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಧೂಳನ್ನು ಇತ್ಯರ್ಥಗೊಳಿಸಲು ದೆಹಲಿ ಸರ್ಕಾರವು ನಗರದಾದ್ಯಂತ ನೀರನ್ನು ಸಿಂಪಡಿಸಲು 100 ಕ್ಕೂ ಹೆಚ್ಚು ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ಹೊಗೆಯನ್ನು ತೆಳುಗೊಳಿಸಲು 20 ಆ್ಯಂಟಿ ಸ್ಮಾಗ್ ಗನ್‌ಗಳನ್ನು ಅಳವಡಿಸುವುದಾಗಿ ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

Recommended Video

ಡೆಲ್ಲಿ ಕ್ಯಾಪಿಟಲ್ಸ್ ಗೆ ಬಿಗ್ ಶಾಕ್ ಕೊಟ್ಟಿರೋ ಶ್ರೇಯಸ್ ಅಯ್ಯರ್ ಟಾರ್ಗೆಟ್ ಏನು? | Oneindia Kannada

ಪಟಾಕಿಗಳ ನಿಷೇಧದ ಹೊರತಾಗಿಯೂ, ಜನರು ಪಟಾಕಿ ಸಿಡಿಸುವುದರಲ್ಲಿ ತೊಡಗಿದ್ದರು, ಇದರಿಂದಾಗಿ ದೀಪಾವಳಿ ನಂತರ ನಗರದಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿದೆ. ಶುಕ್ರವಾರ ಐದು ವರ್ಷಗಳಲ್ಲಿ ದೀಪಾವಳಿಯ ನಂತರ ಕೆಟ್ಟ ಗಾಳಿಯ ಗುಣಮಟ್ಟವನ್ನು ನಗರ ಹೊಂದಿತ್ತು. ದೆಹಲಿಯಲ್ಲಿ ಇದು "ತೀವ್ರ" ವಾಯು ಮಾಲಿನ್ಯದ ಮೊದಲ ದಿನವಾಗಿದೆ.

English summary
Delhi's air quality improved to 'very poor' category for the first time post-Diwali even though it was 'severe' in some areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X