ಜೆಎನ್‌ಯು ಹಿಂಸಾಚಾರ: ಕೆಲವು ದಾಳಿಕೋರರ ಗುರುತು ಪತ್ತೆಹಚ್ಚಿದ ಪೊಲೀಸರು

ನವದೆಹಲಿ, ಜನವರಿ 8: ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಮುಸುಕುಧಾರಿಗಳ ಗುಂಪು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ದಾಳಿ ನಡೆಸಿದ ಮೂರು ದಿನಗಳ ಬಳಿಕ ದೆಹಲಿ ಪೊಲೀಸರು ಪ್ರಕರಣದ ಕೆಲವು ದಾಳಿಕೋರರನ್ನು ಗುರುತಿಸಿದ್ದಾರೆ.

ಜನವರಿ 5ರಂದು ನಡೆದ ದಾಳಿಯು ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಗಲಾಟೆಯನ್ನು ತಡೆಯುವಲ್ಲಿ ಮತ್ತು ತಪ್ಪಿತಸ್ಥರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ದಾಳಿಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿ.ವಿ. ಸಿಬ್ಬಂದಿ ಸೇರಿದಂತೆ ಕನಿಷ್ಠ 36 ಮಂದಿ ಗಾಯಗೊಂಡಿದ್ದರು.

ಘಟನೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷ್ ಘೋಷ್ ಮತ್ತು 22 ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಆದರೆ ಶನಿವಾರ ಜೆಎನ್‌ಯುದ ಸರ್ವರ್ ಕೊಠಡಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ಆಡಳಿತ ನೀಡಿದ ದೂರಿನಂತೆ ಐಷ್ ಘೋಷ್ ಮತ್ತು ಇತರೆ 19 ಮಂದಿ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

Delhi Police Identifies Some Of JNU Violence Attackers

ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಅನೇಕ ವಿಡಿಯೋಗಳು ಹರಿದಾಡಿದ್ದರೂ ಯಾರ ವಿರುದ್ಧವೂ ಪ್ರಕರಣ ದಾಖಲಾಗಿರಲಿಲ್ಲ. ಬುಧವಾರ ಹೇಳಿಕೆ ನೀಡಿರುವ ದೆಹಲಿ ಪೊಲೀಸರು, ಕೆಲವು ದಾಳಿಕೋರರನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿಯೇ ಸಂಪೂರ್ಣ ಪ್ರಕರಣ ಭೇದಿಸುವುದಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+