ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಪ್ರಕರಣ: ತಿಹಾರ್ ಜೈಲು ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್

|
Google Oneindia Kannada News

ನವದೆಹಲಿ, ಫೆಬ್ರವರಿ.01: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ದೋಷಿಗಳು ಮತ್ತು ತಿಹಾರ್ ಜೈಲು ಪ್ರಾಧಿಕಾರದ ಅಧಿಕಾರಿಗಳಿಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನೋಟಿಸ್ ಜಾರಿಗೊಳಿಸಿದ್ದು, ಫೆಬ್ರವರಿ.02ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ದೇಶದ ಕಾನೂನು ವ್ಯವಸ್ಥೆಯನ್ನು ದೋಷಿಗಳು ತಮಗೆ ಇಷ್ಟ ಬಂದಂತೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಸ್ಯಾಲಿಟರಿ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ತಿಹಾರ್ ಜೈಲು ಅಧಿಕಾರಿಗಳು ಹಾಗೂ ನಾಲ್ವರು ಅಪರಾಧಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ನಿರ್ಭಯ ಪ್ರಕರಣ; ಕ್ಷಮಾದಾನ ಅರ್ಜಿ ಸಲ್ಲಿಸಿದ ಅಕ್ಷಯ್ನಿರ್ಭಯ ಪ್ರಕರಣ; ಕ್ಷಮಾದಾನ ಅರ್ಜಿ ಸಲ್ಲಿಸಿದ ಅಕ್ಷಯ್

ಇದಕ್ಕೂ ಮುನ್ನ ದಿನ ಶುಕ್ರವಾರವಷ್ಟೇ ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ವಿಧಿಸಿತ್ತು. ಮುಂದಿನ ಆದೇಶ ನೀಡುವವರೆಗೂ ಮರಣದಂಡನೆಯನ್ನು ವಿಧಿಸದಂತೆ ಪಟಿಯಾಲಾ ಹೌಸ್ ಕೋರ್ಟ್ ಸೂಚನೆ ನೀಡಿತ್ತು.

ಹೈಕೋರ್ಟ್ ಗೆ ಮನವಿ ಮಾಡಿದ ಜೈಲು ಅಧಿಕಾರಿಗಳು

ಹೈಕೋರ್ಟ್ ಗೆ ಮನವಿ ಮಾಡಿದ ಜೈಲು ಅಧಿಕಾರಿಗಳು

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಿಗೆ ಫೆಬ್ರವರಿ.01ರಂದು ಗಲ್ಲುಶಿಕ್ಷೆ ವಿಧಿಸಲು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದನ್ನು ಪ್ರಶ್ನಿಸಿ ತಿಹಾರ್ ಜೈಲು ಪ್ರಾಧಿಕಾರದ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿದರು. ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಈ ಅರ್ಜಿಯನ್ನು ತುರ್ತು ವಿಚಾರಣೆಗೆ ತೆಗೆದುಕೊಂಡಿತು.

ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಿದ 3ನೇ ದೋಷಿ

ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಿದ 3ನೇ ದೋಷಿ

ಇಬ್ಬರು ದೋಷಿಗಳು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ. ಇದರ ಬೆನ್ನಲ್ಲೇ ಶನಿವಾರ ಮತ್ತೊಬ್ಬ ದೋಷಿ ಅಕ್ಷಯ್ ಕುಮಾರ್ ಸಿಂಗ್, ತನಗೆ ಕ್ಷಮಾದಾನ ನೀಡುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾನೆ. ಈ ಮೊದಲು ಸಲ್ಲಿಕೆಯಾಗಿದ್ದ ವಿನಯ್ ಕುಮಾರ್ ಶರ್ಮಾ ಮತ್ತು ಮುಕೇಶ್ ಸಿಂಗ್ ಕ್ಷಮಾದಾನ ಅರ್ಜಿಯನ್ನು ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದರು.

"ದೋಷಿಗಳಿಗೆ ಗಲ್ಲು ವಿಧಿಸುವವರೆಗೂ ಹೋರಾಟ ಬಿಡಲ್ಲ"

ಮರಣದಂಡನೆ ಎರಡು ಬಾರಿ ಮುಂದೂಡಿಕೆ

ಮರಣದಂಡನೆ ಎರಡು ಬಾರಿ ಮುಂದೂಡಿಕೆ

ದೆಹಲಿಯ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳಿಗೆ ವಿಧಿಸಿದ್ದ ಮರಣದಂಡನೆ ಎರಡು ಬಾರಿ ಮುಂದೂಡಿಕೆ ಆಗಿದೆ. ಈ ಮೊದಲು ಜನವರಿ.22, ಬೆಳಗ್ಗೆ 7 ಗಂಟೆಗೆ ಗಲ್ಲುಶಿಕ್ಷೆ ವಿಧಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿತ್ತು. ಇದಾದ ಬಳಿಕ ದೋಷಿಗಳ ಕ್ಷಮಾದಾನ ಅರ್ಜಿ ಬಾಕಿ ಉಳಿದ ಹಿನ್ನೆಲೆಯಲ್ಲಿ ಗಲ್ಲುಶಿಕ್ಷೆಯನ್ನು ಫೆಬ್ರವರಿ.01 ಬೆಳಗ್ಗೆ 6 ಗಂಟೆಗೆ ಮುಂದೂಡಿಕೆ ಮಾಡಲಾಗಿತ್ತು. ಶುಕ್ರವಾರ ಮತ್ತೊಬ್ಬ ದೋಷಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ಫೆಬ್ರವರಿ.01ರಂದೂ ಮರಣದಂಡನೆ ವಿಧಿಸದಂತೆ ತಡೆಯಾಜ್ಞೆ ವಿಧಿಸಿತ್ತು.

ಮರಣದಂಡನೆ ವಿಳಂಬಕ್ಕೆ ನೊಂದ ಕಣ್ಣೀರಿಟ್ಟ ತಾಯಿ

ಇನ್ನು, ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವಲ್ಲಿ ಭಾರಿ ವಿಳಂಬವಾಗುತ್ತಿದೆ. ದೋಷಿಗಳ ಪರ ವಕೀಲರು ತಮ್ಮ ಪರಿಸ್ಥಿತಿಯನ್ನು ಕಂಡು ನಗುತ್ತಿದ್ದಾರೆ ಎಂದು ನಿರ್ಭಯಾ ತಾಯಿ ಆಶಾದೇವಿ ನೊಂದು ಕಣ್ಣೀರು ಹಾಕಿದ್ದರು. ನ್ಯಾಯಾಲಯದ ಮೇಲಿನ ನಂಬಿಕೆಯೇ ಹೊರಟು ಹೋದಂತೆ ಆಗಿದೆ. ಆದರೆ, ನಮಗೆ ನ್ಯಾಯ ಸಿಗುವವರೆಗೂ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಆಶಾದೇವಿ ಹೇಳಿದ್ದರು.

ರಾಜಧಾನಿಯ ಘಟನೆಗೆ ರಾಷ್ಟ್ರವೇ ಬೆಚ್ಚಿ ಬಿದ್ದಿತ್ತು

ರಾಜಧಾನಿಯ ಘಟನೆಗೆ ರಾಷ್ಟ್ರವೇ ಬೆಚ್ಚಿ ಬಿದ್ದಿತ್ತು

ದೆಹಲಿಯಲ್ಲಿ 2012ರ ಡಿಸೆಂಬರ್.16ರಂದು ರಾತ್ರಿ ದಕ್ಷಿಣ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಆರು ಮಂದಿ ದುಷ್ಕರ್ಮಿಗಳು ಬಸ್‌ನೊಳಗೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಆಕೆಯ ಜತೆಗಿದ್ದ ಸ್ನೇಹಿತನ ಕೈಕಾಲು ಕಟ್ಟಿಹಾಕಿ ಹಲ್ಲೆ ನಡೆಸಿದ್ದರು. ನಿರ್ಭಯಾ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಅವರನ್ನು ಅಮಾನುಷವಾಗಿ ಥಳಿಸಲಾಗಿತ್ತು. ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಲಾಗಿತ್ತು. ಚಲಿಸುತ್ತಿದ್ದ ಬಸ್‌ನಿಂದ ನಿರ್ಭಯಾರನ್ನು ಹೊರಗೆ ಎಸೆಯಲಾಗಿತ್ತು. ಗಂಭೀರ ಗಾಯಗೊಂಡಿದ್ದ ನಿರ್ಭಯಾ ಮೃತಪಟ್ಟಿದ್ದರು. ಈ ಪ್ರಕರಣದ ಸಂಬಂಧ ರಾಮ್ ಸಿಂಗ್, ಅಕ್ಷಯ್ ಠಾಕೂರ್, ವಿನಯ್, ಮುಕೇಶ್ ಸಿಂಗ್, ಪವನ್ ಕುಮಾರ್ ಶರ್ಮಾ ಹಾಗೂ ಮತ್ತೊಬ್ಬ ಅಪ್ರಾಪ್ತ ವಯಸ್ಸಿನ ಆರೋಪಿಗಳನ್ನು ಬಂಧಿಸಲಾಗಿತ್ತು. ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಬಾಲಾಪರಾಧಿಗೆ 3 ವರ್ಷಗಳ ಶಿಕ್ಷೆ ಬಳಿಕ ಬಿಡುಗಡೆ ಮಾಡಲಾಗಿತ್ತು.

English summary
Delhi Nirbhaya Case: High Court Issues Notice To Tihar Jail Authorities And Convicts. Hearing to be held February.02.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X