ಸಿನಿಮಾ ನೋಡಿ ಹೆಸರನ್ನೇ ಬದಲಿಸಿಕೊಂಡ ದೆಹಲಿಯ 'ಜೇಮ್ಸ್ ಬಾಂಡ್'!

ನವದೆಹಲಿ, ಜುಲೈ.14: ಸಿನಿಮಾ ಅಂದರೆ ಒಂದು ಕ್ರೇಜ್. ಹೀರೋಗಳ ಬಗ್ಗೆ ಅಭಿಮಾನ ಇಟ್ಟುಕೊಳ್ಳುವುದು ಸರ್ವೇ ಸಾಮಾನ್ಯ. ಹಾರರ್ ಮೂವೀಗಳನ್ನು ನೋಡುವ ಸಂದರ್ಭದಲ್ಲಿ ಪ್ರೇಕ್ಷಕರು ಅದರಲ್ಲೇ ಮುಳುಗಿ ಹೋಗುವುದೂ ಹೊಸತಲ್ಲ. ಆದರೆ ನವದೆಹಲಿಯಲ್ಲಿ ನಡೆದ ಘಟನೆಯು ಇದೆಲ್ಲಕ್ಕಿಂತಲೂ ಭಿನ್ನ ಮತ್ತು ಅಚ್ಚರಿ ಮೂಡಿಸುವಂತಿದೆ.

ನವದೆಹಲಿಯಲ್ಲಿ ಜೇಮ್ಸ್ ಬಾಂಡ್ ಸಿನಿಮಾವನ್ನು ನೋಡಿದ 33 ವರ್ಷದ ವಿಕಾಸ್ ಕರ್ದಮ್ ಗೂಢಚಾರಿ ಪಾತ್ರದಲ್ಲಿ ಅಮೋಘವಾಗಿ ನಟಿಸಿದ ನಟನಿಗೆ ಫುಲ್ ಫಿದಾ ಆಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗಿದ್ದರೆ ಇದೊಂದು ಸುದ್ದಿಯೇ ಆಗುತ್ತಿರಲಿಲ್ಲ.

ಜೇಮ್ಸ್ ಬಾಂಡ್ ಸಿನಿಮಾಗೆ ಮನಸೋತ ವಿಕಾಸ್ ಕರ್ದಮ್ ತಮ್ಮ ಹೆಸರನ್ನು ಅಧಿಕೃತವಾಗಿ ಜೇಮ್ಸ್ ಬಾಂಡ್ ಎಂದು ಮರುನಾಮಕರಣ ಮಾಡಿಕೊಂಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪತಿಯ ಈ ನಡೆಯಿಂದ ಸ್ವತಃ ಪತ್ನಿಗೆ ಕಿರಿಕಿರಿ ಅನುಭವಿಸುವಂತಾಗಿದೆ.

Delhi Man Officially Changes His Name to James Bond, Leaves Wife Annoyed

ಸ್ನೇಹಿತರು ಮತ್ತು ಸಹೋದ್ಯೋಗಿಗಳ ವಿರೋಧ:

ಸ್ನೇಹಿತರು ಮತ್ತು ಸಹೋದ್ಯೋಗಿಗಳ ವಿರೋಧದ ಹೊರತಾಗಿಯೂ, ವಿಕಾಸ್ ಕರ್ದಮ್ ತಮ್ಮ ಹೆಸರನ್ನು 'ಜೇಮ್ಸ್ ಬಾಂಡ್' ಎಂದು ಬದಲಾಯಿಸಲು ಕೆಲವು ತಿಂಗಳುಗಳಿಂದ ಯೋಚಿಸುತ್ತಿದ್ದರು. ಅಲ್ಲದೇ ತಮ್ಮ ನೆಚ್ಚಿನ ನಟನ ಹೆಸರು ತಮ್ಮ ವ್ಯಕ್ತಿತ್ವದ ಜೊತೆಗೆ ಹೊಂದಾಣಿಕೆ ಆಗುತ್ತದೆ ಎಂದು ಕರ್ದಮ್ ಭಾವಿಸಿದ್ದಾರೆ.

ಪಶ್ಚಿಮ ದೆಹಲಿಯ ನಿವಾಸಿ ವಿಕಾಸ್ ಕರ್ದಮ್:

ಪಶ್ಚಿಮ ದೆಹಲಿಯ ನವಾಡ ಹೌಸಿಂಗ್ ಕಾಂಪ್ಲೆಕ್ಸ್ ನ 2 ಬಿಎಚ್ ಕೆ ಮನೆಯಲ್ಲಿ ಬಾಡಿಗೆ ಇರುವ ವಿಕಾಸ್ ಕರ್ದಮ್ ಅವರಿಗೆ ಪತ್ನಿ ಹಾಗೂ 3 ವರ್ಷದ ಮಗುವಿದೆ. ಟ್ರೋಲಿಂಗ್ ಮತ್ತು ಅಪಹಾಸ್ಯಕ್ಕೆ ಗುರಿಯಾಗುವ ಭೀತಿಯಲ್ಲಿ ಪತಿಯ ತೀರ್ಮಾನದ ವಿರುದ್ಧ ಪತ್ನಿ ಅಸಮಾಧಾನಗೊಂಡಿದ್ದಾರೆ. ಈ ವಿಚಾರವನ್ನು ಮೊದಲು ತಿಳಿಸಿದಾಗ ಆಕೆ ನನ್ನನ್ನು ದುರುಗುಟ್ಟಿಕೊಂಡು ನೋಡಿದಳು. ಕೋಪದಲ್ಲಿ ರೂಮಿಗೆ ಸೇರಿಕೊಂಡ ಪತ್ನಿ ನಂತರ ಎರಡು ದಿನ ತಮ್ಮೊಂದಿಗೆ ಮಾತನಾಡಲೇ ಇಲ್ಲ ಎಂದು ವಿಕಾಸ್ ಕರ್ದಮ್ ಅಲಿಯಾಸ್ ಜೇಮ್ಸ್ ಬಾಂಡ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ಇನ್ನು, ತಾವು ಹೆಸರು ಬದಲಿಸಿಕೊಂಡಿರುವ ವಿಚಾರ ಇಷ್ಟೊಂದು ವೇಗವಾಗಿ ಸುದ್ದಿ ಆಗುತ್ತದೆ ಎಂದು ತಾವೇ ಭಾವಿಸಿರಲಿಲ್ಲ. ನನ್ನ ಸಂಬಂಧಿಕರಿಗೆ ಇನ್ನೂ ನಾನು ಈ ವಿಚಾರವನ್ನೇ ಹೇಳಿರಲಿಲ್ಲ. ಸದ್ಯ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳಲ್ಲಿ ಹೆಸರು ಪರಿಷ್ಕರಿಸಿಕೊಳ್ಳುವುದರಲ್ಲಿ ಹೆಚ್ಚು ಗಮನ ಹರಿಸಿರುವುದಾಗಿ ಜೇಮ್ಸ್ ಬಾಂಡ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+