• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳ್ ರಾಕರ್ಸ್ ನಂಥ ವೆಬ್ ಸೈಟ್ ಗಳ ಸ್ಥಗಿತಕ್ಕೆ ದೆಹಲಿ ಹೈ ಕೋರ್ಟ್ ನಿರ್ದೇಶನ

By ಅನಿಲ್ ಆಚಾರ್
|

ನವದೆಹಲಿ, ಆಗಸ್ಟ್ 12: ತಮಿಳ್ ರಾಕರ್ಸ್, eztv, katmovies ಮತ್ತು limetorrents ನಂಥ ವೆಬ್ ಸೈಟ್ ಗಳು ದೊರೆಯದಿರುವಂತೆ ಮಾಡಿ ಎಂದು ಇಂಟರ್ ನೆಟ್ ಸೇವೆ ಒದಗಿಸುವವರಿಗೆ ದೆಹಲಿ ಹೈ ಕೋರ್ಟ್ ನಿರ್ದೇಶನ ನೀಡಿದೆ. ಈ ವೆಬ್ ಸೈಟ್ ಗಳು ವಾರ್ನರ್ ಬ್ರದರ್ಸ್, ಯುನಿವರ್ಸಲ್ ಹಾಗೂ ನೆಟ್ ಫ್ಲಿಕ್ಸ್ ನಂಥ ಸಂಸ್ಥೆಗಳ ಸಿನಿಮಾಗಳು ಹಾಗೂ ಟೀವಿ ಸರಣಿಗಳನ್ನು ಅನಧಿಕೃತವಾಗಿ ಪ್ರಸಾರ, ವಿತರಣೆ ಮಾಡುತ್ತಿವೆ ಎಂಬ ಆರೋಪ ಇದೆ.

ಮಧ್ಯಂತರ ಆದೇಶದಲ್ಲಿ ನ್ಯಾ. ಸಂಜೀವ್ ನರುಲಾ ಅವರು ಇಂಟರ್ ನೆಟ್ ಸೇವೆ ಒದಗಿಸುವವರಿಗೆ ನಿರ್ದೇಶನ ಮಾಡಿದ್ದು, ಈ ವೆಬ್ ಸೈಟ್ ಗಳ ಎಲ್ಲ ಯುಆರ್ ಎಲ್ ಗಳು ಹಾಗೂ ಐಪಿ ಅಡ್ರೆಸ್ ಗಳನ್ನು ದೊರೆಯದಿರುವಂತೆ ಮಾಡಲು ತಿಳಿಸಿದ್ದಾರೆ.

ಚಂಬಲ್ ಸಿನಿಮಾ ಬಿಡುಗಡೆಗೆ ತಡೆಕೋರಿದ ಡಿಕೆ ರವಿ ತಾಯಿ

ಇನ್ನು ಕೋರ್ಟ್ ನಿಂದ ದೂರಸಂಪರ್ಕ ಇಲಾಖೆಗೂ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೂ ನಿರ್ದೇಶನ ನೀಡಲಾಗಿದ್ದು, ನಿರ್ಮಾಣ ಸಂಸ್ಥೆಗಳ ಕಾಪಿರೈಟ್ ಉಲ್ಲಂಘನೆ ಮಾಡಿದ ವೆಬ್ ಸೈಟ್ ಗಳ ಹೆಸರಿನ ನೋಂದಣಿಯನ್ನು ಅಮಾನತು ಮಾಡುವಂತೆ ತಿಳಿಸಲಾಗಿದೆ.

ಇಂಥ ಆನ್ ಲೈನ್ ಸೈಟ್ಸ್ ಗಳನ್ನು ಸ್ಥಗಿತಗೊಳಿಸಲು ಇಂಟರ್ ನೆಟ್ ಹಾಗೂ ದೂರಸಂಪರ್ಕ ಸೇವೆ ಒದಗಿಸುವವರಿಗೆ ಅಗತ್ಯ ಅಧಿಸೂಚನೆ ಹೊರಡಿಸಲು ಕೂಡ ತಿಳಿಸಲಾಗಿದೆ.

ಅಮೆರಿಕ ಮೂಲಕದ ವಾರ್ನರ್ ಬ್ರದರ್ಸ್ ಮನರಂಜನಾ ಕಂಪೆನಿಯು ದಾವೆ ಹೂಡಿತ್ತು. ತನ್ನ ಸಂಸ್ಥೆಯ ಕಾರ್ಯಕ್ರಮ ಹಾಗೂ ಸಿನಿಮಾಗಳನ್ನು ಕಾನೂನುಬಾಹಿರವಾಗಿ ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗುತ್ತಿದೆ. ಯಾವುದೇ ಅನುಮತಿ ಪಡೆಯದೆ ಯುಟಿವಿ, ಸ್ಟಾರ್ ಪ್ಯಾರಾಮೌಂಟ್, ಯೂನಿವರ್ಸಲ್ ಹಾಗೂ ನೆಟ್ ಫ್ಲಿಕ್ಸ್ ನ ಕಾರ್ಯಕ್ರಮ, ಸಿನಿಮಾಗಳನ್ನು ಸಹ ಪ್ರಸಾರ ಮಾಡಲಾಗುತ್ತಿದೆ ಎಂದು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಮಧ್ಯಂತರ ಆದೇಶ ಬಂದಿದೆ.

ಈ ರೀತಿ ಮಧ್ಯಂತರ ಆದೇಶ ಹೊರಡಿಸದಿದ್ದರೆ ಮೇಲ್ನೋಟಕ್ಕೆ ಗೊತ್ತಾಗುವಂತೆ, ನಿರ್ಮಾಣ ಕಂಪೆನಿಗೆ ತುಂಬಲಾರದ ನಷ್ಟ ಉಂಟಾಗುತ್ತಿತ್ತು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.

English summary
Tamilrockers and others similar websites which are violate copyright act should be blocked, Delhi high court directs internet service providers on Monday. ತಮಿಳ್ ರಾಕರ್ಸ್, eztv, katmovies ಮತ್ತು limetorrents
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X