ದೆಹಲಿ ಅಗ್ನಿ ಅವಘಡ; ಕಾರ್ಯಾಚರಣೆ ಸ್ಥಗಿತ, 43 ಬಡಪಾಯಿ ಕಾರ್ಮಿಕರು ಸಾವು

ನವದೆಹಲಿ, ಡಿಸೆಂಬರ್ 8; ಉತ್ತರ ದೆಹಲಿಯ 'ರಾಣಿ ಝಾನ್ಸಿ' ರಸ್ತೆಯ, ಆಂಜ್ ಮಂಡಿ ಪ್ರದೇಶದದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿರುವ ಅಗ್ನಿ ಅವಘಡದಲ್ಲಿ ಒಟ್ಟು 43 ಜನ ಮೃತಪಟ್ಟಿದ್ದಾರೆ ಎಂದು ದೆಹಲಿ ಸರ್ಕಾರ ಘೋಷಿಸಿದೆ. ಸ್ಥಳದಲ್ಲಿ ಬೀಡು ಬಿಟ್ಟಿದ್ದ 30 ಅಗ್ನಿಶಾಮಕ ತಂಡಗಳು ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಕಾರ್ಯಾಚರಣೆಯನ್ನು ನಿಲ್ಲಿಸಿವೆ.

ಆಂಜ್ ಮಂಡಿ ಪ್ರದೇಶದ ನಾಲ್ಕು ಅಂತಸ್ತಿನ ರಟ್ಟು ತಯಾರಿಸುವ ಫ್ಯಾಕ್ಟರಿಯಲ್ಲಿ ಶಾರ್ಟ್ ಸರ್ಕೂಟ್ ಸಂಭವಿಸಿ ಈ ದುರಂತ ಸಂಭವಿಸಿತ್ತು. ರಾತ್ರಿ ಪಾಳಿ ಕೆಲಸ ಮುಗಿಸಿ, ಕಾರ್ಖಾನೆಯಲ್ಲಿ ಮಲಗಿದ್ದ 150 ಕ್ಕೂ ಹೆಚ್ಚು ಜನರು ಬೆಂಕಿಯ ಜ್ವಾಲೆಯಲ್ಲಿ ಸಿಲುಕಿಕೊಂಡಿದ್ದರು. ಬೆಂಕಿಯ ಕೆನ್ನಾಲಿಗೆ ಹಾಗೂ ವಿಷಕಾರಿ ಹೊಗೆಗೆ ಸಿಲುಕಿ ಒಟ್ಟು 43 ಜನ ಮೃತಪಟ್ಟರೆ, 50 ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 57 ಜನರನ್ನು ರಕ್ಷಿಸಲಾಗಿದೆ. ಈ ಕುರಿತು ದೆಹಲಿ ಸರ್ಕಾರ ತನಿಖೆ ನಡೆಸಲು ಆದೇಶಿಸಿದೆ.

 ಪ್ರಾಣ ಕಳೆದುಕೊಂಡ ೪೩ ಬಡಪಾಯಿ ಕಾರ್ಮಿಕರು!

ಪ್ರಾಣ ಕಳೆದುಕೊಂಡ ೪೩ ಬಡಪಾಯಿ ಕಾರ್ಮಿಕರು!

ಉತ್ತರ ದೆಹಲಿಯ ಆಂಜ್ ಮಂಡಿ ಪ್ರದೇಶದಲ್ಲಿ ಸಣ್ಣ ಸಣ್ಣ ಕಾರ್ಖಾನೆಗಳು ತುಂಬಿ ತುಳುಕುತ್ತಿವೆ. ಸುರಕ್ಷತಾ ಕಾನೂನುಗಳ ಉಲ್ಲಂಘನೆ ಇಲ್ಲಿ ಸರ್ವೆಸಾಮಾನ್ಯ. ಇಂತಹ ಪ್ರದೇಶದಲ್ಲಿ ಇರುವ ನಾಲ್ಕು ಅಂತಸ್ತಿನ ಹಳೇ ಕಟ್ಟಡದಲ್ಲಿ ಕಾಗದ ರಟ್ಟುಗಳನ್ನು ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಪ್ರತಿದಿನ ರಾತ್ರಿ 150 ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಅದೇ ರೀತಿ ಭಾನುವಾರು ಬೆಳಿಗ್ಗೆ ಕೆಲಸ ಮುಗಿಸಿ ಕಾರ್ಖಾನೆಯಲ್ಲಿ ಮಲಗಿ ಬೆಳಿಗ್ಗೆ ಮನೆಗೆ ಹೋಗಬೇಕಿದ್ದವರು, ಅದ್ಯಾವುದೋ ಕಾರಣಕ್ಕೆ ಶಾರ್ಟ ಸರ್ಕೂಟ್ ಸಂಭವಿಸಿ, 43 ಬಡಪಾಯಿ ಕಾರ್ಮಿಕರು ಇಹಲೋಕ ತ್ಯಜಿಸಿದ್ದಾರೆ. ಘಟನಾ ಸ್ಥಳದಲ್ಲಿ ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತಪಟ್ಟವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.

ಕಟ್ಟಡದ ಮಾಲಿಕ ಪರಾರಿ!

ಕಟ್ಟಡದ ಮಾಲಿಕ ಪರಾರಿ!

ಆಂಜ್ ಮಂಡಿ ಪ್ರದೇಶದಲ್ಲಿ 43 ಬಡಪಾಯಿ ಕಾರ್ಮಿಕರನ್ನು ಬಲಿ ಪಡೆದ ಕಟ್ಟಡದ ಮಾಲಿಕ ರೇಹಾನ್ ಇದೀಗ ಪರಾರಿಯಾಗಿದ್ದಾನೆ. ಅವನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕಟ್ಟದಲ್ಲಿ ಯಾವುದೇ ಸುರಕ್ಷಾ ಸಾಧನಗಳನ್ನು ಇಡದಿರುವುದು ಹಾಗೂ ಅಗ್ನಿಶಾಮಕ ಇಲಾಖೆಯಿಂದ ಸುರಕ್ಷಾ ಪ್ರಮಾಣ ಪತ್ರ ಪಡೆಯದೇ ಕಟ್ಟಡವನ್ನು ಬಳಸಲಾಗುತ್ತಿತ್ತು. ಹೀಗಾಗಿ ರೇಹಾನ್ ಬಂದನಕ್ಕೆ ದೆಹಲಿ ಸರ್ಕಾರ ಆದೇಶಿಸಿದೆ.

10 ಲಕ್ಷ ರುಪಾಯಿ ಪರಿಹಾರ

10 ಲಕ್ಷ ರುಪಾಯಿ ಪರಿಹಾರ

ಒಂದು ಕಡೆ ಬೆಂಕಿ ಅವಘಡದಲ್ಲಿ ಮೃತಪಟ್ವವರನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಘಟನೆಯಲ್ಲಿ ಮೃತಪಟ್ಟವರಿಗೆ ದೆಹಲಿ ಸರ್ಕಾರ 10 ಕ್ಷ ರುಪಾಯಿ ಹಾಗೂ ಕೇಂದ್ರ ಸರ್ಕಾರ 3 ಲಕ್ಷ ರುಪಾಯಿ ಪರಿಹಾರ ಘೋಷಣೆ ಮಾಡಿದೆ. ಗಾಯಗೊಂಡವರಿಗೆ 1 ಲಕ್ಷ ರುಪಾಯಿ ಪರಿಹಾರವನ್ನು ಘೋಷಣೆ ಮಾಡಲಾಗಿದೆ.

ನ್ಯಾಯಾಂಗ ತನಿಖೆ

ನ್ಯಾಯಾಂಗ ತನಿಖೆ

ಇನ್ನು, ಘಟನೆಯ ಕುರಿತು, ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡದಿದ್ದು, ಅವಘಡದಲ್ಲಿ ಮೃತಪಟ್ಟವರ ಕುಟುಂಬದ ಜೊತೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದುರ್ಘಟನೆಯ ಸತ್ಯಾಸತ್ಯತೆಗಳನ್ನು ಬಯಲಿಗೆಳೆಯಲು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+