ದೆಹಲಿ ಅಗ್ನಿ ದುರಂತ; ಸಾವಿನ ಸಂಖ್ಯೆ 40 ಕ್ಕೆ ಏರಿಕೆ

ನವದೆಹಲಿ, ಡಿಸೆಂಬರ್ 8; ನವದೆಹಲಿಯ ರಾಣಿ ಝಾನ್ಸಿ ರಸ್ತೆಯ, ಆಂಜ್ ಮಂಡಿ ಪ್ರದೇಶದದಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂವತ್ತರಿಂದ ನಲ್ವತ್ತಕ್ಕೆ ಹೆಚ್ಚಾಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳದಲ್ಲಿ ಬೀಡು ಬಿಟ್ಟಿರುವ 30ಕ್ಕೂ ಹೆಚ್ಚು ಅಗ್ನಿಶಾಮಕ ತಂಡಗಳು ಅಗ್ನಿ ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದು, ಈಗಾಗಲೇ ದೆಹಲಿ ಸರ್ಕಾರ 34 ಜನ ಮೃತಪಟ್ಟಿದ್ದಾರೆ ಎಂದು ಖಚಿಪಡಿಸಿದೆ. ಸಾವಿನ ಸಂಖ್ಯೆ ನಲವತ್ತರ ಗಡಿ ದಾಟಲಿದ್ದು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಎಲ್‌ ಎನ್‌ ಜೆ ಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 30 ಕ್ಕೂ ಹೆಚ್ಚು ಅವಘಡದಿಂದ ಜನರನ್ನು ಪಾರು ಮಾಡಲಾಗಿದೆ.

ರಾಣಿ ಝಾನ್ಸಿ ರಸ್ತೆಯ ಆಂಜ್ ಮಂಡಿ ಪ್ರದೇಶದದಲ್ಲಿ ಚಿಕ್ಕ ಚಿಕ್ಕ ಪ್ಯಾಕ್ಟರಿಗಳಿದ್ದು, ಐದು ಅಂತಸ್ತಿನ ಕಾರ್ಡಬೋರ್ಡ ಪ್ಯಾಕ್ಟರಿಯಲ್ಲಿ ಈ ಘಟನೆ ಸಂಭವಿಸಿದೆ. ರಾತ್ರಿ ಪಾಳೆ ಮುಗಿಸಿ ಪ್ಯಾಕ್ಟರಿಯಲ್ಲಿ ಮಲಗಿದ್ದ ಸುಮಾರು ಐವತ್ತುಕ್ಕು ಹೆಚ್ಚು ಜನ ಬೆಂಕಿಯಲ್ಲಿ ಸಿಲುಕಿಕೊಂಡಿದ್ದರು. ಘಟನೆಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ.

‍Delhi Fire; Killed More Then 40 People Killed Several Injured

ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅಘಾತ ವ್ಯಕ್ತಪಡಿಸಿದ್ದು, ಇದೊಂದು ಭಯಾನಕ ಅಗ್ನಿ ದುರಂತ. ಸಂತ್ರಸ್ತರೊಂದಿಗೆ ನಾವಿದ್ದೇವೆ ಎಂದು ಅವರು ಸಾಂತ್ವಾನ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+