ಮದ್ಯ ಸ್ಮಗಲ್ಲಿಂಗ್: ಎಎಪಿ ಸಚಿವರ ಸೋದರ ಮೇಲೆ ಎಫ್ಐಆರ್

ನವದೆಹಲಿ, ಫೆಬ್ರವರಿ 09: ದೆಹಲಿ ವಿಧಾನಸಭೆ ಚುನಾವಣೆ ಮತದಾನ ಶನಿವಾರದಂದು ಸಂಪನ್ನವಾಗಿದೆ. ಈ ನಡುವೆ ಆಮ್ ಆದ್ಮಿ ಪಕ್ಷದ ಸಚಿವ ಕೈಲಾಶ್ ಗೆಹ್ಲೋಟ್ ಅವರ ಸೋದರ ಹರೀಶ್ ಗೆಹ್ಲೋಟ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ದೆಹಲಿಯ ಕ್ರೈಂ ಬ್ರ್ಯಾಂಚ್ ಪೊಲೀಸರು, ಕೈಲಾಶ್ ಗೆಹ್ಲೋಟ್ ಅವರ ಸೋದರ ಹರೀಶ್ ಗೆಹ್ಲೋಟ್ ವಿರುದ್ಧ ಮದ್ಯ ಸ್ಲಗಲ್ಲಿಂಗ್ ಮಾಡಿದ ಆರೋಪದ ಮೇಲೆ ದೂರು ದಾಖಲಿಸಿಕೊಂಡು, ಎಫ್ಐಆರ್ ಹಾಕಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆ 2020ರ ಮತದಾನ ಫೆಬ್ರವರಿ 8ರಂದು ನಡೆಯುವುದಕ್ಕೂ ಮುನ್ನ ಈ ಪ್ರಕರಣ ದಾಖಲಾಗಿದೆ.

FIR registered against brother of AAP minister for smuggling of alcohol before Delhi Elections

ಫೆಬ್ರವರಿ 6 ರಂದು ಅಬಕಾರಿ ಇಲಾಖೆಯವರು ನಡೆಸಿದ ದಾಳಿಯಲ್ಲಿ ಸಿಕ್ಕ ಟ್ರಕ್ ನಲ್ಲಿದ್ದ ಅಕ್ರಮ ಮದ್ಯಕ್ಕೂ ಹರೀಶ್ ಗೂ ಸಂಬಂಧವಿದೆ ಎಂದು ದೃಢಪಟ್ಟಿದೆ. ಕೈಲಾಶ್ ಅವರು ನಜಫ್ ಗಢ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಈ ಬಾರಿಯ ಎಎಪಿ ಸ್ಪರ್ಧಿಯಾಗಿದ್ದಾರೆ.


ದೆಹಲಿಯ ಕೇಜ್ರಿವಾಲ್ ಸರ್ಕಾರದ ಸಾರಿಗೆ ಹಾಗೂ ಪರಿಸರ ಖಾತೆ ಸಚಿವರಾಗಿದ್ದಾರೆ. ಕೈಲಾಶ್ ತಮ್ಮ ಹರೀಶ್ ಕೃತ್ಯಕ್ಕೆ ಸೂಕ್ತ ಸಾಕ್ಷಿ ಸಿಕ್ಕಿದ್ದರಿಂದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎಫ್ಐಆರ್ ಹಾಕಿದ್ದಾರೆ. ಹರ್ಯಾಣದ ಮದ್ಯದ ದೊರೆ ಬಲ್ಬೀರ್ ಮನ್ ನಿಂದ ಮದ್ಯದ ಪೂರೈಕೆ ಮಾಡಿಸಿಕೊಂಡಿದ್ದರು, ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+