ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಠೇವಣಿ ಕಳೆದುಕೊಂಡ 63 ಕಾಂಗ್ರೆಸ್ ಅಭ್ಯರ್ಥಿಗಳು

|
Google Oneindia Kannada News

ನವದೆಹಲಿ, ಫೆಬ್ರವರಿ 11: ದೆಹಲಿ ವಿಧಾನಸಭೆ ಚುನಾವಣೆ 2020ರಲ್ಲಿ ಪ್ರಾದೇಶಿಕ ಪಕ್ಷ ಎಎಪಿ ಎದುರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನೆಲಕಚ್ಚಿವೆ. ಕಾಂಗ್ರೆಸ್ ಪಕ್ಷವು ಶೀಲಾ ದೀಕ್ಷಿತ್ ಅವಧಿ ಬಳಿಕ ಮತ್ತೊಮ್ಮೆ ದೆಹಲಿ ಗದ್ದುಗೆ ಏರುವುದಿರಲಿ, ಖಾತೆ ತೆರೆಯುವುದರಲ್ಲೂ ವಿಫಲವಾಗಿದೆ. ಸತತವಾಗಿ ಶೂನ್ಯ ಸಂಪಾದನೆ ಮೂಲಕ ಅಯೋಮಯ ಪರಿಸ್ಥಿತಿಯಲ್ಲಿದೆ.

ಈ ನಡುವೆ ಸತತ ಎರಡನೇ ಬಾರಿಗೆ ಬಿಜೆಪಿ ವಿರೋಧ ಪಕ್ಷ ಸ್ಥಾನವೂ ಸಿಗದಂಥ ಪರಿಸ್ಥಿತಿಗೆ ದೂಡಲ್ಪಟ್ಟಿದೆ. ಇನ್ನು ದೇಶದ ಪುರಾತನ ಪಕ್ಷ ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿದ್ದು, 70 ಅಭ್ಯರ್ಥಿಗಳ ಪೈಕಿ 63 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಅರವಿಂದನ ಕೈ ಹಿಡಿದ ಭಜರಂಗಿ, ಏನಿದು ಹನುಮಾನ್ ಚಾಲೀಸಾ ಮಹಿಮೆಅರವಿಂದನ ಕೈ ಹಿಡಿದ ಭಜರಂಗಿ, ಏನಿದು ಹನುಮಾನ್ ಚಾಲೀಸಾ ಮಹಿಮೆ

ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಅರವಿಂದ್ ಕೇಜ್ರಿವಾಲ್ ಸಜ್ಜಾಗುತ್ತಿದ್ದಾರೆ. ಕಾಂಗ್ರೆಸ್ 15 ವರ್ಷಕ್ಕೂ ಅಧಿಕ ಕಾಲ ರಾಜ್ಯಭಾರ ಮಾಡಿದ್ದ ಕಾಂಗ್ರೆಸ್ ಚುನಾವಣೆ ತಂತ್ರಗಾರಿಕೆಯಲ್ಲಿ ಸತತವಾಗಿ ಸೋಲು ಕಾಣುತ್ತಿದೆ.

Delhi elections: 63 of 70 Congress candidates lost deposits

ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಗಾಂಧಿನಗರ ಕ್ಷೇತ್ರದ ಅರವಿಂದ್ ಸಿಂಗ್ ಲವ್ಲಿ, ಬದ್ಲಿಯ ದೇವೇಂದ್ರ ಯಾದವ್ ಹಾಗೂ ಕಸ್ತೂರ್ ಬಾ ನಗರದಿಂದ ಅಭಿಶೇಕ್ ದತ್ ಅವರು ಮಾತ್ರ ಠೇವಣಿ ಉಳಿಸಿಕೊಂಡಿದ್ದಾರೆ.

ದೆಹಲಿಯ 70 ಕ್ಷೇತ್ರಗಳಲ್ಲಿ 672 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಸುಮಾರ 1.4 ಕೋಟಿ ಮತಗಳು ಅವರ ಹಣೆಬರಹ ನಿರ್ಧರಿಸಿದ್ದಾರೆ.. 70 ಕ್ಷೇತ್ರಗಳ 2,688 ಮತಗಟ್ಟೆಗಳಲ್ಲಿ ಫೆ.8ರಂದು ಚುನಾವಣೆ ನಡೆಸಲಾಗಿತ್ತು.

ಫೆ. 14ರ ನಂಟು ಕಳಚಿಕೊಂಡ ಕೇಜ್ರಿವಾಲ್, ಫೆ.16ಕ್ಕೆ ಮುಹೂರ್ತಫೆ. 14ರ ನಂಟು ಕಳಚಿಕೊಂಡ ಕೇಜ್ರಿವಾಲ್, ಫೆ.16ಕ್ಕೆ ಮುಹೂರ್ತ

ಕಾಂಗ್ರೆಸ್ ಈ ಬಾರಿ ರಾಷ್ಟ್ರೀಯ ಜನತಾ ದಳ ಜೊತೆ ಮೈತ್ರಿ ಮಾಡಿಕೊಂಡು 66 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. 4 ಸ್ಥಾನಗಳನ್ನು ಮಿತ್ರಪಕ್ಷಕ್ಕೆ ಬಿಟ್ಟುಕೊಟ್ಟಿತ್ತು.

ಯಾವುದೇ ಒಂದು ಕ್ಷೇತ್ರದಲ್ಲಿ ಎಣಿಗೆಯಾದ ಮತಗಳ ಪೈಕಿ ಆರನೇ ಒಂದು ಭಾಗದಷ್ಟು ಮತ ಗಳಿಸಲು ಅಭ್ಯರ್ಥಿ ವಿಫಲವಾದರೆ ಆ ಅಭ್ಯರ್ಥಿಯ ಸುರಕ್ಷತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಬಹುತೇಕ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಒಟ್ಟು ಗಣನೆಗೆ ತೆಗೆದುಕೊಂಡ ಮತಗಳ ಪೈಕಿ ಶೇ 5ಕ್ಕಿಂತ ಕಡಿಮೆ ಗಳಿಸಿದ್ದಾರೆ.

ದೆಹಲಿಯ ಕಾಂಗ್ರೆಸ್ ಮುಖ್ಯಸ್ಥ ಸುಭಾಶ್ ಛೋಪ್ರಾ ಮಗಳು ಶಿವಾನಿ ಛೋಪ್ರಾ ಠೇವಣಿ ಕಳೆದುಕೊಂಡಿದ್ದಾರೆ, ಮಾಜಿ ಸ್ಪೀಕರ್ ಯೋಗಾನಂದ್ ಶಾಸ್ತ್ರಿ ಮಗಳು, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪ್ರಿಯಾಂಕಾ ಸಿಂಗ್ 3.6% ಮತ ಗಳಿಸಿದ್ದಾರೆ. ಮಾಜಿ ಕ್ರಿಕೆಟರ್ ಕೀರ್ತಿ ಅಜಾದ್ ಪತ್ನಿ ಪೂನಮ್ ಅಜಾದ್ 2.23% ಮತ ಗಳಿಸಿದ್ದಾರೆ.

ದೇವೇಂದ್ರ ಯಾದವ್ 19.66%, ಅರವಿಂದ್ ಸಿಂಗ್ ಲವ್ಲಿ 19.14%, ಅಭಿಷೇಕ್ ದತ್ 21.42% , ಹರೂನ್ ಯೂಸುಫ್ 4.73% ಮತಗಳನ್ನು ಮಾತ್ರ ಗಳಿಸಿದ್ದಾರೆ. ಎಎಪಿ ತೊರೆದು ಕಾಂಗ್ರೆಸ್ ಸೇರಿದ್ದ ಹಾಲಿ ಶಾಸಕಿ ಅಲ್ಕಾ ಲಂಬಾಗೆ 5.03% ಮತಗಳು ಮಾತ್ರ ದಕ್ಕಿವೆ. ಅತ್ಯಂತ ಕಿರಿಯ ಸ್ಪರ್ಧಿ ಎನಿಸಿದ್ದ ದೆಹಲಿ ವಿವಿಯ ರಾಕಿಗೆ 3.8% ಮತಗಳು ಲಭಿಸಿವೆ.

English summary
Congress' performance in the Delhi assembly elections touched a record low with the party bagging less than 5 per cent votes and 63 of its candidates losing their deposits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X