• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೋನಿಯಾ ಅಳಿಯ ರಾಬರ್ಟ್ ವಾದ್ರಾಗೆ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ

|
   ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ 'ಕಮರಿದ' ಇನ್ನೊಂದು ಹೆಸರು | Oneindia Kannada

   ನವದೆಹಲಿ, ಸೆಪ್ಟೆಂಬರ್ 13: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಆಗಿರುವ ಉದ್ಯಮಿ ರಾಬರ್ಟ್ ವಾದ್ರಾ ವಿದೇಶಕ್ಕೆ ತೆರಳಲು ದೆಹಲಿ ಕೋರ್ಟ್ ಅನುಮತಿ ನೀಡಿದೆ. ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಸೆಪ್ಟೆಂಬರ್ ಇಪ್ಪತ್ತೊಂದರಿಂದ ಅಕ್ಟೋಬರ್ ಎಂಟರ ತನಕ ವ್ಯಾಪಾರದ ವಿಚಾರವಾಗಿ ಸ್ಪೇನ್ ನ ಬಾರ್ಸಿಲೋನಾಗೆ ತೆರಳಲು ಅನುಮತಿ ಕೇಳಿದ್ದರು.

   ಸ್ಪೇನ್ ಹಾಗೂ ಇತರ ಯುರೋಪ್ ದೇಶಗಳಿಗೆ ತೆರಳಲು ರಾಬರ್ಟ್ ವಾದ್ರಾಗೆ ಅನುಮತಿ ನೀಡಿದರೆ ಅದರಿಂದ ತನಿಖೆಗೆ ತೊಂದರೆ ಆಗುತ್ತದೆ ಎಂದು ಗುರುವಾರ ಜಾರಿ ನಿರ್ದೇಶನಾಲಯವು ಕೋರ್ಟ್ ಗೆ ತಿಳಿಸಿತ್ತು. ಆರೋಪಿಯು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಹಾಗೂ ಸಾಕ್ಷ್ಯ ನಾಶ ಮಾಡಬಹುದು ಎಂದು ಇ. ಡಿ. ತಿಳಿಸಿತ್ತು.

   ಸೋನಿಯಾ ಅಳಿಯ ವಾದ್ರಾಗೆ ಅನಾರೋಗ್ಯ; ಆರು ವಾರಗಳ ಕಾಲ ವಿದೇಶದಲ್ಲಿ ಚಿಕಿತ್ಸೆಗೆ ದೆಹಲಿ ಕೋರ್ಟ್ ಅನುಮತಿ

   ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಐವತ್ತು ವರ್ಷದ ರಾಬರ್ಟ್ ವಾದ್ರಾ ವಿಚಾರಣೆ ನಡೆಯುತ್ತಿದೆ. ಲಂಡನ್ ಮೂಲದ ಆಸ್ತಿ ಖರೀದಿ ಮಾಡಿದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ವರೆಗೆ ಹನ್ನೆರಡಕ್ಕೂ ಹೆಚ್ಚು ಬಾರಿ ವಾದ್ರಾ ಅವರನ್ನು ಇ. ಡಿ. ಪ್ರಶ್ನೆ ಮಾಡಿದೆ.

   ರಾಬರ್ಟ್ ವಾದ್ರಾ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲಂಡನ್ ನಲ್ಲಿ ಹನ್ನೆರಡು ಮಿಲಿಯನ್ ಪೌಂಡ್ಸ್ ಮೌಲ್ಯದ ಒಂಬತ್ತು ಆಸ್ತಿಯನ್ನು ಹೊಂದಿದ್ದಾರೆ ಎಂಬುದು ತನಿಖಾಧಿಕಾರಿಗಳ ವಾದ. ಆ ಆಸ್ತಿಯಲ್ಲಿ ಮೂರು ವಿಲ್ಲಾ ಕೂಡ ಒಳಗೊಂಡಿದೆ. ಉಳಿದದ್ದು ವಿಲಾಸಿ ಫ್ಲ್ಯಾಟ್ ಗಳು. ಈ ಎಲ್ಲವನ್ನೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಆಡಳಿತಾವಧಿಯಲ್ಲೇ ಖರೀದಿ ಮಾಡಿದ್ದಾರೆ.

   'ಭವಿಷ್ಯ' ಹೇಳುವ ಹಸುವಿನ ವಿಡಿಯೋ ಹಂಚಿದ ರಾಬರ್ಟ್ ವಾದ್ರಾ

   ಆದರೆ, ಅಕ್ರಮ ಹಣ ವರ್ಗಾವಣೆ ಆರೋಪವನ್ನು ನಿರಾಕರಿಸಿರುವ ರಾಬರ್ಟ್ ವಾದ್ರಾ, ಇದು ರಾಜಕೀಯ ಪ್ರೇರಿತ ಆರೋಪ ಎಂದು ದೂರಿದ್ದಾರೆ. ಕಳೆದ ಏಪ್ರಿಲ್ ಒಂದನೇ ತಾರೀಕು ಷರತ್ತುಬದ್ಧ ಜಾಮೀನು ನೀಡಿತ್ತು ಕೋರ್ಟ್. ದೇಶ ಬಿಟ್ಟು ಹೊರಗೆ ಹೋಗುವ ಮುನ್ನ ದೆಹಲಿ ಕೋರ್ಟ್ ನ ಅನುಮತಿ ಪಡೆಯಬೇಕು ಎಂಬ ಷರತ್ತು ಹಾಕಿತ್ತು.

   English summary
   Money laundering case accused, businessman Robert Vadra allowed to travel abroad by Delhi high court.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X