• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಮ್‌ ಆದ್ಮಿ ಸಚಿವೆ ನಿಜಕ್ಕೂ ಟಾಟಾ-ಬಿರ್ಲಾ ಕುಟುಂಬದವ್ರಾ?

By Srinath
|
Google Oneindia Kannada News

ನವದೆಹಲಿ, ಜ.6- ಆಮ್ ಆದ್ಮಿ ಪಕ್ಷದ ದಿಲ್ಲಿ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ರಾಖಿ ಬಿರ್ಲಾ ಅವರ ಕಾರಿನ ಮೇಲೆ ನಿನ್ನೆ ಸಂಜೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಸುದ್ದಿ ಪ್ರಕಟವಾಗುತ್ತಿದ್ದಂತೆ 'ಓಹೋ! ಹೌದಾ, ಆಮ್ ಆದ್ಮಿಗಳ ಸರಕಾರದಲ್ಲಿ ಟಾಟಾ-ಬಿರ್ಲಾಗೆ ಕುಟಂಬದವರೂ ಇದ್ದಾರಾ? ಎಂದು ಓದುಗರು ಕೇಳತೊಡಗಿದ್ದಾರೆ.

ಹುಟ್ಟಾ ಬಿರ್ಲಾ ಮನೆತನದವರೇನೂ ಅಲ್ಲ !:
ಕುತೂಹಲವೇರಿ ನಾವೂ ರಾಖಿ ಬಿರ್ಲಾ (Rakhi Birla) ಅವರ ಬೆನ್ನೇರಿದಾಗ... ಸಾಕಷ್ಟು ವಿಷಯಗಳು ಹೊರಬಿದ್ದವು. ಇಷ್ಟಕ್ಕೂ ಆಮ್‌ ಆದ್ಮಿ ಸಚಿವೆ ಟಾಟಾ-ಬಿರ್ಲಾಗೆ ಕುಟಂಬದವರಾ? ಎಂದು ಕೇಳಿದಾಗ... ಅಂಥದ್ದೇನೂ ಇಲ್ಲ. ಅಸಲಿಗೆ ಯುವ ಸಚಿವೆ ರಾಖಿ ಬಿರ್ಲಾಗೂ, ಅಪ್ಪಟ ಆಗರ್ಭ ಶ್ರೀಮಂತ ಬಿರ್ಲಾ ಕುಟುಂಬಕ್ಕೂ ತೃಣಮಾತ್ರ ಸಂಬಂಧವೂ ಇಲ್ಲ. ಅವರೇ ಬೇರೆ, ಇವರೇ ಬೇರೆ! ಮತ್ತೆ ಹ್ಯಾಗೆ ಬಿರ್ಲಾ ಹೆಸರು ರಾಖಿ ಜತೆ ಗಂಟುಹಾಕಿಕೊಂಡಿತು, ಅಂದರೆ?


ಶಾಲಾ ಶಿಕ್ಷಕರ ಯಡವಟ್ಟಿನಿಂದಾಗಿ ಬಡ ಕುಟುಂಬದ ರಾಖಿ, ತಮ್ಮ 16ನೇ ವಯಸ್ಸಿಗೆ ರಾಖಿ ಬಿರ್ಲಾ ಆಗಿದ್ದಾರೆ. ಏನಾಯ್ತು ಅಂದರೆ ರಾಖಿ ಅವರು ದಿಲ್ಲಿಯ ಶೀಲಾ ಮತ್ತು ಭುಪೇಂದ್ರ ಸಿಂಗ್ ಬಿಧ್ಲಾಲ್ ದಂಪತಿಯ 4 ಪುತ್ರಿಯರ ಪೈಕಿ ಕೊನೆಯವರು. ಇಲ್ಲಿ ರಾಖಿ ಅವರ ಅಪ್ಪ Bhupendra Singh Bidhlan ಹೆಸರನ್ನು ಇಂಗ್ಲೀಷಿನಲ್ಲಿ ಹೇಳಲೇಬೇಕಾದ ಅನಿವಾರ್ಯತೆ ಇದೆ. ಏಕೆಂದರೆ

ರಾಖಿ 10ನೇ ತರಗತಿಯಲ್ಲಿ ಓದು ಮುಗಿಸಿದಾಗ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ ನೀಡಬೇಕಾದ ಶಾಲಾ ಶಿಕ್ಷಕರು ರಾಖಿಯ ಹೆಸರಿನ ಜತೆಗೆ ಅವರಪ್ಪನ surname ಅನ್ನೂ (Bidhlan) ಸೇರಿಸಿಬರೆದರು. ಆದರೆ ಬರೆಯುವಾಗ Bidhlan ಬದಲಿಗೆ ಬಿರ್ಲಾ ಅಂತ ಬರೆದುಬಿಟ್ಟರು. ಅಂದಿನಿಂದ ಯಾವುದೇ ಐಭೋಗ ಕಾಣದಿದ್ದರೂ ರಾಖಿ, ರಾಖಿ ಬಿರ್ಲಾ ಆಗಿ ಮಾರ್ಪಾಡುಗೊಂಡರು.

ಉಳಿದಂತೆ ರಾಖಿ ಬಿರ್ಲಾ ಬಗ್ಗೆ ಒಂದಿಷ್ಟು :

* ರಾಖಿ ಬಿರ್ಲಾ ವಾಲ್ಮೀಕಿ ಜನಾಂಗಕ್ಕೆ ಸೇರಿದವರು.
* ಅಪ್ಪ Bhupendra Singh Bidhlan ಒಂದಷ್ಟು ಕಾಲ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದವರು. ಆದರೆ 2011ರಲ್ಲಿ ಜನ ಲೋಕಪಾಲ್ ಚಳವಳಿ ಶುರುವಾಗುತ್ತಿದ್ದಂತೆ ಕಾಂಗ್ರೆಸ್ ಬಿಟ್ಟು ಅಣ್ಣಾಗೆ ಜೈ ಅಂದರು.
* ಅರವಿಂದ್ ಕೇಜ್ರಿವಾಲಾ ಸಂಪುಟದಲ್ಲಿ ಅತ್ಯಂತ ಕಿರಿಯ ಸಚಿವೆ.
* ಏಕೈಕ ಮಹಿಳಾ ಸಚಿವೆ.
* ಶೀಲಾ ದೀಕ್ಷಿತರ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಮತ್ತು ನಾಲ್ಕು ಬಾರಿ ಶಾಸಕರಾಗಿದ್ದ ರಾಜ್ ಕುಮಾರ್ ಚೌಹಾನ್ ಅವರನ್ನು 10,500 ಮತಗಳಿಂದ ಮಣ್ಣುಮುಕ್ಕಿಸಿದ giant killer.
* ರಾಜಕೀಯಕ್ಕೆ ಧುಮುಕುವ ಮುನ್ನ ಪತ್ರಕರ್ತೆಯಾಗಿದ್ದವರು!

English summary
Delhi Women and Child Development minister, Rakhi Birla's car was attacked yeaterday evening by some unidentified persons in Mangolpuri area here but she escaped unharmed. In the meanwhile it is to be noted that Minister Rakhi Birla does not belong to India's business man Birla family. Birla's last name which reminds you of one of India's business families, got actually stuck with her after her school teacher made a mistake while preparing her Class X certificate and wrote Birla instead of Bidhlan, which is her actual surname (Raj Kumar Chauhan).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X