ಬಸ್ಕಿ ಹೊಡೆಯಿರಿ ಉಚಿತವಾಗಿ ಫ್ಲಾಟ್‌ಫಾರ್ಮ್ ಟಿಕೆಟ್ ಪಡೆಯಿರಿ

ನವದೆಹಲಿ, ಫೆಬ್ರವರಿ 23 : ಭಾರತೀಯ ರೈಲ್ವೆ ಪ್ರಯಾಣಿಕರ ಫಿಟ್ ನೆಸ್ ಪರೀಕ್ಷೆ ಮಾಡಲು ಮುಂದಾಗಿದೆ. ಮೂವತ್ತು ಬಾರಿ ಬಸ್ಕಿ ಹೊಡೆದರೆ ಫ್ಲಾಟ್‌ಫಾರ್ಮ್ ಟಿಕೆಟ್‌ ಅನ್ನು ಉಚಿತವಾಗಿ ನೀಡಲಿದೆ.

ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಇಂತಹ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ರೈಲ್ವೆ ಇಲಾಖೆ ಜಾರಿಗೆ ತಂದಿದೆ. ಸ್ಕ್ವಾಟ್‌ ಯಂತ್ರವನ್ನು ರೈಲು ನಿಲ್ದಾಣದಲ್ಲಿ ಅಳವಡಿಕೆ ಮಾಡಲಾಗಿದೆ.

ಫ್ಲಾಟ್‌ಫಾರ್ಮ್‌ ಟಿಕೆಟ್ ಬೇಕಾದ ವ್ಯಕ್ತಿ ಯಂತ್ರದ ಮುಂದೆ 180 ಸೆಕೆಂಡ್‌ನಲ್ಲಿ 30 ಬಾರಿ ಬಸ್ಕಿ ಹೊಡೆದರೆ ಯಾವುದೇ ಹಣ ಪಾವತಿ ಮಾಡದೇ ಟಿಕೆಟ್ ಪಡೆಯಬಹುದು.

Cost Of Platform Ticket Is 30 Squats In Delhi Station

ಗುರುವಾರ ರೈಲು ನಿಲ್ದಾಣದಲ್ಲಿ ಯಂತ್ರವನ್ನು ಅಳವಡಿಕೆ ಮಾಡಲಾಗಿದೆ. ಇದುವರೆಗೂ ಸುಮಾರು 200 ಜನರು ಬಸ್ಕಿ ಹೊಡೆಯಲು ಪ್ರಯತ್ನ ನಡೆಸಿದ್ದಾರೆ. 30 ಬಾರಿ ಬಸ್ಕಿ ಹೊಡೆದು ಈಗಾಗಲೇ ವ್ಯಕ್ತಿಯೊಬ್ಬರು ಉಚಿತವಾಗಿ ಟಿಕೆಟ್ ಪಡೆದಿದ್ದಾರೆ.

ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ, "ಇದು ಸ್ವಯಂ ಚಾಲಿತ ಯಂತ್ರ. ಯಾವುದೇ ಬಟನ್ ಒತ್ತುವ ಅಗತ್ಯವಿಲ್ಲ. ಬಸ್ಕಿ ಹೊಡೆಯಲು ಆರಂಭಿಸುತ್ತಿದ್ದಂತೆ ಯಂತ್ರ ಎಣಿಕೆ ಆರಂಭಿಸುತ್ತದೆ. ಸರಿಯಾಗಿ ಬಸ್ಕಿ ಹೊಡೆಯುತ್ತಿದ್ದಿರೋ ಇಲ್ಲವೋ? ಎಂದು ಕೂಡ ಅದು ಗಮನಿಸುತ್ತದೆ".

"ಭಾರತದ ದೇಶದಲ್ಲಿ ದೆಹಲಿಯ ರೈಲು ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಈ ಯಂತ್ರವನ್ನು ಆಳವಡಿಕೆ ಮಾಡಲಾಗಿದೆ. ಆದರೆ, ವಿದೇಶದಲ್ಲಿ ಇಂತಹ ಯಂತ್ರಗಳು ಸಾಮಾನ್ಯವಾಗಿವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.

ವ್ಯಕ್ತಿಯೊಬ್ಬರು ಬಸ್ಕಿ ಹೊಡೆಯುವ ವಿಡಿಯೋವನ್ನು ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+